Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ದ್ವಿತೀಯ PU ಫಲಿತಾಂಶ ಪ್ರಕಟ-ಉಡುಪಿ ಈ ಸಲವು ಪ್ರಥಮ

ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಮಂಗಳವಾರ ಮಧ್ಯಾಹ್ನ 12-40ಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಘೋಷಿಸಿದ್ದು, ಈ ಬಾರಿಯೂ ನಿರೀಕ್ಷೆಯಂತೆ ಉಡುಪಿ ಮೊದಲ ಸ್ಥಾನ(ಶೇ.93.90 )ಗಳಿಸಿದ್ದು, ಯಾದಗಿರಿ(ಶೇ.48.45) ಕೊನೆಯ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ(93.57) ದ್ವಿತೀಯ ಸ್ಥಾನ ಗಳಿಸಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ.

ಮಾರ್ಚ್‌ 1ರಿಂದ 20ರವರೆಗೆ ರಾಜ್ಯಾದ್ಯಂತ 1,771 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪಿಯು ಪರೀಕ್ಷೆಗೆ ಒಟ್ಟು 7ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಮುಗಿದ ಮರುದಿನದಿಂದಲೇ ರಾಜ್ಯಾದ್ಯಂತ 76 ಕೇಂದ್ರಗಳಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮೌಲ್ಯ ಮಾಪಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿದ್ದರು.

ಏಪ್ರಿಲ್‌ 3ರ ವೇಳೆಗೆ ಮೌಲ್ಯಮಾಪನ ಪೂರ್ಣಗೊಂಡಿತ್ತು. ಇದೀಗ ಫಲಿತಾಂಶದ ಕಂಪ್ಯೂಟರೀಕರಣ ಕಾರ್ಯ ಮುಗಿದಿದ್ದರಿಂದ, ಫಲಿತಾಂಶವನ್ನು ಘೋಷಿಸಿದೆ. ವಿದ್ಯಾರ್ಥಿಗಳು ಅಪರಾಹ್ನ 1-30ಕ್ಕೆ ವೆಬ್‌ ಸೈಟ್‌ ನಲ್ಲಿ ಫಲಿತಾಂಶ ನೋಡಬಹುದಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಬಳ್ಳಾರಿ ಮೂಲದ ಸಂಜನಾ ಬಾಯಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸಂಜನಾ 600/597 ಅಂಕ ಗಳಿಸಿದ್ದಾರೆ.

65.37 ಫಲಿತಾಂಶ ಪಡೆಯುವ ಮೂಲಕ ಬೆಳಗಾವಿ ಜಿಲ್ಲೆ 26ನೇ ಸ್ಥಾನಕ್ಕೆ ಕುಸಿತ ಕಂಡಿದೆ.

 



 

PUC Results 2025: ಯಾವ ಜಿಲ್ಲೆ ಸಾಧನೆ; ಫಲಿತಾಂಶವನ್ನು ಇಲ್ಲಿ ಚೆಕ್ ಮಾಡಿ

ಬೆಂಗಳೂರು: 2025 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ಮಂಡಳಿಯ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಶಿಕ್ಷಣ ಸಚಿವರ ಸುದ್ದಿಗೋಷ್ಠಿ ನಂತರ ಮಧ್ಯಾಹ್ನ 12 ಗಂಟೆಯ ನಂತರ https://karresults.nic.in/ಫಲಿತಾಂಶವನ್ನು ಪರಿಶೀಲಿಸಬಹುದು.

2024-25 ರ ದ್ವಿತೀಯ ಪಿಯು ಪರೀಕ್ಷೆ-1 ಮಾರ್ಚ್ 1 ರಿಂದ ಆರಂಭವಾಗಿ ಮಾರ್ಚ್ 20ಕ್ಕೆ ಅಂತ್ಯವಾಗಿತ್ತು. ರಾಜ್ಯದ 5,050 ಪದವಿಪೂರ್ವ ಕಾಲೇಜುಗಳ ಸುಮಾರು 7.13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಪಾಲರ ಪತ್ನಿಯ ಆರೋಗ್ಯದಲ್ಲಿ ಏರುಪೇರು :  ದಿಢೀರ್ ಇಂದೋರ್ ಗೆ ತೆರಳಿದ ಗೆಹಲೋಟ್ -ಸಿಎಂ ರಾಜೀನಾಮೆ ಪತ್ರ ಯಾರಿಗೆ ಸಲ್ಲಿಸುತ್ತಾರೆ ?ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರು