Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರಂಗಾಪುರದಲ್ಲಿ ಶ್ರೀ ಮಾಧವಾನಂದ ಪ್ರಭೂಜಿಯವರ ಮಂದಿರ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಉದ್ಘಾಟನೆ ನೆರವೇರಿಸಿದ ಈರಣ್ಣ ಕಡಾಡಿ

ಮೂಡಲಗಿ: ತಿರುಪತಿ ತಿಮ್ಮಪ್ಪ ಹೊನ್ನ ಬ್ರಹ್ಮ, ಧರ್ಮಸ್ಥಳದ ಮಂಜುನಾಥ ಅನ್ನ ಬ್ರಹ್ಮ, ಪಂಡರಪೂರದ ವಿಠ್ಠಲ ನಾದಬ್ರಹ್ಮ ಹೀಗೆ ದೇಶದಲ್ಲಿ ಹಲವಾರು ಸಂಪ್ರದಾಯಗಳಿದ್ದು ಅದೇ ರೀತಿ ಇಂಚಗೇರಿಯ ಮಾಧವಾನಂದ ಪ್ರಭುಗಳ ಸಂಪ್ರದಾಯವೂ ಕೂಡ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಪ್ರಚಲಿತವಿದೆ. ಇದು ಆಧ್ಯಾತ್ಮ ಸಂಪ್ರದಾಯಿಗಳ ಸಂಘಟನೆಯಾಗಿದ್ದು, ಆತ್ಮ ಎಂಬ ಪರಮಾತ್ಮನ ನೆಮ್ಮದಿಗಾಗಿ ಆಧ್ಯಾತ್ಮ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇಂಚಗೇರಿ ಸಂಪ್ರದಾಯವು ರಂಗಾಪೂರದಂತಹ ಸಣ್ಣ ಗ್ರಾಮದಲ್ಲಿ ಪ್ರಾರಂಭವಾಗಿದ್ದು ಪ್ರಶಂಸನೀಯ ಎಂದು ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಹೇಳಿದರು.

ತಾಲೂಕಿನ ರಂಗಾಪೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಸ. ಸ. ಮಾಧವಾನಂದ ಪ್ರಭೂಜಿಯವರ ಮಂದಿರ ಲೋಕಾರ್ಪಣೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂಚಗೇರಿ ಸಂಪ್ರದಾಯ ಕೂಡ ಮೊದಲಿನಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳದು ಬಂದಿದೆ. ಮತ್ತು ಆಧ್ಯಾತ್ಮದ ಹಸಿವನ್ನು ತನಿಸುವಂತಹ ಕೆಲಸ ಕೂಡ ಅವರು ಮಾಡುತ್ತಿದ್ದಾರೆ. ಹೀಗಾಗಿ ಇಂಚಗೇರಿ ಮಠದ ಪರಂಪರೆ, ಪಂಡರಪುರದ ವಾರಕರಿ ಪರಂಪರೆ, ಸಾಯಿ ಬಾಬಾ ಈ ರೀತಿ ಮಾನವ ದೇವರ ಸಲುವಾಗಿ ಎಲ್ಲಿ ಬೆನ್ನು ಹತ್ತುತ್ತಾನೋ ಅಲ್ಲಿ ಆಧ್ಯಾತ್ಮಕ ಪರಂಪರೆ ಇದೆ. ಹೀಗಾಗಿ ರಂಗಾಪೂರ ಒಂದು ಸಣ್ಣ ಗ್ರಾಮವಾದರು ಕೂಡ ಇಂಚಗೇರಿ ಮಠದ ಮಾದವಾನಂದ ಪ್ರಭೂಜಿಯವರ ಆಶ್ರಮವನ್ನು ಸ್ಥಾಪನೆ ಮಾಡಿರುವುದು ಅವರ ಭಕ್ತಿ ಪರಂಪರೆಗೆ ಸಾಕ್ಷಿಯಾಗಿದೆ ಎಂದರು.
ರಂಗಾಪೂರ ಗ್ರಾಮದ ಶ್ರೀ ಸ. ಸ. ಮಾಧವಾನಂದ ಆಶ್ರಮದ ಆವರಣದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯಿಂದ 5 ಲಕ್ಷ ರೂ.ಗಳು ಮತ್ತು ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ 5 ಲಕ್ಷ ರೂ.ಗಳ ನೀಡಿದ ಅನುದಾನವನ್ನು ಗ್ರಾಮಸ್ಥರು ಸದ್ಬಳಕೆ ಮಾಡಿಕೊಂಡಿದ್ದಾರೆ ಎಂದರು.
ಇಂಚಗೇರಿ ಮಠದ ಪೀಠಾಧಿಪತಿಗಳಾದ ಶ್ರೀ ಸ.ಸ ರೇವಣಸಿದ್ದೇಶ್ವರ ಮಹಾರಾಜರ ದಿವ್ಯ ಸಾನ್ನಿಧ್ಯ ವಹಿಸಿ ಆರ್ಶಿವಚನ ನೀಡಿದರು. ಶಂಕ್ರೇಪ್ಪ ಮಹಾರಾಜರು, ನಾಮದೇವ ಮಹಾರಾಜರು, ರಾಮಣ್ಣ ಮಹಾರಾಜರು, ಭೀಮಣ್ಣ ಮಹಾರಾಜರು, ತಮ್ಮಣ್ಣ ಮಹಾರಾಜರು, ಕೆಂಚಪ್ಪಾ ಮಹಾರಾಜರು, ಮಹಾದೇವ ಮಸರಗುಪ್ಪಿ, ರಮೇಶ ಜಿರಗನ್ನವರ, ಮಹಾಂತೇಶ ತೇರದಾಳ, ನಿಜಗುಣಿ ಮಸರಗುಪ್ಪಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸದ್ಭಕ್ತರು ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ರಾಜ್ಯದಲ್ಲಿ ಎಸ್‌ಐಆರ್ ಅವಧಿ ವಿಸ್ತರಣೆ: ಆ. 8 ರವರೆಗೆ ಗಣತಿ ನಮೂನೆ ವಿತರಣೆನಮ್ಮ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ದಾರಿದೀಪ: ಪ್ರೊ ಜಯಶ್ರೀ ಅಬ್ಬಿಗೇರಿ ಅಭಿಮತಬಿಡದಿ ಟೌನ್ ಶಿಪ್; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಅಭಯನಾಡಗೀತೆಯಲ್ಲಿ ಬೌದ್ಧ ಪದ | ಸೇರ್ಪಡೆಗೆ ತಜ್ಞರ ಶಿಫಾರಸು-ಪಾರಸಿಕ ಜೈನ ಬೌದ್ಧರುದ್ಯಾನ ಎಂದು ಮಾರ್ಪಡಿಸಿ: ಸರ್ಕಾರಕ್ಕೆ ವರದಿಭೋಜಶಾಲಾ–ಕಮಾಲ್ ಮೌಲಾ ಪ್ರಕರಣ: ಶುಕ್ರವಾರದ ನಮಾಜ್‌ಗೆ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳ ಕಲ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ2022ರಲ್ಲಿ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸದಂತೆ ರಷ್ಯಾವನ್ನು ತಡೆದದ್ದು ಮೋದಿ : ಪೋಲೆಂಡ್ ಸಚಿವರ ಹೇಳಿಕೆಚೊಚ್ಚಲ ಬಾಹ್ಯಾಕಾಶ ಯಾನ ಕೈಗೊಂಡ ಭಾರತೀಯ ಮೂಲದ ಗಗನಯಾತ್ರಿ ಅನಿಲ ಮೆನನ್ಸಾವೂ ಬೇರ್ಪಡಿಸಲಿಲ್ಲ ಇವರಿಬ್ಬರ ಬಂಧವನ್ನು…; ಯಜಮಾನನ ಶವಯಾತ್ರೆಯಲ್ಲೇ ಪ್ರಾಣ ಬಿಟ್ಟ ನಿಷ್ಠಾವಂತ ನಾಯಿ ʼದುಗ್ಗುʼ