ಬೆಳಗಾವಿ : ನಗರದ ಕೆಎಲ್ಇ ಸಂಸ್ಥೆಯ,ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ ) ಮಹಾವಿದ್ಯಾಲಯದಲ್ಲಿ ಕಾಲೇಜು ಗ್ರಂಥಾಲಯ ಮಾಹಿತಿ ಕೇಂದ್ರದ ಮತ್ತು ಕಾಲೇಜಿನ ಆಂತರಿಕ ಗುಣಮಟ್ಟ ಕೋಶ ಇವುಗಳ ಸಂಯುಕ್ತ ಆಶ್ರಯದಲ್ಲಿ ಆನ್ಲೈನ್ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ತಮ ಗುಣಮಟ್ಟದ ಸಂಶೋಧನ ಪ್ರಬಂಧಗಳನ್ನು ಬರೆಯುವುದು ಹೇಗೆ ?ಎಂಬ ವಿಷಯದ ಮೇಲೆ ಒಂದು ದಿನದ ಉಪನ್ಯಾಸವನ್ನು ದಿನಾಂಕ 15/07/2026 ರಂದು ಮಧ್ಯಾಹ್ನ 3:00 ಗಂಟೆಗೆ ಮಹಾವಿದ್ಯಾಲಯದ ಸರ್ ಸಿ ವಿ ರಾಮನ್ ಸಭಾಂಗಣದಲ್ಲಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಕೆ ಎಲ್ ಎಸ್ ಸಂಸ್ಥೆ ಯ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಮುಖ್ಯ ಗ್ರಂಥಾಲಯದ ಮುಖ್ಯಸ್ಥ ಡಾ. ಪ್ರವೀಣ ಹುಲ್ಲೋಳಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯ ಸದುಪಯೋಗ ಪಡೆದುಕೊಳ್ಳಬೇಕು.ಸಂಶೋಧನೆ ಮಾಡುವ ಸಂದರ್ಭದಲ್ಲಿ ಗಣಕೀಕೃತ ಗ್ರಂಥಾಲಯ ಮೌಲಿಕ ಕೃತಿಗಳನ್ನು ಉಪಯೋಗಿಸಿ ಕೊಳ್ಳಬೇಕು. ಇ ಪುಸ್ತಕ ಗಳನ್ನು ಪರಿಚಯ ಮಾಡಿಕೊಳ್ಳಬೇಕು. ಸಂಶೋಧನೆ ಕೃತಿ ರಚಿಸುವಾಗ ಅನೇಕ ಲೇಖನಗಳನ್ನು ಬರೆಯಬೇಕು. ಸಾರಲೇಖನ ಸರಿಯಾಗಿ ತಯಾರಿಸಬೇಕು. ಗ್ರಂಥದ ಕೊನೆಯಲ್ಲಿ ಅಡಿಟಿಪ್ಪಣಿಗಳನ್ನು ನೀಡಬೇಕು. ಸಂಶೋಧನೆ ಮಾಡುವಾಗ ಯಾವುದೇ ರೀತಿಯ ದೋಷಗಳನ್ನು ಮಾಡಬಾರದು. ಅಂಕಿ ಅಂಶಗಳು ತಪ್ಪಾಗಿ ನಮೂದಿಸಿ ಬಾರದೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಜೆ ಎಸ್ ಕವಳೇಕರ ಮಾತನಾಡಿ , ಪ್ರಸ್ತುತ ದಿನಮಾನದಲ್ಲಿ ಸಂಶೋಧರ ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ಮಾಡಬೇಕು. ಹೊಸ ಹೊಸ ಹೊಸ ವಿಷಯಗಳಲ್ಲಿ ಗುಣಾತ್ಮಕವಾದ ಲೇಖನವನ್ನು ರಚಿಸಬೇಕು. ಮಾರ್ಗದರ್ಶಕರ ಅಣತಿಯಂತೆ ಮಹಾಪ್ರಬಂಧಗಳನ್ನು ಬರೆಯಬೇಕು.
ಕರೆ ನೀಡಿದರು.
ಅರ್ಪಿತಾ ಕಾರಜೋಳ ಹಾಗೂ ಸಂಗಡಿಗರು ಪ್ರಾರ್ಥಸಿದರು. ಡಾ.ಜ್ಯೋತಿ ಎಸ್ ಕವಳೇಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿನಾಯಕ ಸವಟಗಿ ಅತಿಥಿಗಳನ್ನು ಪರಿಚಯಿಸಿದರು.ಡಾ. ವಿನಯ ಕುಮಾರ ಎಂ ವಂದಿಸಿದರು. ಪ್ರೊ. ಅಲ್ಪಾಜ ಬಾಗವಾನ ನಿರೂಪಿಸಿದರು.
ಸಮಾರಂಭದಲ್ಲಿ ಮಹಾವಿದ್ಯಾಲಯ ಎಲ್ಲಾ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.