Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮುಂದಿನ ಚುನಾವಣೆ ಬಳಿಕ ಪ್ರಧಾನಿ ಯಾರಾಗುತ್ತಾರೆ ?

ನವದೆಹಲಿ : ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಮುಂದಿನ ಚುನಾವಣೆ ಬಳಿಕ ಪ್ರಧಾನಿ ಯಾರಾಗುತ್ತಾರೆ ಅನ್ನೋ ಲೆಕ್ಕಾಚಾರ ಚರ್ಚೆ ಶುರುವಾಗಿದೆ. ಮೂರನೇ ಅವಧಿಯಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನ ಪಡೆಯಲು ವಿಫಲವಾಗಿದೆ. ಏಕಾಂಗಿಯಾಗಿ ಸ್ಪಷ್ಟಬಹುಮತ ದಾಟಿಲ್ಲ. ಇದರ ನಡುವೆ 2029ರ ಚರ್ಚೆ ಶುರುವಾಗಿದೆ. ಈ ಕುರಿತು ಯಾವ ನಾಯಕನಿಗೆ ಪ್ರಧಾನಿಯಾಗುವ ರಾಜಯೋಗವಿದೆ ಎಂದು ಖ್ಯಾತ ಜ್ಯೋತಷಿ ವಿಕಾಸ್ ದಿವ್ಯಕೀರ್ತಿ ಹೇಳಿದ್ದಾರೆ.

ವಿಕಾಸ್ ದಿವ್ಯಕೀರ್ತಿ ಪ್ರಕಾರ ಪ್ರಧಾನಿ ಮೋದಿ ಬಳಿಕ ಅಂದರೆ 2029ರಲ್ಲಿ ಪ್ರಧಾನಿಯಾಗುವ ರಾಜಯೋಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗಿದೆ ಎಂದಿದ್ದಾರೆ. ಯೋಗಿ ಆದಿತ್ಯನಾಥ್ ಕುಂಡಲಿ ಹಾಗೂ ರಾಶಿ ಭವಿಷ್ಯಗಳು ರಾಜಯೋಗ ದೃಢಪಡಿಸುತ್ತಿದೆ. 2017ರಿಂದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಯೋಗಿ ಆದಿತ್ಯನಾಥ್‌ಗೆ 2019ರಲ್ಲೂ ರಾಜಯೋಗ ಮುಂದುವರಿಯಲಿದೆ. ಜೊತೆಗೆ ಉನ್ನತ ಸ್ಥಾನ ಅಲಂಕರಿಸುವ ಅವಕಾಶಗಳು ಒದಗಿಬರಲಿದೆ. ಹೀಗಾಗಿ ಜ್ಯೋತಿಷ್ಯದ ಪ್ರಕಾರ ಮೋದಿ ಬಳಿಕ ಪ್ರಧಾನಿಯಾಗಬಲ್ಲ ಎಲ್ಲಾ ಸಾಧ್ಯೆತೆಗಳು ಯೋಗಿ ಆದಿತ್ಯನಾಥ್‌ಗಿದೆ ಎಂದು ವಿಕಾಸ್ ದಿವ್ಯಕೀರ್ತಿ ಹೇಳಿದ್ದಾರೆ.

ರಾಹುಲ್ ಗಾಂಧಿ ವಿಚಾರದಲ್ಲಿ ಕೆಲ ಅಡೆತಡೆಗಳು ಇವೆ ಎಂದು ಜ್ಯೋತಿಷಿ ಹೇಳಿದ್ದಾರೆ. ಪ್ರಮುಖವಾಗಿ ಮುಂದಿನ 10 ರಿಂ 15 ವರ್ಷ ರಾಹುಲ್ ಕುಂಡಲಿಯಲ್ಲಿ ರಾಜಯೋಗ ಕಾಣುತ್ತಿಲ್ಲ. ರಾಹುಲ್ ಗಾಂಧಿ ಪ್ರಧಾನಿಯಾಗುವ ಸಾಧ್ಯತೆಗಳು ಮುಂದಿನ 10 ರಿಂದ 15 ವರ್ಷದಲ್ಲಿ ಕಡಿಮೆ. ಆದರೆ ರಾಹುಲ್ ಗಾಂಧಿಗೆ ಉನ್ನತ ಸ್ಥಾನ ಅಲಂಕರಿಸುವ ಸಾಧ್ಯತೆಗಳು ಸುದೀರ್ಘ ವರ್ಷಗಳ ಬಳಿಕ ಬರುವ ಸಾಧ್ಯತೆ ಇದೆ. ಆದರೆ ಸದ್ಯಕ್ಕಿಲ್ಲ ಎಂದು ವಿಕಾಸ್ ದಿವ್ಯಕೀರ್ತಿ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಗಳು ರಾಹುಲ್ ಗಾಂಧಿಗೆ ಪ್ರತಿಕೂಲವಾಗಿಲ್ಲ. ಹಲವು ಸವಾಲುಗಳಿದ್ದರೂ ರಾಹುಲ್ ಗಾಂಧಿಗೆ ರಾಜಯೋಗದ ಅದೃಷ್ಠ ಬಾಗಿಲು ತೆರೆದಿಲ್ಲ ಎಂದು ಜ್ಯೋತಿಷಿ ಹೇಳಿದ್ದಾರೆ.

ಜ್ಯೋತಿಷ್ಯ ಪ್ರಕಾರ ಯೋಗಿ ಆದಿತ್ಯನಾಥ್ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸುವ ಸಾಧ್ಯತೆಯನ್ನು ಕುಂಡಲಿ ಹೇಳುತ್ತಿದೆ ಎಂದಿದ್ದಾರೆ. ಇತ್ತ ರಾಜಕೀಯ ವಿಶ್ಲೇಷಣೆಕಾರರು ಮುಂದಿನ ಬಿಜೆಪಿ ಪ್ರಧಾನಿ ಅಭ್ಯರ್ಥಿಗಳ ಸಾಲಿನಲ್ಲಿ ಯೋಗಿ ಆದಿತ್ಯನಾಥ್ ಮುಂಚೂಣಿಯಲ್ಲಿದ್ದಾರೆ ಎಂದು ಹಲವು ಬಾರಿ ಹೇಳಿದ್ದಾರೆ. ಹೀಗಾಗಿ 2029ರ ಲೋಕಸಭಾ ಚುನಾವಣೆ ಚರ್ಚೆಗಳು ಈಗಾಗಲೇ ಶುರುವಾಗತೊಡಗಿದೆ. ಪ್ರಮುಖವಾಗಿ ಪ್ರಧಾನಿ ಅಭ್ಯರ್ಥಿಯೇ ಚರ್ಚಾ ವಿಷಯವಾಗಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ರಾಜ್ಯದಲ್ಲಿ ಎಸ್‌ಐಆರ್ ಅವಧಿ ವಿಸ್ತರಣೆ: ಆ. 8 ರವರೆಗೆ ಗಣತಿ ನಮೂನೆ ವಿತರಣೆನಮ್ಮ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ದಾರಿದೀಪ: ಪ್ರೊ ಜಯಶ್ರೀ ಅಬ್ಬಿಗೇರಿ ಅಭಿಮತಬಿಡದಿ ಟೌನ್ ಶಿಪ್; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಅಭಯನಾಡಗೀತೆಯಲ್ಲಿ ಬೌದ್ಧ ಪದ | ಸೇರ್ಪಡೆಗೆ ತಜ್ಞರ ಶಿಫಾರಸು-ಪಾರಸಿಕ ಜೈನ ಬೌದ್ಧರುದ್ಯಾನ ಎಂದು ಮಾರ್ಪಡಿಸಿ: ಸರ್ಕಾರಕ್ಕೆ ವರದಿಭೋಜಶಾಲಾ–ಕಮಾಲ್ ಮೌಲಾ ಪ್ರಕರಣ: ಶುಕ್ರವಾರದ ನಮಾಜ್‌ಗೆ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳ ಕಲ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ2022ರಲ್ಲಿ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸದಂತೆ ರಷ್ಯಾವನ್ನು ತಡೆದದ್ದು ಮೋದಿ : ಪೋಲೆಂಡ್ ಸಚಿವರ ಹೇಳಿಕೆಚೊಚ್ಚಲ ಬಾಹ್ಯಾಕಾಶ ಯಾನ ಕೈಗೊಂಡ ಭಾರತೀಯ ಮೂಲದ ಗಗನಯಾತ್ರಿ ಅನಿಲ ಮೆನನ್ಸಾವೂ ಬೇರ್ಪಡಿಸಲಿಲ್ಲ ಇವರಿಬ್ಬರ ಬಂಧವನ್ನು…; ಯಜಮಾನನ ಶವಯಾತ್ರೆಯಲ್ಲೇ ಪ್ರಾಣ ಬಿಟ್ಟ ನಿಷ್ಠಾವಂತ ನಾಯಿ ʼದುಗ್ಗುʼ