Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮಾರಿಹಾಳ ಪೊಲೀಸರಿಂದ ಕುರಿ ಕಳ್ಳರ ಬಂಧನ..!

ಮಾರಿಹಾಳ ಪೊಲೀಸರಿಂದ ಕುರಿ ಕಳ್ಳರ ಬಂಧನ..!

ಕಾಕತಿ, ಕ್ಯಾಂಪ್ ಹಾಗೂ ಮಹಾರಾಷ್ಟ್ರದಲ್ಲಿ ಬೈಕ್‌ ಕದ್ದವರಿಗೆ ಬಿತ್ತು ಕೊಳ..!

ಮಾರಿಹಾಳ PSI ತಂಡದಿಂದ ಮಿಂಚಿನ ಕಾರ್ಯಾಚರಣೆ..!

ಬೆಳಗಾವಿ : ಮಾರಿಹಾಳ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ದಿನಾಂಕ 06-11-2023 ರಂದು ಸಾಯಂಕಾಲ 4-00 ಗಂಟೆಯಿಂದ 7.00 ಗಂಟೆಯ ನಡುವಿನ ಅವಧಿಯಲ್ಲಿ ಬೆಳಗಾವಿ ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಮನೆಯ ಮುಂದೆ ಕಟ್ಟಿದ್ದ ಸುಮಾರು 11.000/-ರೂ ಕಿಮ್ಮತ್ತಿನ ಒಂದು ಆಡು ಮತ್ತು ಒಂದು ಹೋತ ಇವುಗಳನ್ನು ಕಳ್ಳರು ಕಳ್ಳತನ ಮಾಡಿದ್ದ ಪ್ರಕರಣವನ್ನು ಮಾರಿಹಾಳ ಪೊಲೀಸ ಠಾಣೆ ಪಿಎಸ್ಐ ಮಂಜುನಾಥ ನಾಯಿಕ ಹಾಗೂ ತಂಡ ಆ ಖದಿಮ ಕಳ್ಳರನ್ನು ಬಂಧಿಸಿ ಕುರಿ, ಹೋತ ಅಷ್ಟೇ ಅಲ್ಲದೆ ಈ ಹಿಂದೆ ಕಳ್ಳತನಲ್ಲಿ ಕದ್ದ ಮಾಡಿದ್ದ ಲಕ್ಷಾಂತರ ರೂ ವಸ್ತುಗಳನ್ನು ವಶಪಡಿಸಿಕೊಂಡು ‍ಕಳ್ಳರನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಲ್ಲದೇ ಆರೋಪಿತರು ಈ ಹಿಂದೆ ಮಹಾರಾಷ್ಟ್ರದ ಚಂದಗಡ, ಬೆಳಗಾವಿ ಕ್ಯಾಂಪ ಮತ್ತು ಕಾಕತಿ ಹಾಗೂ ವಿವಿಧ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಮೋಟರ ಸೈಕಲಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದರಿಂದ ಸದರಿ ಆರೋಪಿಗಳಾದ..

1) ಸಾಹೀಲ ಮಹಮ್ಮದ ಬೆಟಗೇರಿ, ವಯಾ: 19 ವರ್ಷ ಸಾ: ಬ್ಲಾಕ ನಂ: 10 ಮನೆ ನಂ: 10 ಶ್ರೀನಗರ ಬೆಳಗಾವಿ.

2) ಗಣೇಶ ಶಿವಪ್ಪ ಕೊಳವಿ, ವಯಾ: 18 ವರ್ಷ, ಸಾ: ಮನೆ ನಂ: 116 ಸುಣಕುಂಪಿ ತಾ: ಬೈಲಹೊಂಗಲ ಜಿ: ಬೆಳಗಾವಿ, ಹಾಲ|| ಬಸವ ಕಾಲನಿ ಬಾಕೈಟ್ ರೋಡ ಇಂಡಾಲ ಬೆಳಗಾವಿ,

3) ಪ್ರಜ್ವಲ್ ನಾಗರಾಜ ಹಿರೇಮನಿ, ವಯಾ: 20 ವರ್ಷ, ಸಾ: ಲಕ್ಕಲಕಟ್ಟಿ ತಾ: ಗಜೇಂದ್ರಗಡ ಜಿ: ಗದಗ ಹಾಲಿ: 3ನೇ ರೇಲ್ವೇ ಗೇಟ ಹತ್ತಿರ ಬೆಳಗಾವಿ ಇವರಿಂದ ಕಳ್ಳತನ ಮಾಡಿದ ಸುಮಾರು 1.75.000/- ರೂ ಕಿಮ್ಮತ್ತಿನ 05 ಮೋಟರ ಸೈಕಲಗಳನ್ನು ಹಾಗೂ 9.500/-ರೂ ಹಣವನ್ನು ವಶಪಡಿಸಿಕೊಂಡು ದಸ್ತಗೀರ ಮಾಡಿ ನ್ಯಾಯಾಲಯಕ್ಕೆ ಹಾಜರಪಡಿಸಿದ್ದಾರೆ.

DCP ಸ್ನೇಹಾ ಪಿ.ವಿ (ಅಪರಾಧ ಮತ್ತು ಸಂಚಾರ) ಮಾರ್ಗದರ್ಶನಲ್ಲಿ , ಎಸ್ ವಿ ಗಿರೀಶ, ಎಸಿಪಿ ಬೆಳಗಾವಿ ಗ್ರಾಮೀಣ ಉಪವಿಭಾಗ ಬೆಳಗಾವಿ, ಗುರುರಾಜ ಕಲ್ಯಾಣಶೆಟ್ಟಿ, ಪೊಲೀಸ ಇನ್ಸಪೆಕ್ಟರ, ಪಿಎಸ್ಐ ಮಂಜುನಾಥ, ನಾಯಕ (ಕಾ&ಸು) ಇವರ ನೇತೃತ್ವದಲ್ಲಿ ಚಂದ್ರಶೇಖರ, ಸಿ, ಪಿಎಸ್‌ಐ-2 ಹಾಗೂ ಸಿಬ್ಬಂದಿ ಜನರಾದ ಸಿಎಚ್‌ಸಿ ಬನಂ 1048 ಚಿ. ಎನ್. ಬಳಗನ್ನವರ, ಸಿಎಚ್‌ ಬನಂ: 1091 ಬಿ. ಬಿ. ಕಡ್ಡಿ, ಸಿಪಿಸಿ ಬನಂ: 1409 ಎಚ್. ಎಲ್. ಯರಗುದ್ರಿ, ಸಿಪಿಸಿ ಬನಂ: 1472 ಎ. ಎಮ್. ಜಮಖಂಡಿ, ಇವರು ಕಾರ್ಯಚರಣೆಯಲ್ಲಿ ಭಾಗಿಯಾಗಿ ಪ್ರಕರಣವನ್ನು ಭೇದಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ/ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ ಆಯುಕ್ತ ಸಿದ್ಧರಾಮಪ್ಪ ಅವರು ಶ್ಲಾಘಿಸಿ ನಗದು ಬಹುಮಾನ ಘೋಷಿಸಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕನ್ನಡ ಸಾಹಿತ್ಯ ಪರಿಷತ್ ಸರ್ಜರಿಗೆ ಹಾರ್ಟ್ ಸರ್ಜನ್ ಬೆಳಗಾವಿ ಮಣ್ಣಿನ ಮಗಳು ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಸಜ್ಜು ಚುನಾವಣೆ ಸ್ಪರ್ಧೆಗೆ ನಿರ್ಧಾರ | ಗೆದ್ದರೆ ಪ್ರಥಮ ಅಧ್ಯಕ್ಷೆ, ತೋಂಟದಾರ್ಯ ಮಠದ ಜಗದ್ಗುರುಗಳು ಬೆಂಬಲಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿಅಯೋಧ್ಯೆ ರಾಮಮಂದಿರದ ಮೊದಲ ಸಿಇಒ ಆಗಿ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರ ನೇಮಕಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿ8 ಜನ ಮೊಬೈಲ್ ಕಳ್ಳರನ್ನು ಬಂಧಿಸಿದ ಕಟಕೋಳ ಪೊಲೀಸರು200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ : ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಮನೆಗೆ ಕರೆತಂದ ಕುಟುಂಬ !ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ್ದ ಅಜ್ಜಿಯ ಬಂಧನಪುತ್ರಿಯರ ಶಿಕ್ಷಣಕ್ಕಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡಿ ʼಮ್ಯಾರಥಾನ್‌ʼನಲ್ಲಿ ಮೊದಲ ಸ್ಥಾನ ಪಡೆದ 47 ವರ್ಷದ ತಾಯಿ !ರಷ್ಯಾ ಅತಿಹೆಚ್ಚು ತೈಲ ಉತ್ಪಾದನೆ ಮಾಡುತ್ತಿದ್ರೂ ಈಗ ಅದಕ್ಕೇ ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್ ಪೂರೈಸುತ್ತಿರುವ ಭಾರತ ! ಕಾರಣ ?ವೈಶ್ಯ ಸಮಾಜದ ಏಕತೆ, ಪ್ರಗತಿಗೆ ಸೆ.6ರಂದು ಬೆಳಗಾವಿಯಲ್ಲಿ ವೈಶ್ಯ ಸಮ್ಮೇಳನ