Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಪ್ರಧಾನಿ ಮನೆಯೇ ಲೂಟಿ !

ಢಾಕಾ : ಕೆಲವು ವರ್ಷ ಹಿಂದೆ ಶ್ರೀಲಂಕಾ, ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿದ್ದವರ ಮನೆ ಲೂಟಿ ನಡೆಸಲಾಗಿತ್ತು. ಆಗ ಶ್ರೀಲಂಕಾರ ನುಗ್ಗಿದ್ದ ಪ್ರತಿಭಟನಾಕಾರರು ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆದಿದ್ದರು. ಇನ್ನು ಅಫ್ಘಾನಿಸ್ತಾನ ಅಧ್ಯಕ್ಷರ ಅರಮನೆ, ಮಕ್ಕಳ ಆಟಕೆ ಸಹಾ ಎಸೆದಿದ್ದರು. ಇದೀಗ ಬಾಂಗ್ಲಾದೇಶದಲ್ಲಿ ಅಂಥ ಪ್ರಸಂಗ ಕಂಡು ಬಂದಿದೆ.

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತದ ವಿರುದ್ಧ ಸಿಡಿದೆದ್ದ ಪ್ರತಿಭಟನಾಕಾರರು ಹಾಗೂ ವಿದ್ಯಾರ್ಥಿಗಳು, ಸೋಮವಾರ ಹಸೀನಾ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ್ದು, ಮನೆಯಲ್ಲಿದ್ದ ಕಂಡಕಂಡ ವಸ್ತುಗಳನ್ನು ದೋಚಿದ್ದಾರೆ ಅವರ ಬೆಡ್‌ರೂಮಿಗೆ ನುಗ್ಗಿ ಪ್ರಧಾನಿ ಮಲಗುವ ಬೆಡ್‌ ಮೇಲೆ ಮಲಗಿ ಆನಂದಿಸಿದ್ದಾರೆ. ಸಂಸತ್ತಿಗೂ ನುಗ್ಗಿ ಸಂಸದರ ಸೀಟು, ಸಭಾಧ್ಯಕ್ಷ ಪೀಠ, ಪ್ರಧಾನಿ ಕೂರುವ ಸ್ಥಾನದಲ್ಲಿ ಕೂತು ಮಜಾ ಮಾಡಿದ್ದಾರೆ.

ಹಸೀನಾ ಸರ್ಕಾರದ ಔದ್ಯೋಗಿಕ ಮೀಸಲು ನೀತಿ ವಿರುದ್ದ ಕೆಲವು ದಿನಗಳಿಂದ ಬಾಂಗ್ಲಾದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದು, ಸೋಮವಾರ ತೀವ್ರ ಸ್ವರೂಪ ಪಡೆದು ಕೊಂಡಿತ್ತು. ಪ್ರತಿಭಟನಾಕಾರರು ಹಸೀನಾ ನಿವಾಸಕ್ಕೆ ನುಗ್ಗಲು ಯತ್ನಿಸಿದಾಗ ಅಪಾಯದ ಮುನ್ಸೂಚನೆ ಅರಿತ ಹಸೀನಾ ಸೇನಾ ವಿಮಾನದಲ್ಲಿ ವಿದೇಶಕ್ಕೆ ಪಲಾಯನ ಆದರು.

ಇದೇ ಸಮಯ ಕಾಯುತ್ತಿದ್ದ ಪ್ರತಿಭಟನಾಕಾರರು ಪ್ರಧಾನಿ ನಿವಾಸದಲ್ಲಿನ ಹೂಕುಂಡಗಳು, ಕೋಳಿ, ಮೀನು, ತರಕಾರಿಗಳು ಮತ್ತು ಪೀಠೋಪಕರಣಗಳನ್ನು ದೋಚಿದ್ದಾರೆ. ಕೆಲ ವರು ಹಸೀನಾ ಅವರ ಕಪಾಟು ತೆಗೆದು ಸೀರೆ ಹಾಗೂ ಇತರ ವಸ್ತುಗಳನ್ನೂ ದೋಚಿದ್ದಾರೆ.

ಮಧ್ಯಾಹ್ನವಾದ ಕಾರಣ ಪ್ರಧಾನಿ ನಿವಾಸದಲ್ಲಿ ನಿವಾಸಿಗಳು ಹಾಗೂ ಅತಿಥಿಗಳಿಗೆ ಸಿದ್ದಪಡಿಸಿ ಇಡಲಾಗಿದ್ದ ರುಚಿಯಾದ ಭೋಜನವನ್ನು ಪ್ರತಿಭಟನಾಕಾರರು ಸವಿದಿದ್ದಾರೆ. ಬಳಿಕ ಹಸೀನಾ ಅವರ ಶಯನಗೃಹಕ್ಕೆ ಹೋಗಿ ಅವರು ಮಲಗುವ ಹಾಸಿಗೆ ಮೇಲೆ ಬಿದ್ದು ಹೊರಳಾಡಿದ್ದಾರೆ. ಇನ್ನು ಕೆಲವರು ಹಸೀನಾ ನಿವಾಸದಲ್ಲಿರುವ ಪುಟ್ಟ ಕೊಳದಲ್ಲಿನ ಬೋಟ್ ನಲ್ಲಿ ಯಾನ ಮಾಡಿ ಸಂಭ್ರಮಿಸಿದ್ದಾರೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?