Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ದೀಪಾವಳಿಗೂ ಮೊದಲೇ ಬಹುದೊಡ್ಡ ಗಿಫ್ಟ್ ಘೋಷಿಸಿದ ಮೋದಿ

 

ದೆಹಲಿ :
ದೀಪಾವಳಿ ಹಬ್ಬಕ್ಕೂ ಮೊದಲೇ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ಘೋಷಿಸಿದೆ. ಕೋವಿಡ್ ಸಂದರ್ಭದಲ್ಲಿ ಆರಂಭಗೊಂಡ ಉಚಿತ ಪಡಿತರ ಕಾರ್ಯಕ್ರಮನ್ನು ಇದೀಗ ಮುಂದಿನ 5 ವರ್ಷಕ್ಕೆ ವಿಸ್ತರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
2028 ರ ವರೆಗೆ ಬರೋಬ್ಬರಿ 80 ಕೋಟಿ ಭಾರತೀಯರಿಗೆ ಪ್ರತಿ ತಿಂಗಳು 5 ಕೆಜಿ ಗೋಧಿ ಅಥವಾ ಅಕ್ಕಿ ವಿತರಣೆ ಯೋಜನೆ ವಿಸ್ತರಣೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಛತ್ತೀಸಘಢ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಈ ಮಹತ್ವದ ಘೋಷಣೆ ಮಾಡಿದ್ದಾರೆ.

ಭಾರತದ 8 ಕೋಟಿ ಜನರು ಗರೀಬ್ ಕಲ್ಯಾಣ್ ಅನ್ನೋ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಈ ಯೋಜನೆ ಆರಂಭಿಸಲಾಗಿತ್ತು. ಉಚಿತವಾಗಿ ಪಡಿತರ ನೀಡುವ ಮೂಲಕ ದೇಶದ ಜನತೆ ಹಸಿವಿನಿಂದ ಇರಬಾರದು ಎಂಬ ಮಹತ್ ಯೋಜನೆ ಜಾರಿಗೆ ಬಂದಿತ್ತು. ಕೋವಿಡ್ ನಿಯಂತ್ರಣದ ಬಳಿಕವೂ ಈ ಯೋಜನೆ ವಿಸ್ತರಣೆಯಾಗತ್ತಲೇ ಬಂದಿತ್ತು. ಕೊನೆಯದಾಗಿ ಕೇಂದ್ರ ಕ್ಯಾಬಿನೆಟ್ ಸಭೆ ನಡೆಸಿ ಗರೀಬ್ ಕಲ್ಯಾಣ್ ಯೋಜನೆ ಡಿಸೆಂಬರ್ 2023ರ ವರಗೆ ವಿಸ್ತರಿಸಲು ಅನುಮೋದನೆ ನೀಡಿತ್ತು. ಇದೀಗ ಈ ಯೋಜನೆಯನ್ನು ಮತ್ತೆ 5 ವರ್ಷಕ್ಕೆ ವಿಸ್ತರಿಸುವುದಾಗಿ ಮೋದಿ ಘೋಷಿಸಿದ್ದಾರೆ.

 

ನಾನು ಬಡತನ ನೋಡಿದ್ದೇನೆ. ಬಡತನದಲ್ಲೇ ಬೆಳೆದಿದ್ದೇನೆ. ನಾನು ನಿಮ್ಮ ಮಗ. ಈ ಸಂದರ್ಭದಲ್ಲಿ ದೇಶದ ಜನತೆಗೆ ಮಾತನ್ನು ಹೇಳುತ್ತಿದ್ದೇನೆ. ದೇಶದ 80 ಕೋಟಿ ಜನತೆ ಗರೀಬ್ ಕಲ್ಯಾಣ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಯೋಜನೆಯನ್ನು 2028ರ ವರೆಗೆ ವಿಸ್ತರಿಸಲಾಗುತ್ತದೆ ಎಂದು ಮೋದಿ ಘೋಷಿಸಲಾಗಿದೆ.

2020ರ ಮಾರ್ಚ್ ನಲ್ಲಿ ಈ ಯೋಜನೆಯನ್ನು 3 ತಿಂಗಳಿಗೆಂದು ಘೋಷಿಸಲಾಗಿತ್ತು. ಎರಡನೇ ಹಂತದಲ್ಲಿ 2020ರ ಜುಲೈ-ನವೆಂಬರ್‌ಗೆ, 3ನೇ ಹಂತದಲ್ಲಿ 2021-ರ ಮೇ- ಜೂನ್‌ಗೆ, 4ನೇ ಹಂತದಲ್ಲಿ 2021ರ ಜುಲೈ-ನವೆಂಬರ್‌, 5ನೇ ಹಂತದಲ್ಲಿ 2021ರ ಡಿಸೆಂಬರ್‌ನಿಂದ 2022ರ ಮಾರ್ಚ್ ಗೆ ವಿಸ್ತರಣೆ ಮಾಡಲಾಗಿತ್ತು. 6ನೇ ಹಂತದಲ್ಲಿ 2022ರ ಮಾರ್ಚ್‌ನಿಂದ -ಸೆಪ್ಟೆಂಬರ್‌ ವರೆಗೆ ವಿಸ್ತರಣೆ ಮಾಡಲಾಗಿತ್ತು. ಬಳಿಕ ಡಿಸೆಂಬರ್‌ಗೆ ಮುಂದುವರಿಸಲಾಗಿತ್ತು.

ಡಿಸೆಂಬರ್ 2022 ರಲ್ಲಿ ಮತ್ತೆ ಕ್ಯಾಬಿನೆಟ್ ಸಭೆ ನಡೆಸಿದ ಪ್ರಧಾನಿ ಮೋದಿ, ಒಂದು ವರ್ಷಕ್ಕೆ ವಿಸ್ತರಣೆ ಮಾಡಿದ್ದರು. 2023 ರ ಡಿಸೆಂಬರ್ ಅಂತ್ಯದ ವರೆಗೆ ಯೋಜನೆ ವಿಸ್ತರಿಸಲಾಗಿತ್ತು. ಇದೀಗ ಮತ್ತೈದು ವರ್ಷಕ್ಕೆ ಈ ಯೋಜನೆ ವಿಸ್ತರಿಸುವುದಾಗಿ ಮೋದಿ ಘೋಷಣೆ ಮಾಡಲಾಗಿದೆ. ಶೀಘ್ರದಲ್ಲೇ ಈ ಕುರಿತು ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಂಸದ ಶೆಟ್ಟರ್ ಸಭೆವಿದ್ಯಾರ್ಥಿಗಳು ಗಣಕೀಕೃತ ಗ್ರಂಥಾಲಯ ಸದುಪಯೋಗ ಪಡಿಸಿಕೊಳ್ಳಬೇಕು: ಡಾ.ಪ್ರವೀಣ ಹುಲ್ಲೋಳಿಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ ಜಾರಿ : ಯಾವ ವಸ್ತುಗಳು ಅಗ್ಗವಾಗಲಿವೆ ? ಯಾವ್ಯಾವುದು ದುಬಾರಿಯೇ ಇರಲಿವೆ ?ಪ್ರಧಾನಿ ನಿವಾಸದಲ್ಲಿ ಬಿಜೆಪಿ ಉನ್ನತ ನಾಯಕರ ಸಭೆ: ಸಂಪುಟ ಪುನಾರಚನೆ ಕುತೂಹಲಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ರಾಜ್ಯದಲ್ಲಿ ಎಸ್‌ಐಆರ್ ಅವಧಿ ವಿಸ್ತರಣೆ: ಆ. 8 ರವರೆಗೆ ಗಣತಿ ನಮೂನೆ ವಿತರಣೆನಮ್ಮ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ದಾರಿದೀಪ: ಪ್ರೊ ಜಯಶ್ರೀ ಅಬ್ಬಿಗೇರಿ ಅಭಿಮತಬಿಡದಿ ಟೌನ್ ಶಿಪ್; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಅಭಯನಾಡಗೀತೆಯಲ್ಲಿ ಬೌದ್ಧ ಪದ | ಸೇರ್ಪಡೆಗೆ ತಜ್ಞರ ಶಿಫಾರಸು-ಪಾರಸಿಕ ಜೈನ ಬೌದ್ಧರುದ್ಯಾನ ಎಂದು ಮಾರ್ಪಡಿಸಿ: ಸರ್ಕಾರಕ್ಕೆ ವರದಿ