Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ರೂ .3,50,000 ಮೌಲ್ಯದ 8 ಕಳುವಾದ ಮೋಟರ್ ಸೈಕಲ್‌ ವಶ

 

ಬೆಳಗಾವಿ :
ದಿನಾಂಕಃ 06/04/2023 ರಂದು ಬೆಳಗಾವಿ ಗ್ರಾಮೀಣ ಹದ್ದಿಯ ಕಮಲನಗರ ಗ್ರಾಮದ ಫಾಲ್ಟ್ರಿಫಾರ್ಮ್ ಮುಂದೆ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳ್ಳತನವಾದ ಬಗ್ಗೆ ನೀಡಿದ ದೂರಿನಂತೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು . ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅರುಣ ಮುರಗುಂಡಿ , ಪಿಐ ಬೆಳಗಾವಿ ಗ್ರಾಮೀಣ ಅವರ ನೇತೃತ್ವದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯವರ ತಂಡ ಸಂಶಯುಕ್ತ ಆರೋಪಿತನಾದ ಪರಶುರಾಮ ಸಣ್ಣಭೀಮಪ್ಪ ಕುರಲಿ ( 28 ) ಸಾಃ ಕಮಲನಗರ ಪೋಸ್ಟ್ ದೇಸೂರ ತಾಃಜಿಃ ಬೆಳಗಾವಿ ಇವನನ್ನು ವಶಕ್ಕೆ ಪಡೆದು , ವಿಚಾರಣೆ ಕೈಕೊಂಡು , ಆರೋಪಿತನಿಂದ ಮೋಟಾರು ಸೈಕಲ್‌ಗಳ ನಂಬರ್ ಪ್ಲೇಟಗಳನ್ನು ಹಾನಿಗೊಳಿಸಿರುವ ಒಟ್ಟು ರೂ .3,50,000 / - ಮೌಲ್ಯದ 08 ಮೋಟಾರ ಸೈಕಲ್‌ಗಳನ್ನು ( 01 ಹಿರೋ ಎಚ್‌ಎಫ್ ಡಿಲಕ್ಸ್ , 05 - ಹಿರೋಹೊಂಡಾ ಸ್ಪೈಂಡರ್ , 01 - ಪಲ್ಸರ್ ಬೈಕ್ ( 220 ) , 01 - ಫ್ಯಾಶನ್ ಪ್ಲಸ್ ) ವಶಪಡಿಸಿಕೊಂಡು ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಿ , ತನಿಖೆ ಮುಂದುವರೆಸಲಾಗಿದೆ . ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಬೆಳಗಾವಿ ಗ್ರಾಮೀಣ ಠಾಣೆಯ ಪಿಐ , ಪಿಎಸ್‌ಐ ಹಾಗೂ ಸಿಬ್ಬಂದಿಯವರ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು , ಬೆಳಗಾವಿ ನಗರ ಮತ್ತು ಡಿಸಿಪಿ ರವರುಗಳು ಶ್ಲಾಘಿಸಿರುತ್ತಾರೆ .

 

ಕ್ಯಾಂಪ್ ಪೊಲೀಸ್ ಠಾಣೆಯವರ ಕಾರ್ಯಾಚರಣೆ : ರೂ .35,500 / - ಮೌಲ್ಯದ 474 ಗ್ರಾಂ ಗಾಂಜಾ ವಶ :
ದಿನಾಂಕಃ 10/04/2023 ರಂದು ಹದ್ದಿಯ ಗಣೇಶಪುರ ಜ್ಯೋತಿ ನಗರ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಂತೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಚಿಕೇತ ಎಸ್. ಜನಗೌಡ , ಪಿಐ ಕ್ಯಾಂಪ್ ಪೊಲೀಸ್ ಠಾಣೆ ಅವರ ನೇತೃತ್ವದಲ್ಲಿ ಸಿಬ್ಬಂದಿಯವರ ತಂಡ ಆರೋಪಿತರಾದ 1 ) ನದೀಮ ಅಲ್ಲಾವುದ್ದಿನ್ ನದಾಫ್ ( 23 ) ಸಾ : ಜಯನಗರ ಮಚ್ಚೆ, ಬೆಳಗಾವಿ , 2 ) ಮನೀಶ ಮಾರುತಿ ಹುಂದ್ರೆ ( 23 ) ಸಾ : ಕಲಮೇಶ್ವರ ನಗರ ಹಿಂಡಲಗಾ ಬೆಳಗಾವಿ . ಇವರನ್ನು ವಶಕ್ಕೆ ಪಡೆದು , ವಿಚಾರಣೆ ಕೈಕೊಂಡು , ಆರೋಪಿತರಿಂದ ಒಟ್ಟು ರೂ .35,500 / - ಮೌಲ್ಯದ 474 ಗ್ರಾಂ ಗಾಂಜಾ ವಶಪಡಿಸಿಕೊಂಡು ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಿ , ತನಿಖೆ ಮುಂದುವರೆಸಲಾಗಿದೆ . ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಕ್ಯಾಂಪ್ ಠಾಣೆಯ ಪಿಐ ಹಾಗೂ ಸಿಬ್ಬಂದಿಯವರ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು , ಬೆಳಗಾವಿ ನಗರ ಮತ್ತು ಡಿಸಿಪಿ ಶ್ಲಾಘಿಸಿರುತ್ತಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕನ್ನಡ ಸಾಹಿತ್ಯ ಪರಿಷತ್ ಸರ್ಜರಿಗೆ ಹಾರ್ಟ್ ಸರ್ಜನ್ ಬೆಳಗಾವಿ ಮಣ್ಣಿನ ಮಗಳು ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಸಜ್ಜು ಚುನಾವಣೆ ಸ್ಪರ್ಧೆಗೆ ನಿರ್ಧಾರ | ಗೆದ್ದರೆ ಪ್ರಥಮ ಅಧ್ಯಕ್ಷೆ, ತೋಂಟದಾರ್ಯ ಮಠದ ಜಗದ್ಗುರುಗಳು ಬೆಂಬಲಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿಅಯೋಧ್ಯೆ ರಾಮಮಂದಿರದ ಮೊದಲ ಸಿಇಒ ಆಗಿ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರ ನೇಮಕಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿ8 ಜನ ಮೊಬೈಲ್ ಕಳ್ಳರನ್ನು ಬಂಧಿಸಿದ ಕಟಕೋಳ ಪೊಲೀಸರು200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ : ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಮನೆಗೆ ಕರೆತಂದ ಕುಟುಂಬ !ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ್ದ ಅಜ್ಜಿಯ ಬಂಧನಪುತ್ರಿಯರ ಶಿಕ್ಷಣಕ್ಕಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡಿ ʼಮ್ಯಾರಥಾನ್‌ʼನಲ್ಲಿ ಮೊದಲ ಸ್ಥಾನ ಪಡೆದ 47 ವರ್ಷದ ತಾಯಿ !ರಷ್ಯಾ ಅತಿಹೆಚ್ಚು ತೈಲ ಉತ್ಪಾದನೆ ಮಾಡುತ್ತಿದ್ರೂ ಈಗ ಅದಕ್ಕೇ ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್ ಪೂರೈಸುತ್ತಿರುವ ಭಾರತ ! ಕಾರಣ ?ವೈಶ್ಯ ಸಮಾಜದ ಏಕತೆ, ಪ್ರಗತಿಗೆ ಸೆ.6ರಂದು ಬೆಳಗಾವಿಯಲ್ಲಿ ವೈಶ್ಯ ಸಮ್ಮೇಳನ