Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕೇಂದ್ರ ಸರ್ಕಾರ ಜಾರಿಗೊಳಿಸಿರುವ PAN 2.0 ವಿಶೇಷತೆ

ನವದೆಹಲಿ: ಕೇಂದ್ರ ಸಚಿವ ಸಂಪುಟ ಸಭೆಯು ತೆರಿಗೆದಾರರ ನೋಂದಣಿ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವ ಪ್ಯಾನ್ 2.0 (PAN 2.0) ಅನುಮೋದನೆ ನೀಡಿದೆ.

ಪ್ಯಾನ್ 2.0 ಈಗಿರುವ ಪ್ಯಾನ್‌ ಕಾರ್ಡ್‌ ಅಡ್ವಾನ್ಸ್ ವರ್ಶನ್ ಆಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ತೆರಿಗೆದಾರರ ಸೇವೆಗಳನ್ನು ಸುಧಾರಿಸಲು ಮತ್ತು ಸುಲಲಿತ ವ್ಯಾಪಾರ ವಹಿವಾಟಿನ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಯೋಜನೆಗೆ ಸರ್ಕಾರ ₹1,435 ಕೋಟಿ ವ್ಯಯಿಸುತ್ತಿದೆ.

ಪ್ಯಾನ್ 2.0ನ ಲಕ್ಷಣಗಳೆಂದರೆ
ಹಣಕಾಸಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳಲ್ಲಿ ಪ್ಯಾನ್ ಕಾರ್ಡ್ ಅತಿ ಅಗತ್ಯವಾಗಿರುವುದರಿಂದ ಭದ್ರತೆ ಮುಖ್ಯವಾಗಿರುತ್ತದೆ. ಈ ದೃಷ್ಟಿಯಿಂದ ಪ್ಯಾನ್ 2.0 ವ್ಯವಸ್ಥೆಯಲ್ಲಿ ಕ್ಯೂಆರ್ ಕೋಡ್ ಸಹಿತ ಕಾರ್ಡ್‌ಗಳು ಲಭ್ಯವಾಗಲಿದೆ.

ಸರ್ಕಾರದ ಡಿಜಿಟಲ್ ವ್ಯವಸ್ಥೆ ಎಲ್ಲೆಲ್ಲಿ ಅಗತ್ಯವೋ ಅಲ್ಲೆಲ್ಲಾ ಕಡೆ ಈ ಕಾರ್ಡ್ ಬಳಕೆಯಾಗಲಿದೆ. ಜತೆಗೆ ಸಾರ್ವತ್ರಿಕ ಗುರುತಿಸುವಿಕೆಯಾಗಲಿದೆ.
ಈ ಹೊಸ ಆವೃತ್ತಿಯು PAN/TAN ಸೇವೆಗಳಿಗೆ ಒಂದೇ ವೇದಿಕೆಯಾಗಲಿದೆ.

ಈ ಯೋಜನೆಯು ಪರಿಸರ ಸ್ನೇಹಿ, ಭದ್ರತೆ ಮತ್ತು ವೇಗವಾಗಿ ಕಾರ್ಯನಿರ್ವಹಿಸಬಲ್ಲ ವ್ಯವಸ್ಥೆಯಾಗಲಿದೆ.

ಪ್ಯಾನ್ 2.0 ಉಪಯೋಗಗಳು:
ತೆರಿಗೆದಾರರಿಗೆ ನೋಂದಣಿ ಪ್ರಕ್ರಿಯೆ ವೇಗವಾಗಿ ಮತ್ತು ಬಳಕೆದಾರರ ಸ್ನೇಹಿಯಾಗಿರಲಿದೆ. ಈಗಾಗಲೇ ಇರುವ ಪ್ಯಾನ್ ಕಾರ್ಡ್ ಅನ್ನು 2.0ಗೆ ಅಪ್‌ಗ್ರೇಡ್ ಮಾಡಿಕೊಳ್ಳಬೇಕು. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ತೆರಿಗೆದಾರರು, ಉದ್ಯಮಗಳಿಗೆ ಹಣಕಾಸಿನ ವ್ಯವಹಾರವನ್ನು ಸುದಾರಿಸುತ್ತದೆ ಜತೆಗೆ ನಿಖರ ಮಾಹಿತಿಯನ್ನು ನೀಡುತ್ತದೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನೀಡಿದ ಮಾಹಿತಿ ಪ್ರಕಾರ, ಈಗಿರುವ ಪ್ಯಾನ್ ನಂಬರ್ ಅನ್ನು ಬದಲಿಸುವ ಅವಶ್ಯಕತೆ ಇಲ್ಲ. ಕಾರ್ಡ್ ಅಸಿಂಧುಗೊಳ್ಳುವುದಿಲ್ಲ. ಆದರೆ, ಅಪ್​ಗ್ರೇಡ್ ಆಗಿರುವ ಹೊಸ ಪ್ಯಾನ್ ಕಾರ್ಡ್ ಪಡೆಯಬೇಕು.

ಹೊಸ ಪ್ಯಾನ್ ಕಾರ್ಡ್ ಪಡೆದರೆ ಅದರಲ್ಲಿ ಹಳೆಯ ಪ್ಯಾನ್ ನಂಬರ್ ಬದಲಾಗುವುದಿಲ್ಲ. ಆದರೆ, ಕ್ಯೂಆರ್ ಕೋಡ್​ನಂತಹ ಹೊಸ ಫೀಚರ್​ಗಳಿರುತ್ತವೆ. ಹೊಸ ಪ್ಯಾನ್ ಕಾರ್ಡ್​ಗೆ ಶುಲ್ಕ ನೀಡಬೇಕಿಲ್ಲ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ರಾಜ್ಯದಲ್ಲಿ ಎಸ್‌ಐಆರ್ ಅವಧಿ ವಿಸ್ತರಣೆ: ಆ. 8 ರವರೆಗೆ ಗಣತಿ ನಮೂನೆ ವಿತರಣೆನಮ್ಮ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ದಾರಿದೀಪ: ಪ್ರೊ ಜಯಶ್ರೀ ಅಬ್ಬಿಗೇರಿ ಅಭಿಮತಬಿಡದಿ ಟೌನ್ ಶಿಪ್; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಅಭಯನಾಡಗೀತೆಯಲ್ಲಿ ಬೌದ್ಧ ಪದ | ಸೇರ್ಪಡೆಗೆ ತಜ್ಞರ ಶಿಫಾರಸು-ಪಾರಸಿಕ ಜೈನ ಬೌದ್ಧರುದ್ಯಾನ ಎಂದು ಮಾರ್ಪಡಿಸಿ: ಸರ್ಕಾರಕ್ಕೆ ವರದಿಭೋಜಶಾಲಾ–ಕಮಾಲ್ ಮೌಲಾ ಪ್ರಕರಣ: ಶುಕ್ರವಾರದ ನಮಾಜ್‌ಗೆ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳ ಕಲ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ2022ರಲ್ಲಿ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸದಂತೆ ರಷ್ಯಾವನ್ನು ತಡೆದದ್ದು ಮೋದಿ : ಪೋಲೆಂಡ್ ಸಚಿವರ ಹೇಳಿಕೆಚೊಚ್ಚಲ ಬಾಹ್ಯಾಕಾಶ ಯಾನ ಕೈಗೊಂಡ ಭಾರತೀಯ ಮೂಲದ ಗಗನಯಾತ್ರಿ ಅನಿಲ ಮೆನನ್ಸಾವೂ ಬೇರ್ಪಡಿಸಲಿಲ್ಲ ಇವರಿಬ್ಬರ ಬಂಧವನ್ನು…; ಯಜಮಾನನ ಶವಯಾತ್ರೆಯಲ್ಲೇ ಪ್ರಾಣ ಬಿಟ್ಟ ನಿಷ್ಠಾವಂತ ನಾಯಿ ʼದುಗ್ಗುʼ