Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಇಂದೇ ಪರಪ್ಪನ ಅಗ್ರಹಾರಕ್ಕೆ ಹೋಗ್ತಾರಾ ದರ್ಶನ್ ಆ್ಯಂಡ್ ಗ್ಯಾಂಗ್ ?

ಬೆಂಗಳೂರು : ನಟ ದರ್ಶನ್ ಹಾಗೂ ಗ್ಯಾಂಗ್​ನಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪೊಲೀಸರು ಪ್ರಮುಖ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಇದರಿಂದ ದರ್ಶನ್, ಪವಿತ್ರಾ ಗೌಡ ಹಾಗೂ ಇತರರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿಗಳನ್ನು ಇಂದು (ಜೂನ್ 15) ಪೊಲೀಸರು ನ್ಯಾಯಾಧೀಶರ ಎದುರು ಹಾಜರಿಪಡಿಸುವ ಸಾಧ್ಯತೆ ಇದೆ. ಆಗ ದರ್ಶನ್ ಭವಿಷ್ಯ ನಿರ್ಧಾರ ಆಗಲಿದೆ.

ದರ್ಶನ್ ಪ್ರಭಾವಿ ವ್ಯಕ್ತಿ. ಒಂದೊಮ್ಮೆ ಇವರನ್ನು ಜೈಲಿನಿಂದ ಬಿಡುಗಡೆ ಮಾಡಿದರೆ ತನಿಖೆಗೆ ಅಡ್ಡಿ ಉಂಟಾಗುತ್ತದೆ ಎಂದು ಪೊಲೀಸರು ನ್ಯಾಯಾಧೀಶರ ಎದುರು ಹೇಳಬಹುದು. ಆಗ ದರ್ಶನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದು. ಕೋರಮಂಗಲದ ಜಡ್ಜ್​​​​ ನಿವಾಸದಲ್ಲಿ ದರ್ಶನ್ ಭವಿಷ್ಯ ನಿರ್ಧಾರ ಆಗಲಿದೆ. ಸದ್ಯಕ್ಕೆ ಬಿಡುಗಡೆ ಅನುಮಾನ ಎನ್ನಲಾಗುತ್ತಿದೆ.

ಕೊಲೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳ ಸ್ವಇಚ್ಛಾ ಹೇಳಿಕೆ ದಾಖಲು ಮಾಡಲಾಗಿದೆ. ಕೊಲೆ ನಡೆದ ಸ್ಥಳ, ಮೃತದೇಹ ಪತ್ತೆಯಾದ ಸ್ಥಳ, ಕಿಡ್ನ್ಯಾಪ್ ಆದ ಸ್ಥಳದಲ್ಲಿ ಮಹಜರು ಕೆಲಸ ಪೂರ್ಣಗೊಂಡಿದೆ. ತಾಂತ್ರಿಕ ಸಾಕ್ಷ್ಯಗಳ ಸಂಗ್ರಹ, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮುಗಿದಿದೆ. ಸಾಂದರ್ಭಿಕ ಸಾಕ್ಷ್ಯಧಾರಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಹೀಗಾಗಿ, ಭಾನುವಾರ ಆರೋಪಗಳನ್ನು ಜಡ್ಜ್​​​ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.

ರೇಣುಕಾಸ್ವಾಮಿ ಅವರು ಚಿತ್ರದುರ್ಗದವರು ಫಾರ್ಮಸಿ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಪವಿತ್ರಾ ಗೌಡಗೆ ಅವರು ಅಶ್ಲೀಲ ಸಂದೇಶ ಕಳುಹಿಸಿದ್ದರು. ಇದರಿಂದ ಸಿಟ್ಟಾದ ದರ್ಶನ್ ಅವರು ರೇಣುಕಾ ಸ್ವಾಮಿಯನ್ನು ಕರೆತರುವಂತೆ ಆಪ್ತರಿಗೆ ಹೇಳಿದ್ದರು. ದರ್ಶನ್ ಸೂಚನೆಯಂತೆ ಅವರನ್ನು ಕರೆತರಲಾಗಿದೆ. ಆ ಬಳಿಕ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಹಲವು ಮಂದಿ ಅರೆಸ್ಟ್ ಆಗಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ರಾಜ್ಯದಲ್ಲಿ ಎಸ್‌ಐಆರ್ ಅವಧಿ ವಿಸ್ತರಣೆ: ಆ. 8 ರವರೆಗೆ ಗಣತಿ ನಮೂನೆ ವಿತರಣೆನಮ್ಮ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ದಾರಿದೀಪ: ಪ್ರೊ ಜಯಶ್ರೀ ಅಬ್ಬಿಗೇರಿ ಅಭಿಮತಬಿಡದಿ ಟೌನ್ ಶಿಪ್; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಅಭಯನಾಡಗೀತೆಯಲ್ಲಿ ಬೌದ್ಧ ಪದ | ಸೇರ್ಪಡೆಗೆ ತಜ್ಞರ ಶಿಫಾರಸು-ಪಾರಸಿಕ ಜೈನ ಬೌದ್ಧರುದ್ಯಾನ ಎಂದು ಮಾರ್ಪಡಿಸಿ: ಸರ್ಕಾರಕ್ಕೆ ವರದಿಭೋಜಶಾಲಾ–ಕಮಾಲ್ ಮೌಲಾ ಪ್ರಕರಣ: ಶುಕ್ರವಾರದ ನಮಾಜ್‌ಗೆ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳ ಕಲ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ2022ರಲ್ಲಿ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸದಂತೆ ರಷ್ಯಾವನ್ನು ತಡೆದದ್ದು ಮೋದಿ : ಪೋಲೆಂಡ್ ಸಚಿವರ ಹೇಳಿಕೆಚೊಚ್ಚಲ ಬಾಹ್ಯಾಕಾಶ ಯಾನ ಕೈಗೊಂಡ ಭಾರತೀಯ ಮೂಲದ ಗಗನಯಾತ್ರಿ ಅನಿಲ ಮೆನನ್ಸಾವೂ ಬೇರ್ಪಡಿಸಲಿಲ್ಲ ಇವರಿಬ್ಬರ ಬಂಧವನ್ನು…; ಯಜಮಾನನ ಶವಯಾತ್ರೆಯಲ್ಲೇ ಪ್ರಾಣ ಬಿಟ್ಟ ನಿಷ್ಠಾವಂತ ನಾಯಿ ʼದುಗ್ಗುʼ