Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿಯಲ್ಲಿ ಬಾಣಂತಿ, ಹಸುಳೆ ಸಾವು ಪ್ರತಿಭಟಿಸಿ ಪ್ರತಿಭಟನೆ

 

ಬೆಳಗಾವಿ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಾಣಂತಿಯರು ಹಾಗೂ ಹಸುಗೂಸುಗಳ ಸಾವಿನ ಪ್ರಕರಣ ತಡೆಗಟ್ಟಬೇಕು ಎಂದು ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ- ಕಮ್ಯುನಿಸ್ಟ್ (ಎಸ್‌ಯುಸಿಐ) ಹಾಗೂ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಅಂಬೇಡ್ಕರ್ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಕಾರ್ಯಕರ್ತರು, ಧರಣಿ ನಡೆಸಿದರು.

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು, ಹಸುಗೂಸುಗಳ ಸಾವು ದಿನೇದಿನೇ ಹೆಚ್ಚುತ್ತಿದೆ. ಆರೋಗ್ಯ ಇಲಾಖೆ ಸಾವಿನ ಪ್ರಮಾಣ ತಡೆಗಟ್ಟಲು ಸಂಪೂರ್ಣ ವಿಫಲವಾಗಿದೆ. ಈ ಸಾವಿಗೆ ವೈದ್ಯರ ನಿರ್ಲಕ್ಷ್ಯ ಹಾಗೂ ಗುಣಮಟ್ಟದ ಔಷಧೋಪಚಾರ ಇಲ್ಲದಿರುವುದೇ ಕಾರಣ ಎಂದು ಪ್ರತಿಭಟನಾಕಾರರು ದೂರಿದರು.

ರಾಜ್ಯದ ಎಲ್ಲ ಕಡೆಯೂ ಗರ್ಭಿಣಿಯರು, ಬಾಣಂತಿಯರ ಸಾವು ನಿರಂತರ ಸಂಭವಿಸುತ್ತಿವೆ. ಆದರೆ, ಸರ್ಕಾರ ಎಲ್ಲವನ್ನೂ ಮುಚ್ಚಿ ಹಾಕುತ್ತಿದೆ ಎಂದು ಆರೋಪಿಸಿದರು.

ರಾಜ್ಯದ ಸರ್ಕಾರಿ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇತ್ತೀಚಿನ ದಿನಗಳಲ್ಲಿ ಕಳಪೆ ಔಷಧಿಗಳು ಹಾಗೂ ವೈದ್ಯಕೀಯ ನಿರ್ಲಕ್ಷದಿಂದಾಗಿ ಬೆಳಗಾವಿ, ಬಳ್ಳಾರಿ, ಚಿಗಟೇರಿ, ಸಿದ್ದಾಪುರ ಸೇರಿ ವಿವಿಧ ಕಡೆಗಳಲ್ಲಿ ಬಾಣಂತಿಯರು, ಹಸುಗೂಸುಗಳು ಸಾವನ್ನಪ್ಪಿವೆ. ಹಲವಾರು ಆಸ್ಪತ್ರೆಗಳಲ್ಲಿ ಅಗತ್ಯ ನುರಿತ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಮೂಲ ಸೌಕರ್ಯಗಳೇ ಇಲ್ಲ' ಎಂದು ಎಸ್‌ಯುಸಿಐ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ಡಳ್ಳಿ ಆರೋಪಿಸಿದರು.

ರಾಜ್ಯದಲ್ಲಿ ಔಷಧಿಗಳ ಕೊರತೆ ಕಾಡುತ್ತಿದೆ. ಅವಶ್ಯಕತೆಯ ಶೇ 30ರಷ್ಟು ಮಾತ್ರ ಔಷಧಗಳು ಉಗ್ರಾಣದಲ್ಲಿ ಇವೆ. ಎಲ್ಲ ಗೊತ್ತಿದ್ದರೂ ಸಂಬಂಧಿಸಿದ ಸಚಿವರು ಕಣ್ಣುಮುಚ್ಚಿ ಕುಳಿತಿದ್ದಾರೆ. ಮಾತ್ರವಲ್ಲ; ಔಷಧಿಗಳ ಕೊರತೆಯಿಂದ ಸಾವು ಸಂಭವಿಸುತ್ತಿದ್ದರೂ ಬಜೆಟ್‌ನಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂದೂ ದೂರಿದರು.

ಎಐಕೆಕೆಎಂಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಲಕ್ಷ್ಮಣ ಜಡಗನ್ನವರ ಮಾತನಾಡಿ, ಬೆಳಗಾವಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ಸಮಸ್ಯೆಗಳ ಆಗರಗಳಾಗಿವೆ. ವೈದ್ಯರು, ನರ್ಸ್‌, ಸಿಬ್ಬಂದಿ ಇಲ್ಲ. ಆಧುನಿಕ ಯಂತ್ರೋಪಕರಣಗಳಿಲ್ಲ. ಗುಣಮಟ್ಟದ ಔಷಧಿಗಳು ಬೇಕಾದರೆ ಖಾಸಗಿ ಆಸ್ಪತ್ರೆಗಳಿಗೆ ಬರೆದು ಕೊಡುತ್ತಿದ್ದಾರೆ.
ಆರೋಗ್ಯ ರಕ್ಷಣೆಗೆ ಬರುವ ರೋಗಿಗಳು ಮತ್ತಷ್ಟು ಅನಾರೋಗ್ಯ ಪೀಡಿತರಾಗುವಂತಹ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಬಾಣಂತಿಯರು ಮೃತಪಡುತ್ತಿದ್ದಾರೆ ಎಂದು ಆರೋಪ ಮಾಡಿದರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?