Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧಿಸಿದ ಸ್ವಿಟ್ಜರ್ಲ್ಯಾಂಡ್‌ ಸರ್ಕಾರ

ಸ್ವಿಟ್ಜರ್ಲ್ಯಾಂಡ್‌ ಸರ್ಕಾರವು ಕೂಡ ಸಾರ್ವಜನಿಕ ಸ್ಥಳದಲ್ಲಿ ಕಣ್ಣು, ಮುಖ, ಮೂಗು ಬಾಯಿ ಮುಚ್ಚುವ ಮುಖಗವಸು (facial coverings in public) ಧರಿಸುವುದಕ್ಕೆ ನಿಷೇಧ ಹೇರಿದೆ. ಇದು 2025 ಜನವರಿ 1ರಿಂದ ಬುರ್ಖಾ ನಿಷೇಧ ಕಾನೂನು ಜಾರಿಗೆ ಬರಲಿದೆ.

ಸ್ವಿಟ್ಜರ್ಲ್ಯಾಂಡ್‌ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವಂತಿಲ್ಲ ಎಂಬ ಕಠಿಣ ಕಾನೂನು ಕ್ರಮವನ್ನು ಜಾರಿಗೊಳಿಸಿದೆ. ಹಾಗಾಗಿ ಸ್ವಿಟ್ಜರ್ಲ್ಯಾಂಡ್‍ನ ಸಾರ್ವಜನಿಕ ಸ್ಥಳಗಳಲ್ಲಿ ಕಣ್ಣು, ಮೂಗು, ಬಾಯಿ ಮುಖವನ್ನು ಮುಚ್ಚುವ ಬುರ್ಖಾ ಧರಿಸಿ ಓಡಾಡುವಂತಿಲ್ಲ. ಮುಂದಿನ ವರ್ಷದಲ್ಲಿ ಈ ಕಾನೂನು ಕ್ರಮ ಜಾರಿಯಾಗಲಿದೆ. ಈ ನಿಮಯವನ್ನು ಉಲ್ಲಂಘಿಸಿದವರಿಗೆ ದಂಡವನ್ನು ವಿಧಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

2021ರಲ್ಲಿ ಬುರ್ಖಾ ಪದ್ಧತಿ ನಿಷೇಧ ಮಾಡುವ ಬಗ್ಗೆ ಜನಾಭಿಪ್ರಾಯ ಸಂಗ್ರಹಣೆ ಮಾಡಿದಾಗ ಕೂಡ ಬಹುಸಂಖ್ಯೆಯ ಜನರು ಇದಕ್ಕೆ ಸಮ್ಮತಿ ನೀಡಿದ್ದರು. ಅಲ್ಲದೆ, ಈ ಮಸೂದೆಗೆ ಸ್ವಿಸ್‌ ಸಂಸತ್‌ ಮೇಲ್ಮನೆಯಲ್ಲಿ ಕೂಡ ಅಂಗೀಕಾರ ದೊರಕಿದೆ. ಅಲ್ಲದೆ ಹಾಗಾಗಿ ಸ್ವಿಟ್ಜರ್ಲ್ಯಾಂಡ್‌ ಸರ್ಕಾರ ಬುರ್ಖಾ ನಿಷೇಧಕ್ಕೆ ಮುಂದಾಗಿದೆ. ಜನವರಿ 1, 2025 ರಿಂದ ಈ ಕಠಿಣ ಕಾನೂನು ಜಾರಿಗೆ ಬರಲಿದ್ದು, ಈ ನಿಯಮವನ್ನು ಉಲ್ಲಂಘಿಸಿದವರಿಗೆ 1,000 ಸ್ವಿಸ್‌ ಫ್ರಾಂಕ್‌ ಅಂದರೆ ಅಂದಾಜು 96,280 ರೂ. ದಂಡವನ್ನು ವಿಧಿಸಲಾಗುವುದು ಎಂಬ ಕಾನೂನನ್ನು ಸ್ವಿಟ್ಜರ್ಲ್ಯಾಂಡ್‌ ಸರ್ಕಾರ ಜಾರಿಗೊಳಿಸಿದೆ ಎಂದು ರಾಯಿಟರ್ಸ್‌ ಸುದ್ದಿ ಸಂಸ್ಥೆ ತಿಳಿಸಿದೆ.

ರಾಯಿಟರ್ಸ್‌ ಸುದ್ದಿ ಸಂಸ್ಥೆ ವರದಿ ಪ್ರಕಾರ, ಕೆಲವು ಸ್ಥಳಗಳು ಮತ್ತು ಸನ್ನಿವೇಶಗಳಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ. ಅಂದರೆ ವಿಮಾನದಲ್ಲಿ ಪ್ರಯಾಣಿಸುವಾಗ, ರಾಜತಾಂತ್ರಿಕ ಸ್ಥಳಗಳು, ಪವಿತ್ರ ಸ್ಥಳಗಳು, ಪೂಜಾ ಆವರಣಗಳಲ್ಲಿ ಬುರ್ಖಾಗಳನ್ನು ಧರಿಸಬಹುದು. ಅಲ್ಲದೇ ಆರೋಗ್ಯ ಸಮಸ್ಯೆಗಳು ಹಾಗೂ ವಿಪರೀತ ಚಳಿಯ ಸಂದರ್ಭದಲ್ಲಿ ಮುಖ ಮುಚ್ಚುವಂತೆ ಬುರ್ಖಾಗಳನ್ನು ಧರಿಸಬಹುದು. ಜಾಹೀರಾತು ಮನರಂಜನಾ ಉದ್ದೇಶಗಳಿಗಾಗಿ ಬುರ್ಖಾ ಮತ್ತು ಮುಖ ಗವಸು ಧರಿಸಬಹುದು. ಇದಕ್ಕೆ ಸಂಬಂಧಿಸಿದ ಪ್ರಾಧಿಕಾರವು ಅನುಮತಿ ನೀಡಿದರೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ವೈಯಕ್ತಿಕ ರಕ್ಷಣೆಗಾಗಿ ಬುರ್ಖಾ ಅಥವಾ ಮುಖ ಗವಸು ಧರಿಸಬಹುದು ಎಂದು ಸ್ವಿಸ್‌ ಸರಕಾರ ಹೇಳಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕನ್ನಡ ಸಾಹಿತ್ಯ ಪರಿಷತ್ ಸರ್ಜರಿಗೆ ಹಾರ್ಟ್ ಸರ್ಜನ್ ಬೆಳಗಾವಿ ಮಣ್ಣಿನ ಮಗಳು ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಸಜ್ಜು ಚುನಾವಣೆ ಸ್ಪರ್ಧೆಗೆ ನಿರ್ಧಾರ | ಗೆದ್ದರೆ ಪ್ರಥಮ ಅಧ್ಯಕ್ಷೆ, ತೋಂಟದಾರ್ಯ ಮಠದ ಜಗದ್ಗುರುಗಳು ಬೆಂಬಲಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿಅಯೋಧ್ಯೆ ರಾಮಮಂದಿರದ ಮೊದಲ ಸಿಇಒ ಆಗಿ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರ ನೇಮಕಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿ8 ಜನ ಮೊಬೈಲ್ ಕಳ್ಳರನ್ನು ಬಂಧಿಸಿದ ಕಟಕೋಳ ಪೊಲೀಸರು200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ : ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಮನೆಗೆ ಕರೆತಂದ ಕುಟುಂಬ !ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ್ದ ಅಜ್ಜಿಯ ಬಂಧನಪುತ್ರಿಯರ ಶಿಕ್ಷಣಕ್ಕಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡಿ ʼಮ್ಯಾರಥಾನ್‌ʼನಲ್ಲಿ ಮೊದಲ ಸ್ಥಾನ ಪಡೆದ 47 ವರ್ಷದ ತಾಯಿ !ರಷ್ಯಾ ಅತಿಹೆಚ್ಚು ತೈಲ ಉತ್ಪಾದನೆ ಮಾಡುತ್ತಿದ್ರೂ ಈಗ ಅದಕ್ಕೇ ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್ ಪೂರೈಸುತ್ತಿರುವ ಭಾರತ ! ಕಾರಣ ?ವೈಶ್ಯ ಸಮಾಜದ ಏಕತೆ, ಪ್ರಗತಿಗೆ ಸೆ.6ರಂದು ಬೆಳಗಾವಿಯಲ್ಲಿ ವೈಶ್ಯ ಸಮ್ಮೇಳನ