Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಖ್ಯಾತನಾಮ ಪತ್ರಕರ್ತರ ನೇಮಕ

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರನ್ನು ರಾಜ್ಯ ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಸುವರ್ಣ ನ್ಯೂಸ್ ಔಟ್‌ಪುಟ್ ಎಡಿಟರ್ ಶ್ರೀಮತಿ ಎಂ.ಸಿ. ಶೋಭಾ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ಈ ಕುರಿತು ಕರ್ನಾಟಕ ಸಚಿವಾಲಯದಿಂದ ಹೊರಡಿಸಲಾದ ಅಧಿಸೂಚನೆಯಲ್ಲಿ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ 11 ಜನ ಹಿರಿಯ ಪತ್ರಕರ್ತರು ಮತ್ತು ವರದಿಗಾರರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಸುವರ್ಣ ನ್ಯೂಸ್ ಔಟ್‌ಪುಟ್ ಮುಖ್ಯಸ್ಥೆ ಶ್ರೀಮತಿ ಎಂ.ಸಿ. ಶೋಭಾ ಹಾಗೂ ಕುಂದಪ್ರಭ ಪತ್ರಿಕೆ ಸಂಪಾದಕ ಯು. ಸುರೇಂದ್ರ ಶೆಣೈ ಅವರು ಹನ್ನೊಂದು ಸದಸ್ಯರ ಬಳಗದಲ್ಲಿದ್ದಾರೆ. ಜೊತೆಗೆ, ಎರಡು ಪತ್ರಿಕೋದ್ಯಮ ಕಾಲೇಜುಗಳ ಮುಖ್ಯಸ್ಥರನ್ನು ಪದನಿಮಿತ್ತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಈ ಸದಸ್ಯರು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದವರು:
ಶೋಭಾ ಎಂ.ಸಿ., ಬೆಂಗಳೂರು
ಶಿವಾನಂದ ತಗಡೂರು, ಬೆಂಗಳೂರು
ಎಂ.ಇ. ಮಂಜುನಾಥ್, ದಾವಣಗೆರೆ
ಸಂಗಮೇಶ ಚೂರಿ, ವಿಜಯಪುರ
ಜೆ. ಅಬ್ಬಾಸ್‌ ಮುಲ್ಲಾ, ಧಾರವಾಡ
ಹೆಚ್.ವಿ. ಕಿರಣ್, ಬೆಂಗಳೂರು
ಅನಿಲ್ ವಿ. ಗೆಜ್ಜಿ, ಬೆಂಗಳೂರು
ಕೆಂಚೇಗೌಡ, ಬೆಂಗಳೂರು
ಯು. ಸುರೇಂದ್ರ ಶೆಣೈ, ಕುಂದಾಪುರ
ರವಿ ಕೋಟಿ, ಮೈಸೂರು
ರಶ್ಮಿ ಎಸ್, ಬೆಂಗಳೂರು
ಪದನಿಮಿತ್ತ ಸದಸ್ಯರು
ಮೈಸೂರು ಮಾನಸ ಗಂಗೋತ್ರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು
ಮಂಗಳೂರು ಮಂಗಳ ಗಂಗೋತ್ರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕನ್ನಡ ಸಾಹಿತ್ಯ ಪರಿಷತ್ ಸರ್ಜರಿಗೆ ಹಾರ್ಟ್ ಸರ್ಜನ್ ಬೆಳಗಾವಿ ಮಣ್ಣಿನ ಮಗಳು ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಸಜ್ಜು ಚುನಾವಣೆ ಸ್ಪರ್ಧೆಗೆ ನಿರ್ಧಾರ | ಗೆದ್ದರೆ ಪ್ರಥಮ ಅಧ್ಯಕ್ಷೆ, ತೋಂಟದಾರ್ಯ ಮಠದ ಜಗದ್ಗುರುಗಳು ಬೆಂಬಲಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿಅಯೋಧ್ಯೆ ರಾಮಮಂದಿರದ ಮೊದಲ ಸಿಇಒ ಆಗಿ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರ ನೇಮಕಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿ8 ಜನ ಮೊಬೈಲ್ ಕಳ್ಳರನ್ನು ಬಂಧಿಸಿದ ಕಟಕೋಳ ಪೊಲೀಸರು200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ : ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಮನೆಗೆ ಕರೆತಂದ ಕುಟುಂಬ !ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ್ದ ಅಜ್ಜಿಯ ಬಂಧನಪುತ್ರಿಯರ ಶಿಕ್ಷಣಕ್ಕಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡಿ ʼಮ್ಯಾರಥಾನ್‌ʼನಲ್ಲಿ ಮೊದಲ ಸ್ಥಾನ ಪಡೆದ 47 ವರ್ಷದ ತಾಯಿ !ರಷ್ಯಾ ಅತಿಹೆಚ್ಚು ತೈಲ ಉತ್ಪಾದನೆ ಮಾಡುತ್ತಿದ್ರೂ ಈಗ ಅದಕ್ಕೇ ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್ ಪೂರೈಸುತ್ತಿರುವ ಭಾರತ ! ಕಾರಣ ?ವೈಶ್ಯ ಸಮಾಜದ ಏಕತೆ, ಪ್ರಗತಿಗೆ ಸೆ.6ರಂದು ಬೆಳಗಾವಿಯಲ್ಲಿ ವೈಶ್ಯ ಸಮ್ಮೇಳನ