Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿಯಲ್ಲಿ ಬೈಕ್ ಗೆ ಟಿಪ್ಪರ ಹಾಯಿಸಿ ಅಪಘಾತ; ನವವಿವಾಹಿತ ದುರ್ಮರಣ, ಗಂಭೀರವಾಗಿ ಗಾಯಗೊಂಡ ಪತ್ನಿ..!


  • ಬೈಕ್ ಗೆ ಟಿಪ್ಪರ ಹಾಯಿಸಿ ಅಪಘಾತ; ನವವಿವಾಹಿತ ದುರ್ಮರಣ, ಗಂಭೀರವಾಗಿ ಗಾಯಗೊಂಡ ಪತ್ನಿ..!


ಕುಡುಕ ಟಿಪ್ಪರ ಚಾಲಕನ ದುರಹಂಕಾರಕ್ಕೆ 15 ದಿನಗಳ ಹಿಂದೆ ಹಸೆಮಣೆ ಏರಿದ್ದವ ಮಸನಕ್ಕೆ..!

ಟಿಪ್ಪರ ಚಾಲಕರ ಸೊಕ್ಕಿಗೆ ಬಲಿಯಾಗುತ್ತಿರುವ ಅಮಾಯಕರು..!

ಮರಳು, ಮಣ್ಣು ದಂಧೆಕೋರರ ಮುಂದೆ ಮಂಡಿ ಉರಿದ್ರಾ ಕಾಕತಿ ಪೊಲೀಸರು ..?

ಕಠಿಣ ಕ್ರಮ ಕೈಗೊಳ್ಳುವರಾ ಖಡಕ ಕಮೀಷನರ್ ..?

ಬೆಳಗಾವಿ : ಹದಿನೈದು ದಿನಗಳ ಹಿಂದಷ್ಟೇ ಹಸೆಮಣೆ ಏರಿ ಸಂಸಾರವೆಂಬ ನೌಕೆಯನ್ನು ನಡೆಸಲು ಆರಂಭಿಸುವ ಮುನ್ನವೇ ಕಂಠಪೂರ್ತಿ ಸರಾಯಿ ಸೇವಿಸಿದ್ದ ದುರಹಂಕಾರಿ ಕುಡುಕ ಟಿಪ್ಪರ ಚಾಲಕನೊರ್ವ ಬೈಕ್ ಮೇಲೆ ತೆರಳುತ್ತಿದ್ದ ನವ ಜೊಡಿಗೆ ಎದುರಿನಿಂದ ಬಂದು ಡಿಕ್ಕಿ ಹೊಡೆದು ಪತಿಯನ್ನು ಕೊಲೆ ಮಾಡಿ, ಪತ್ನಿಯನ್ನು ಗಂಭೀರವಾಗಿ ಗಾಯಗೊಳಿಸುವ ದಾರುಣ ಘಟನೆ ಅಗಸಗಿ ಗ್ರಾಮದ ಸಮೀಪದಲ್ಲಿ ಇಂದು ( ಜೂನ್12) ಮಧ್ಯಾಹ್ನ ಸಂಭವಿಸಿದೆ.

ಬೆಳಗಾವಿ ತಾಲೂಕಿನ ದಾಮಣೆ ಗ್ರಾಮದ ಯುವಕ ಬೀರಪ್ಪಾ ಲಕ್ಷ್ಮಣ ಸೈಬಣ್ಣವರ ನವವಿವಾಹಿತ ಮೃತ ದುರ್ದೈವಿ.

ಬೆಳಗಾವಿ ತಾಲೂಕಿನ ದಾಮಣೆ ಗ್ರಾಮದ ಯುವಕ ಬೀರಪ್ಪಾ ಲಕ್ಷ್ಮಣ ಸೈಬಣ್ಣವರ ಹದಿನೈದು ದಿನಗಳ ಹಿಂದೆ ಮಹಾರಾಷ್ಟ್ರದ ರಾಜಗೋಳಿ ಗ್ರಾಮದ ಶ್ರೀದೇವಿ ಎಂಬ ಯುವತಿಯನ್ನು ವರಿಸಿದ್ದ ಇಂದು ಆಕೆಯೊಂದಿಗೆ ತವರು ಮನೆಗೆ ಹೋಗಿ ವಾಪಸ ಬೆಳಗಾವಿ ಕಡೆಗೆ ಬೈಕ್ ಮೇಲೆ ಹೊರಟಿದ್ದ ವೇಳೆ ರಾಕ್ಷಸ ರೂಪದಲ್ಲಿ ಅಮಲಿನಲ್ಲಿದ್ದ ನೀಚ್ ಟಿಪ್ಪರ ಚಾಲಕ ಮುಂದಿನಿಂದ ಗುದ್ದಿ ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ.

ಬೈಕ್ ಸವಾರ ಮಾಡುತ್ತಿದ್ದ ಪತಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಪತ್ನಿ ಗಂಭೀರವಾಗಿ ಗಾಯಗೊಂಡು ಬೆಳಗಾವಿ KLE ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಲಿಸುತ್ತಿದ್ದ ಬೈಕ್ ಗೆ ಎದುರುಗಡೆಯಿಂದ ಬರುತ್ತಿದ್ದ ಟಿಪ್ಪರ ಡಿಕ್ಕಿ ಹೊಡೆದ ಹೊಡೆತಕ್ಕೆ ದಂಪತಿ 20 ಅಡಿ ದೂರ ಸಿಡಿದು ಬಿದ್ದಿದ್ದು ಅಪಘಾತ ನೋಡಿದವರು ಬೆಚ್ಚಿ ಬಿದ್ದಿದ್ದಾರೆ. ಇಷ್ಟಾದರೂ ಕಡುಕ ಚಾಲಕ ಅಪಘಾತಕ್ಕಿಡಾದ ದಂಪತಿಗಳಿಗೆ ಕರುಣೆ ತೋರದೆ ಸರಾಯಿ ಬೇಡುತ್ತಿದ್ದ. ಟಿಪ್ಪರ ಚಾಲಕ ಬೆಳಗಾವಿಗೆ ಮರಳು ಸಾಗಿಸಿ ವಾಪಸ ರಾಜಗೋಳಿ ಕಡೆಗೆ ಹೊರಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಟಿಪ್ಪರ ಚಾಲಕರ ಸೊಕ್ಕಿಗೆ ಬಲಿಯಾಗುತ್ತಿರುವ ಅಮಾಯಕರು..!

ಟಿಪ್ಪರ ಚಾಲಕರ ಸೋಕ್ಕಿನ ಚಾಲನೆಗೆ ಪ್ರತಿ ವರ್ಷ ಅಪಘಾತದಲ್ಲಿ ಐದಾರು ಜನ ಸಾವನ್ನಪ್ಪುತ್ತಿದ್ದು, ನೂರಾರು ಮೂಕ ಪ್ರಾಣಿಗಳು ಸಾವಿಗಿಡಾಗಿ ಗಾಯಗೊಳ್ಳುತ್ತಿವೆ. ಇಷ್ಟಾದರೂ ಟಿಪ್ಪರ ಚಾಲಕರು ಮಾತ್ರ ತಮ್ಮ ಅಕ್ರಮ ದಂಧೆಗಳನ್ನು ನಡೆಸುವುದಕ್ಕೊಸ್ಕರ ಬೇಕಾಬಿಟ್ಟಿಯಾಗಿ ಚಾಲನೆ ಮಾಡಿ ಅಮಾಯಕರ ಜೀವ ತೆಗೆಯುತ್ತಿದ್ದಾರೆ.

ಮರಳು, ಮಣ್ಣು ದಂಧೆಕೋರರ ಮುಂದೆ ಮಂಡಿಯೂರಿದ್ರಾ ಕಾಕತಿ ಪೊಲೀಸರು ..?

ಇಲ್ಲಿ ಚಲಿಸುವ ಟಿಪ್ಪರಗಳು ರಾಜಗೋಳಿ, ನಿಂಗ್ಯಾನಟ್ಟಿ ಕಡೆಯಿಂದ ಮರಳು, ಅತಿವಾಡ- ಬೆಕ್ಕಿನಕೇರಿಯಿಂದ ಮಣ್ಣು ಹಾಗೂ ಅಂಬೇವಾಡಿ ಅಲತಗೆ ಕಡೆಯಿಂದ ಜಲ್ಲಿಕಲ್ಲಿ ತುಂಬಿಕೊಂಡು ಸಾಗುತ್ತವೆ. ಇದರ ಚಾಲಕರ ಲಂಗು ಲಗಾಮಿಲ್ಲದ ಅತಿರೇಕದ ಚಾಲನೆಗೆ ಮುಗ್ದ ಜೀವಗಳು ಪ್ರಾಣ ಬಿಡುತ್ತಿದ್ದು, ಇಂತಹ ಕ್ರೂರಿ ಕೊಲೆಗಾರ ಚಾಲಕರ ಮೂಗಿಗೆ ದಾರ ಕಟ್ಟಿ ಎಂದು ಕಾಕತಿ ಪೊಲೀಸರಿಗೆ ನೊಂದ ಕುಟುಂಬದವರು ಹಲವು ಬಾರಿ ಮನವಿ ಮಾಡಿದರೂ ಕಾಕತಿ ಪೊಲೀಸರು ಮಾತ್ರ ಟಿಪ್ಪರ ದಂಧೆಕೋರರ ಮುಂದೆ ಮಂಡಿಯೂರಿ ಕುಳಿತಿರುವ ಹಾಗಿದೆ. ಯಾಕಂತಾ ಪೊಲೀಸರೇ ಉತ್ತರಿಸಬೇಕು.

ಕಠಿಣ ಕ್ರಮ ಕೈಗೊಳ್ಳುವರಾ ಖಡಕ ಕಮೀಷನರ್ ..?

ಇತ್ತೀಚೆಗಷ್ಟೇ ಬೆಳಗಾವಿಗೆ ನೂತನವಾಗಿ ಬಂದಿರುವ ಪೊಲೀಸ ಕಮೀಷನರ್ ಖಡಕ ಅಧಿಕಾರಿ ಎಂದು ಹೆಸರುವಾಸಿಯಾಗಿರುವ ಭೂಷಣ ಬೊರಸೆ ಅವರು ಈ ದುರಹಂಕಾರಿ ಟಿಪ್ಪರಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ ಎಂದು ಕಾದು ನೋಡಬೇಕು.

ಈ ಕರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪಿಐ ಸುರೇಶ್ ಶಿಂಗಿ ಬಂದು ಪರಿಶೀಲನೆ ನಡೆಸಿ ತನಿಖೆ ಕೈಕೊಂಡಿದ್ದಾರೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಪಾಲರ ಪತ್ನಿಯ ಆರೋಗ್ಯದಲ್ಲಿ ಏರುಪೇರು :  ದಿಢೀರ್ ಇಂದೋರ್ ಗೆ ತೆರಳಿದ ಗೆಹಲೋಟ್ -ಸಿಎಂ ರಾಜೀನಾಮೆ ಪತ್ರ ಯಾರಿಗೆ ಸಲ್ಲಿಸುತ್ತಾರೆ ?ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರು