Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿ ಎಐಸಿಸಿ ಅಧಿವೇಶನ ಶತಮಾನೋತ್ಸವ : ಕಂಗೊಳಿಸಿದ ಕುಂದಾನಗರಿ !

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿ ಡಿ.26 ಮತ್ತು 27ರಂದು ದೇಶದ ಎಲ್ಲಕಾಂಗ್ರೆಸ್‌ ನಾಯಕರ ಸಮಾಗಮದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಸಭೆಯ 150 ಸದಸ್ಯರು ಒಳಗೊಂಡು ದೇಶದ ಮೂಲೆಮೂಲೆಗಳಿಂದ ಪಕ್ಷದ 300ಕ್ಕೂ ಹೆಚ್ಚು ಗಣ್ಯ ನಾಯಕರು ಕುಂದಾ ನಗರಿಯಲ್ಲಿ ಒಟ್ಟುಗೂಡಲಿದ್ದಾರೆ. ಸ್ವಾತಂತ್ರ್ಯ ಹೋರಾಟ ಉಚ್ಛ್ರಾಯ ಸ್ಥಿತಿಧಿಯಲ್ಲಿದ್ದಾಗ 1924ರಲ್ಲಿಮಹಾತ್ಮ ಗಾಂಧೀಜಿಯವರು ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆ ವಹಿಸಿಕೊಂಡಿದ್ದು ಇದೇ ಬೆಳಗಾವಿಯಲ್ಲಿ.ಆ ಅಧಿವೇಶನದ ಶತಮಾನೋತ್ಸವ ಸಮಾರಂಭ ಡಿ.26 ರಂದು ಬೆಳಗಾವಿಯಲ್ಲಿ ನಡೆಯಲಿದೆ.

ಇಡೀ ರಾಷ್ಟ್ರದ ಗಮನ ಸೆಳೆದಿರುವ ಈ ಕಾರ್ಯಕ್ರಮಕ್ಕೆ ಡಿ.26ರಂದು ದಿಲ್ಲಿಯಿಂದ ಎರಡು ವಿಶೇಷ ವಿಮಾನಗಳಲ್ಲಿಗಣ್ಯರ ಆಗಮನವಾಗಲಿದೆ.ಗಾಂಧೀಜಿಯವರ ಅಧ್ಯಕ್ಷತೆ ಹಾಗೂ ಪಂಡಿತ್‌ ಜವಾಹರ ಲಾಲ್‌ ನೆಹರು ಮತ್ತು ರಾಜ್ಯದವರೇ ಆದ ಗಂಗಾಧರರಾವ್‌ ದೇಶಪಾಂಡೆ ಅವರು ಪ್ರಧಾನ ಕಾರ್ಯದರ್ಶಿಗಳಾಗಿದ್ದ ಕಾಂಗ್ರೆಸ್‌ ಅಧಿವೇಶನ ನಡೆದು 100 ವರ್ಷ ತುಂಬಿದೆ. ರಾಜ್ಯದಲ್ಲಿ ಆಡಳಿತ ಪಕ್ಷವಾಗಿ ಕಾಂಗ್ರೆಸ್‌ ಈ ಶತಮಾನೋತ್ಸವದ ಐತಿಹಾಸಿಕ ಸಂದರ್ಭವನ್ನು ಅದ್ಧೂರಿ ಹಾಗೂ ಅಭೂತಪೂರ್ವವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದೆ. ಪಕ್ಷ ಸಂಕಷ್ಟದ ಸ್ಥಿತಿಯಲ್ಲಿದ್ಧಾಗಲೆಲ್ಲಾ ಶಕ್ತಿ ತುಂಬುವ ಕರ್ನಾಟಕದಲ್ಲಿ ಕಾಂಗ್ರೆಸ್‌ ಮಹಾಧಿವೇಶನದ ಶತಮಾನೋತ್ಸವದ ಮೂಲಕ ಈಗಲೂ ಮತ್ತೊಂದು ಸಂದೇಶ ನೀಡುವ ಆಶಯದೊಂದಿಗೆ ತಯಾರಿ ನಡೆದಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ಸದಸ್ಯೆ ಸೋನಿಯಾ ಗಾಂಧಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಜತೆಗೆ, ಎಲ್ಲಎಐಸಿಸಿ ಮುಂಚೂಣಿ ನಾಯಕರು, ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳ ಸಿಎಂಗಳು, ಸಿಎಲ್‌ಪಿ ನಾಯಕರು, ಎಲ್ಲರಾಜ್ಯಗಳ (ಪಿಸಿಸಿ) ಅಧ್ಯಕ್ಷರು ಪಾಲ್ಗೊಳ್ಳುತ್ತಿದ್ದಾರೆ.

ಭರ್ಜರಿ ತಯಾರಿ: ಕಳೆದ ವಾರವಷ್ಟೇ ಮುಗಿದ ವಿಧಾನಮಂಡಲ ಅಧಿವೇಶನದ ಜತೆಜತೆಗೇ ಬೆಳಗಾವಿಯಲ್ಲಿಎರಡು ದಿನಗಳ ಪಕ್ಷದ ಕಾರ್ಯಕ್ರಮಕ್ಕೂ ಭರ್ಜರಿ ಸಿದ್ಧತೆಗಳು ನಡೆದಿದ್ದು, ತಯಾರಿ ಬಹುತೇಕ ಅಂತಿಮ ಹಂತ ತಲುಪಿದೆ.ಡಿ.27ರಂದು ಬೃಹತ್‌ ಬಹಿರಂಗ ಸಭೆಗೆ ಸಿದ್ಧತೆಯಾಗಿದೆ. ಗಂಗಾಧರರಾವ್‌ ದೇಶಪಾಂಡೆ ಸ್ಮಾರಕ ಭವನ ಉದ್ಘಾಟನೆ ಒಳಗೊಂಡು ಇನ್ನೂ ಹಲವು ಕಾರ್ಯಕ್ರಮಗಳು ಇದರ ಭಾಗವಾಗಿದ್ದು, ಎಐಸಿಸಿ ಮಂಗಳವಾರ ಕಾರ್ಯಕ್ರಮಗಳ ಪಟ್ಟಿಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ. ಮಹತ್ವದ ನಿರ್ಣಯಎಐಸಿಸಿ ಅಧಿವೇಶನದಲ್ಲಿಮಹತ್ವದ ಸಂದೇಶ ನೀಡುವ ನಿರ್ಣಯಗಳಿಗೂ ತಯಾರಿಯಾಗಿದೆ.
ಎಐಸಿಸಿ ವರಿಷ್ಠ ನಾಯಕರೊಂದಿಗೆ ಸಮನ್ವಯದಿಂದ ಸಿಡಬ್ಲ್ಯೂಸಿ ಸಭೆಯಲ್ಲಿನಿರ್ಣಯಗಳ ಕರಡು ಅಂತಿಮಗೊಳಿಧಿಸುವ ಹೊಣೆಯನ್ನು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ಸೇರಿ ರಾಜ್ಯ ಕಾಂಗ್ರೆಸ್‌ನ 12 ಪ್ರಮುಖರಿಗೆ ನೀಡಲಾಗಿದೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?