Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಥರ್ಡ್ ಪಾರ್ಟಿ ಆ್ಯಪ್ ಬಳಸಿ ಪ್ರಿಪೇಯ್ಡ್ ಮೂಲಕ UPI ಪಾವತಿಗೆ RBI ಅನುಮತಿ

ಮುಂಬೈ: ಪ್ರೀಪೇಡ್ ಪಾವತಿಯ ಅವಕಾಶ ಹೊಂದಿರುವವರಿಗೆ ಥರ್ಡ್ ಪಾರ್ಟಿ ಮೊಬೈಲ್‌ ಅಪ್ಲಿಕೇಷನ್ ಬಳಸಿ ಯುಪಿಐ ಪಾವತಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿಸಿದೆ.

ಯುನಿಫೈಡ್ ಪೇಮೆಂಟ್ಸ್ ಇಂಟ‌‌ಫೇಸ್ (ಯುಪಿಐ) ಮೂಲಕ ಸಂಪೂರ್ಣ ಕೆವೈಸಿ ಆಗಿರುವ ಪ್ರಿಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್ (ಪಿಪಿಐ) ಹಣ ಪಡೆಯಲು ಹಾಗೂ ಪಾವತಿ ಮಾಡಲು ಥರ್ಡ್ ಪಾರ್ಟಿ ಮೊಬೈಲ್‌ ಅಪ್ಲಿಕೇಷನ್ ಬಳಸಬಹುದು ಎಂದು ಬ್ಯಾಂಕ್‌ ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ.

'ಈ ಸೌಲಭ್ಯ ಪಡೆಯಲು ಗ್ರಾಹಕರ ಸಂಪೂರ್ಣ ಕೆವೈಸಿ ಆಗಿರಬೇಕು. ಪಿಪಿಐ ಮೂಲಕ ಯುಪಿಐ ವಹಿವಾಟು ನಡೆಸಲು ಗ್ರಾಹಕರು ಸದ್ಯ ಇರುವ ಪಿಪಿಐ ದಾಖಲೆಗಳನ್ನು ದೃಢೀಕರಿಸಬೇಕಿದೆ. ಇಂಥ ಹಣಕಾಸು ವ್ಯವಹಾರಗಳನ್ನು ಯುಪಿಐ ವ್ಯವಸ್ಥೆಗೆ ಹೋಗುವ ಮೊದಲೇ ಅನುಮತಿಸಲಾಗುವುದು' ಎಂದು ಹೇಳಲಾಗಿದೆ.

ಪಾವತಿ ವ್ಯವಸ್ಥೆ ಪೂರೈಕೆದಾರರಾಗಿ ಪಿಪಿಐ ವಿತರಕರು ಬೇರೆ ಯಾವುದೇ ಬ್ಯಾಂಕ್ ಅಥವಾ ಇತರ ಯಾವುದೇ ಪಿಪಿಐ ಪೂರೈಕೆದಾರರ ಗ್ರಾಹಕರಾಗಿರಬಾರದು. ಗಿಫ್ಟ್ ಕಾರ್ಡ್‌ಗಳು, ಮೆಟ್ರೊ ರೈಲು ಕಾರ್ಡ್ ಮತ್ತು ಡಿಜಿಟಲ್ ವ್ಯಾಲೆಟ್ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡುವ
ಅವಕಾಶವನ್ನು ಪಿಪಿಐ ಹೊಂದಿರುವವರಿಗೆ ನೀಡುವ ಗುರಿ ಇದೆ ಎಂದು ಆರ್‌ಬಿಐ ಹೇಳಿದೆ.

ಸದ್ಯ ಇರುವ ವ್ಯವಸ್ಥೆಯಲ್ಲಿ ಯುಪಿಐ ಪಾವತಿಯು ಬ್ಯಾಂಕ್‌ ಖಾತೆಗಳ ನಡುವೆ ನಡೆಯುತ್ತಿದೆ. ಇದಕ್ಕಾಗಿ ಬ್ಯಾಂಕ್‌ನ ಆ್ಯಪ್‌ ಅಥವಾ ಇತರ ಥರ್ಡ್ ಪಾರ್ಟಿ ಆ್ಯಪ್‌ಗಳನ್ನು ಬಳಸಲಾಗುತ್ತಿದೆ. ಇದೀಗ, ಪಿಪಿಐ ಪೂರೈಕೆದಾರರ ಮೂಲಕ ಮೊಬೈಲ್‌ ಅಪ್ಲಿಕೇಷನ್ ಬಳಸಿ ಯುಪಿಐ ಪಾವತಿ ಮಾಡಬಹುದಾಗಿದೆ.

ಮೊಬೈಲ್ ಫೋನ್ ಬಳಸಿ ಬ್ಯಾಂಕ್ ಖಾತೆಗಳ ನಡುವೆ ತ್ವರಿತ ಹಣಕಾಸು ವ್ಯವಹಾರಗಳನ್ನು ನಡೆಸಲು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಯುಪಿಐ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇದರಿಂದ ವಸ್ತುಗಳ ಖರೀದಿ ಹಾಗೂ ಇನ್ನಿತರ ಯಾವುದೇ ಸೇವೆಯನ್ನು ಪಡೆಯಲು ಪಿಪಿಐ ಪ್ರಮುಖ ಸಾಧನವಾಗಿತ್ತು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ರಾಜ್ಯದಲ್ಲಿ ಎಸ್‌ಐಆರ್ ಅವಧಿ ವಿಸ್ತರಣೆ: ಆ. 8 ರವರೆಗೆ ಗಣತಿ ನಮೂನೆ ವಿತರಣೆನಮ್ಮ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ದಾರಿದೀಪ: ಪ್ರೊ ಜಯಶ್ರೀ ಅಬ್ಬಿಗೇರಿ ಅಭಿಮತಬಿಡದಿ ಟೌನ್ ಶಿಪ್; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಅಭಯನಾಡಗೀತೆಯಲ್ಲಿ ಬೌದ್ಧ ಪದ | ಸೇರ್ಪಡೆಗೆ ತಜ್ಞರ ಶಿಫಾರಸು-ಪಾರಸಿಕ ಜೈನ ಬೌದ್ಧರುದ್ಯಾನ ಎಂದು ಮಾರ್ಪಡಿಸಿ: ಸರ್ಕಾರಕ್ಕೆ ವರದಿಭೋಜಶಾಲಾ–ಕಮಾಲ್ ಮೌಲಾ ಪ್ರಕರಣ: ಶುಕ್ರವಾರದ ನಮಾಜ್‌ಗೆ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳ ಕಲ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ2022ರಲ್ಲಿ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸದಂತೆ ರಷ್ಯಾವನ್ನು ತಡೆದದ್ದು ಮೋದಿ : ಪೋಲೆಂಡ್ ಸಚಿವರ ಹೇಳಿಕೆಚೊಚ್ಚಲ ಬಾಹ್ಯಾಕಾಶ ಯಾನ ಕೈಗೊಂಡ ಭಾರತೀಯ ಮೂಲದ ಗಗನಯಾತ್ರಿ ಅನಿಲ ಮೆನನ್ಸಾವೂ ಬೇರ್ಪಡಿಸಲಿಲ್ಲ ಇವರಿಬ್ಬರ ಬಂಧವನ್ನು…; ಯಜಮಾನನ ಶವಯಾತ್ರೆಯಲ್ಲೇ ಪ್ರಾಣ ಬಿಟ್ಟ ನಿಷ್ಠಾವಂತ ನಾಯಿ ʼದುಗ್ಗುʼ