Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಫೈನಲ್‌ ಗೆದ್ದ ಆರ್‌ಸಿಬಿ; ಯಾರಿಗೆ ಯಾವ ಪ್ರಶಸ್ತಿ?

ಬೆಂಗಳೂರು : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ ಆವೃತ್ತಿಯಲ್ಲಿ ಚಾಂಪಿಯನ್‌ ಪಟ್ಟಕ್ಕೇರಿದೆ.

ಈ ಟೂರ್ನಿಯಲ್ಲಿ ಪ್ರತಿ ಓವರ್‌ಗೆ 9.62ರ ಸರಾಸರಿಯಲ್ಲಿ ಬರೋಬ್ಬರಿ 26,381 ರನ್‌ಗಳು ಹರಿದವು. 2,245 ಬೌಂಡರಿ, 1,294 ಸಿಕ್ಸ್‌ ಸಿಡಿದವು. ಒಟ್ಟು 52 ಇನಿಂಗ್ಸ್‌ಗಳಲ್ಲಿ 200ಕ್ಕಿಂತ ಹೆಚ್ಚು ಮೊತ್ತ ದಾಖಲಾಯಿತು. ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಇವೆಲ್ಲವೂ ದಾಖಲೆಯೇ.

ಪಂಜಾಬ್‌ ಕಿಂಗ್ಸ್‌ ವಿರುದ್ಧ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಫೈನಲ್‌ನಲ್ಲಿ ಅಮೋಘ ಪ್ರದರ್ಶನ (17 ರನ್‌ಗೆ 2 ವಿಕೆಟ್‌) ತೋರಿದ ಕೃಣಾಲ್‌ ಪಾಂಡ್ಯ ಪಂದ್ಯ ಶ್ರೇಷ್ಠ ಎನಿಸಿಕೊಂಡರು.

ಟೂರ್ನಿಯುದ್ದಕ್ಕೂ ಗಮನಾರ್ಹ ಆಟವಾಡಿದ ಮುಂಬೈ ಇಂಡಿಯನ್ಸ್‌ನ ಸೂರ್ಯಕುಮಾರ್‌ ಯಾದವ್‌ ಅವರು 'ಮೋಸ್ಟ್‌ ವ್ಯಾಲ್ಯೂಯೆಬಲ್‌ ಪ್ಲೇಯರ್‌' ಎನಿಸಿಕೊಂಡರು. ಅವರು ಈ ಟೂರ್ನಿಯಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಕನಿಷ್ಠ 25 ರನ್‌ ಗಳಿಸಿದ್ದಾರೆ ಎಂಬುದು ವಿಶೇಷ.

ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ್ದಕ್ಕೆ ಸಾಯಿ ಸುದರ್ಶನ್‌ (759 ರನ್‌), ಹೆಚ್ಚು ವಿಕೆಟ್‌ ಪಡೆದದ್ದಕ್ಕೆ ಪ್ರಸಿದ್ಧ ಕೃಷ್ಣ (25 ವಿಕೆಟ್‌) ಕ್ರಮವಾಗಿ ಆರೆಂಜ್‌ ಮತ್ತು ಪರ್ಪಲ್‌ ಕ್ಯಾಪ್‌ ಪಡೆದರು. ಇವರಿಬ್ಬರೂ ಗುಜರಾತ್‌ ಟೈಟನ್ಸ್‌ ಆಟಗಾರರು.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಡೇವಿಡ್‌ ಬ್ರೇವಿಸ್‌ ಅವರು ಲಾಂಗ್‌ ಆಫ್‌ನತ್ತ ಬಾರಿಸಿದ ಚೆಂಡನ್ನು ಓಡಿ ಬಂದು ಎಡಕ್ಕೆ ಜಿಗಿದು ಹಿಡಿದು ಅಭಿಮಾನಿಗಳ ಹುಬ್ಬೇರಿಸಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ನ ಕಮಿಂದು ಮೆಂಡಿಸ್‌ಗೆ 'ಕ್ಯಾಚ್‌ ಆಫ್‌ ದಿ ಸೀಸನ್‌' ಪ್ರಶಸ್ತಿ ಲಭಿಸಿತು.

ಯಾರಿಗೆ ಯಾವ ಪ್ರಶಸ್ತಿ? ಪಟ್ಟಿ ಇಲ್ಲಿದೆ

ಚಾಂಪಿಯನ್‌: ರಾಯಲ್ ಚಾಲೆಂಜರ್ಸ್‌ ಬೆಂಗಳೂರು

ರನ್ನರ್ಸ್‌ ಅಪ್: ಪಂಜಾಬ್‌ ಕಿಂಗ್ಸ್‌

ಪಂದ್ಯಶ್ರೇಷ್ಠ: ಕೃಣಾಲ್‌ ಪಾಂಡ್ಯ (ರಾಯಲ್ ಚಾಲೆಂಜರ್ಸ್‌ ಬೆಂಗಳೂರು)

ಆರೆಂಜ್‌ ಕ್ಯಾಪ್‌: ಸಾಯಿ ಸುದರ್ಶನ್‌ (ಗುಜರಾತ್‌ ಟೈಟನ್ಸ್‌)

ಪರ್ಪಲ್‌ ಕ್ಯಾಪ್‌: ಪ್ರಸಿದ್ಧ ಕೃಷ್ಣ (ಗುಜರಾತ್‌ ಟೈಟನ್ಸ್‌)

ಉದಯೋನ್ಮುಖ ಆಟಗಾರ: ಸಾಯಿ ಸುದರ್ಶನ್‌ (ಗುಜರಾತ್‌ ಟೈಟನ್ಸ್‌)

ಸೂಪರ್‌ ಸ್ಟ್ರೈಕರ್‌ ಆಫ್‌ ದಿ ಸೀಸನ್‌: ವೈಭವ್‌ ಸೂರ್ಯವಂಶಿ (ರಾಜಸ್ಥಾನ ರಾಯಲ್ಸ್‌)

ಮೋಸ್ಟ್‌ ವ್ಯಾಲ್ಯೂಯೆಬಲ್‌ ಪ್ಲೇಯರ್‌: ಸೂರ್ಯಕುಮಾರ್‌ ಯಾದವ್‌ (ಮುಂಬೈ ಇಂಡಿಯನ್ಸ್‌)

ಅತಿ ಹೆಚ್ಚು ಸಿಕ್ಸ್‌: ನಿಕೋಲಸ್‌ ಪೂರನ್‌ (ಲಖನೌ ಸೂಪರ್‌ ಜೈಂಟ್ಸ್‌)

ಅತಿ ಹೆಚ್ಚು ಬೌಂಡರಿ: ಸಾಯಿ ಸುದರ್ಶನ್‌ (ಗುಜರಾತ್‌ ಟೈಟನ್ಸ್‌)

ಹೆಚ್ಚು ಡಾಟ್‌ ಬಾಲ್‌: ಮೊಹಮ್ಮದ್‌ ಸಿರಾಜ್‌ (ಗುಜರಾತ್‌ ಟೈಟನ್ಸ್‌)

ಕ್ಯಾಚ್‌ ಆಫ್‌ ದಿ ಸೀಸನ್‌: ಕಮಿಂದು ಮೆಂಡಿಸ್‌ (ಸನ್‌ರೈಸರ್ಸ್‌ ಹೈದರಾಬಾದ್‌)

ಫೇರ್‌ ಪ್ಲೇ ಅವಾರ್ಡ್‌: ಚೆನ್ನೈ ಸೂಪರ್‌ ಕಿಂಗ್ಸ್‌
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕನ್ನಡ ಸಾಹಿತ್ಯ ಪರಿಷತ್ ಸರ್ಜರಿಗೆ ಹಾರ್ಟ್ ಸರ್ಜನ್ ಬೆಳಗಾವಿ ಮಣ್ಣಿನ ಮಗಳು ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಸಜ್ಜು ಚುನಾವಣೆ ಸ್ಪರ್ಧೆಗೆ ನಿರ್ಧಾರ | ಗೆದ್ದರೆ ಪ್ರಥಮ ಅಧ್ಯಕ್ಷೆ, ತೋಂಟದಾರ್ಯ ಮಠದ ಜಗದ್ಗುರುಗಳು ಬೆಂಬಲಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿಅಯೋಧ್ಯೆ ರಾಮಮಂದಿರದ ಮೊದಲ ಸಿಇಒ ಆಗಿ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರ ನೇಮಕಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿ8 ಜನ ಮೊಬೈಲ್ ಕಳ್ಳರನ್ನು ಬಂಧಿಸಿದ ಕಟಕೋಳ ಪೊಲೀಸರು200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ : ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಮನೆಗೆ ಕರೆತಂದ ಕುಟುಂಬ !ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ್ದ ಅಜ್ಜಿಯ ಬಂಧನಪುತ್ರಿಯರ ಶಿಕ್ಷಣಕ್ಕಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡಿ ʼಮ್ಯಾರಥಾನ್‌ʼನಲ್ಲಿ ಮೊದಲ ಸ್ಥಾನ ಪಡೆದ 47 ವರ್ಷದ ತಾಯಿ !ರಷ್ಯಾ ಅತಿಹೆಚ್ಚು ತೈಲ ಉತ್ಪಾದನೆ ಮಾಡುತ್ತಿದ್ರೂ ಈಗ ಅದಕ್ಕೇ ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್ ಪೂರೈಸುತ್ತಿರುವ ಭಾರತ ! ಕಾರಣ ?ವೈಶ್ಯ ಸಮಾಜದ ಏಕತೆ, ಪ್ರಗತಿಗೆ ಸೆ.6ರಂದು ಬೆಳಗಾವಿಯಲ್ಲಿ ವೈಶ್ಯ ಸಮ್ಮೇಳನ