Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮೋದಿಗೆ ಮತ್ತೆ ಜಯ : ಬಿರುಗಾಳಿಯೆಬ್ಬಿಸಿದ ಪೋಸ್ಟರ್

 

ದೆಹಲಿ:
ಹಾಲಿವುಡ್‌ ಚಿತ್ರ ‘ಟರ್ಮಿನೇಟರ್‌’ ಪೋಸ್ಟರ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಖವನ್ನು ಇರಿಸಿ ಎಡಿಟ್‌ ಮಾಡಿರುವ ಬಿಜೆಪಿ, 2024ಕ್ಕೆ ನಾನು ಮತ್ತೆ ಹಿಂದಿರುಗುತ್ತೇನೆ ಎಂಬ ಬರಹದೊಂದಿಗೆ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದೆ. ವಿಪಕ್ಷ ಇಂಡಿಯಾ ಕೂಟದ ಸಭೆಗೂ 1 ದಿನ ಮುನ್ನ ಪೋಸ್ಟರ್‌ ಬಿಡುಗಡೆ ಮಾಡಿದ್ದು, ‘ಪ್ರಧಾನಿ ಮೋದಿಯನ್ನು ಸೋಲಿಸಬಹುದು ಎಂದು ವಿಪಕ್ಷಗಳು ಯೋಚಿಸುತ್ತವೆ. ಅದು ಕನಸಾಗೇ ಉಳಿಯುತ್ತೆ. ಟರ್ಮಿನೇಟರ್‌ ಯಾವಾಗಲೂ ಗೆಲ್ಲುತ್ತಾರೆ’ ಎಂದು ಬರೆದುಕೊಂಡಿದೆ.

ಟರ್ಮಿನೇಟರ್‌ ಚಿತ್ರದ ನಟ ಅರ್ನಾಲ್ಡ್‌ ಶ್ವಾಜ್‌ರ್‍ನೆಗರ್‌ ಭಾವಚಿತ್ರಕ್ಕೆ ಮೋದಿ ಅವರ ಮುಖವನ್ನಿರಿಸಿ ಮತ್ತು ಅವರ ಕೈಯಲ್ಲಿ ಕಮದ ಹೂವಿರುವಂತೆ ಎಡಿಟ್‌ ಮಾಡಲಾಗಿದೆ. ಈ ಮೂಲಕ 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಯನ್ನು ಸೋಲಿಸಲು ಒಗ್ಗೂಡಿಕೊಂಡಿರುವ ವಿಪಕ್ಷಗಳ ‘ಇಂಡಿಯಾ’ ಕೂಟಕ್ಕೆ ಬಿಜೆಪಿ ಟಾಂಗ್‌ ನೀಡಿದೆ. ಆ.31 ಮತ್ತು ಸೆ.1 ರಂದು ಮುಂಬೈಯಲ್ಲಿ ವಿಪಕ್ಷಗಳ ಸಭೆ ನಡೆಯಲಿದೆ.

 

ಮೋದಿ 73ನೇ ಜನ್ಮದಿನ ನಿಮಿತ್ತ ಬಿಜೆಪಿ 16 ದಿನ ಸೇವಾ ಪಾಕ್ಷಿಕ

ದೆಹಲಿ :

ಪ್ರಧಾನಿ ನರೇಂದ್ರ ಮೋದಿ ಅವರ ಸೆ.17ರಂದು 73ನೇ ಜನ್ಮದಿನದ ಆಚರಿಸಿಕೊಳ್ಳುತ್ತಿದ್ದು, ಈ ಅಂಗವಾಗಿ ಬಿಜೆಪಿಯು 16 ದಿನಗಳ ಕಾಲ ರಾಷ್ಟ್ರವ್ಯಾಪಿ ‘ಸೇವಾ ಪಾಕ್ಷಿಕ’ ಆಂದೋಲನ ಆಯೋಜಿಸಿದೆ. ಆಂದೋಲನದ ಭಾಗವಾಗಿ ಸೆ.17ರಿಂದ ‘ಸೇವಾ ಹಿ ಸಂಘಟನ್‌’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು ಹಾಗೂ ಅ.2ರ ಮಹಾತ್ಮಾ ಗಾಂಧಿ ಜಯಂತಿಯವರೆಗೆ ಇದು ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಈ ಆಂದೋಲನದ ಭಾಗವಾಗಿ ರಾಷ್ಟ್ರದ ಜನತೆಗೆ ಸರ್ಕಾರದ ಸಾಧನೆಗಳನ್ನು ಪ್ರಚುರಪಡಿಸಲಾಗುವುದು. ರೋಗಿಗಳನ್ನು ಭೇಟಿಯಾಗಿ ಹಣ್ಣುಹಂಪಲುಗಳನ್ನು ವಿತರಿಸಲಾಗುವುದು. ಬಡವರಿಗೆ ವಿವಿಧ ರೀತಿಯ ಸಹಾಯ ಮಾಡಲಾಗುವುದು. ಈ ರೀತಿಯ ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವು ಹೇಳಿವೆ. ಕಳೆದ ವರ್ಷ ಕೂಡ ಇದೇ ಕಾರ್ಯಕ್ರಮವನ್ನು ಬಿಜೆಪಿ ಆಯೋಜಿಸಿತ್ತು. ಈ ನಡುವೆ ತಮ್ಮ ಹುಟ್ಟುಹಬ್ಬದಂದೇ ಮೋದಿ ಅವರು, ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?