Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸಂವಿಧಾನವೇ ಪರಮೋಚ್ಚ ಕಾನೂನು : ನ್ಯಾಯವಾದಿ ಮೋಹನ ಮಾವಿನಕಟ್ಟಿ

 

ಬೆಳಗಾವಿ : ಪ್ರಾಣಿಗಳ ಬದುಕಿಗೆ ಸೃಷ್ಟಿಯೇ ನಿಯಮ, ಮನುಷ್ಯನ ಬದುಕಿಗೆ ಸಂವಿಧಾನವೇ ನಿಯಮ. ಧರ್ಮ ಗ್ರಂಥಗಳಲ್ಲಿರುವ ಕಾನೂನುಗಳಿಗಿಂತಲೂ ಸಂವಿಧಾನವೇ ನಮಗೆ ಪರಮೋಚ್ಚ ಕಾನೂನು ಎಂದು ಬೆಳಗಾವಿಯ ಹಿರಿಯ ನ್ಯಾಯವಾದಿ ಮೋಹನ ಮಾವಿನಕಟ್ಟಿ ಅಭಿಪ್ರಾಯಪಟ್ಟರು.

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ ಹಾಗೂ ಎನ್ಎಸ್ಎಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ ಮತ್ತು ಸಂವಿಧಾನ ಅನುಷ್ಠಾನದ ವಜ್ರಮಹೋತ್ಸವದ ಕುರಿತು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ಭಾರತದ ಸಂವಿಧಾನವು ಜಗತ್ತಿನ ಅತಿ ದೀರ್ಘವಾದ ಮತ್ತು ಲಿಖಿತ ಸಂವಿಧಾನವಾಗಿದೆ. ಪ್ರಪಂಚದ ಎಲ್ಲಾ ಸಂವಿಧಾನಗಳಲ್ಲಿನ ಅತ್ಯುತ್ತಮವಾದ ಅಂಶಗಳನ್ನು ಆಯ್ದುಕೊಂಡು ಈ ನೆಲದ ಸಂಸ್ಕೃತಿಯ ಆಶಯದ ಮೇಲೆ ರಚಿತವಾಯಿತು. ವ್ಯಕ್ತಿಯ ಸಂಪೂರ್ಣ ಬದಲಾವಣೆ ಮತ್ತು ಭವಿಷ್ಯವನ್ನು ರೂಪಿಸುವಲ್ಲಿ, ಧ್ವನಿ ಇಲ್ಲದವರ ಧ್ವನಿಯಾಗಿ ಸಂವಿಧಾನ ಮಹತ್ತರ ಕಾರ್ಯ ನಿರ್ವಹಿಸುತ್ತಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ಭಾವನೆಗಳನ್ನು ಜನಮಾನಸದಲ್ಲಿ ತುಂಬಿ ತನ್ಮೂಲಕ ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ತೆಗೆದುಕೊಂಡು ಹೋಗಲು ಸಂವಿಧಾನವು ಅಡಿಪಾಯವಾಗಿದೆ.

ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳು ರಾಜ್ಯನೀತಿ ನಿರ್ದೇಶಕ ತತ್ವಗಳ ಮೂಲಕ ಭಾರತವನ್ನು ಕಲ್ಯಾಣ ರಾಜ್ಯ ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಜಿ ಹೆಗಡೆ ಮಾತನಾಡಿ ಸಂವಿಧಾನ ಅನುಷ್ಠಾನದ ವಜ್ರ ಮಹೋತ್ಸವದ ಈ ಸಂದರ್ಭದಲ್ಲಿ ಸಂವಿಧಾನದ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಇಂದು ಸಂವಿಧಾನವನ್ನೇ ಜಪಿಸುತ್ತಿವೆ. ಸಂವಿಧಾನದ ಮಹತ್ವದ ಅರಿವು ಹಿಂದೆಂದಿಗಿಂತಲೂ ಇಂದು ಎಲ್ಲಾ ಪಕ್ಷಗಳಲ್ಲಿ ಬಂದಿವೆ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಪಾರದರ್ಶಕ ಹಾಗೂ ಬಲಿಷ್ಠ ಸರ್ಕಾರವನ್ನು ರಚಿಸುವಲ್ಲಿ ಸಂವಿಧಾನ ಪಾತ್ರ ಬಹಳ ದೊಡ್ಡದು. ಭಾರತ ಸಂಕೀರ್ಣತೆಯನ್ನು ಹೊಂದಿದ ದೇಶ. ನಾಗರಿಕರಾದವನು ಸಂವಿಧಾನದ ಅಡಿಯಲ್ಲಿ ಜಾಗೃತ ಸಮಾಜವನ್ನು ನಿರ್ಮಿಸಬೇಕಿದೆ. ಸಂವಿಧಾನದ ಪರಿಧಿಯೊಳಗೆ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.

ವಿದ್ಯಾರ್ಥಿನಿ ವಿಜಯಲಕ್ಷ್ಮಿ ಹಡಪದ ನಿರೂಪಿಸಿದರು, ಲಕ್ಷ್ಮೀಬಾಯಿ ಮನೆ ವಂದಿಸಿದರು, ಪ್ರಿಯಾಂಕಾ ತಿಳಗಾರ ಪ್ರಾರ್ಥಿಸಿದರು, ವಿದ್ಯಾ ಬಿ. ವೈ ಸ್ವಾಗತಿಸಿದರು, ಮೀರಾ ನದಾಫ್ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?