Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಪ್ರತ್ಯುತ್ತರ ನೀಡುವುದಾಗಿ ಹೇಳಿದ ಪಾಕಿಸ್ತಾನದ ಪ್ರಧಾನಿ

ಇಸ್ಲಾಮಾಬಾದ್‌: ಉಗ್ರಗಾಮಿಗಳ ಅಡಗು ದಾಣದ ಮೇಲೆ ದಾಳಿ ನಡೆದಿರುವುದನ್ನು ಖಚಿತಪಡಿಸಿರುವ

ಪಾಕಿಸ್ತಾನ ಸೇನೆಯ ವಕ್ತಾರ ಲೆ.ಜನರಲ್ ಅಹಮದ್ ಶರೀಫ್ ಚೌಧರಿ, ದಾಳಿ ನಡೆದ ಬಳಿಕ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ. ಎಲ್ಲೆಲ್ಲಿ ಹಾನಿಯಾಗಿದೆ ಎಂಬುದರ ಮಾಹಿತಿ ನೀಡಿದ್ದಾರೆ.

ಬೆವಾಲ್ಪುರದಲ್ಲಿ ಸುಭಾನ್‌ ಮಸೀದಿಯನ್ನು ಗುರಿಯಾಗಿಸಿ ಭಾರತೀಯ ಸೇನೆ ದಾಳಿ ನಡೆಸಿದೆ. ಈ ಪ್ರದೇಶದಲ್ಲಿ ನಾಲ್ಕು ಮಸೀದಿಗಳು ಧ್ವಂಸವಾಗಿದೆ, ಜನರು ವಾಸವಿದ್ದ ವಸತಿ ಸಮುಚ್ಚಯ ನಾಶವಾಗಿದೆ. ಮುಜಾಫರಾಬಾದ್‌ನಲ್ಲಿ ಬಿಲಾಲ್ ಮಸೀದಿಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಮಸೀದಿ ಸಂಪೂರ್ಣವಾಗಿ ನಾಶವಾಗಿದೆ. ಇದರ ಜತೆಗೆ ಕೊಟ್ಲಿ, ಅಬ್ಬಾತ್ ಮಸೀದಿ ಕೂಡ ನೆಲಸಮವಾಗಿದೆ.

ಮುರ್ಡಿಕೆ, ಉಮಾಲ್ಕರ್‌ನಲ್ಲಿ ನಾಲ್ಕು ಕ್ಷಿಪಣಿಗಳು ಒಳನುಗ್ಗಿದ್ದು, ಮಸೀದಿ ನಾಶವಾಗಿದೆ. ಸಿಯಾಲ್‌ಕೋಟ್‌ನಲ್ಲಿ ಒಂದು ಕ್ಷಿಪಣಿ ಗುರಿತಪ್ಪಿ ಮೈದಾನದಲ್ಲಿ ಬಿದ್ದಿದೆ, ಇದರಿಂದ ಯಾವುದೇ ಹಾನಿಯಾಗಿಲ್ಲ. ಶಕರ್‌ಗಢ ಬಳಿ ಎರಡು ಬಾರಿ ಕ್ಷಿಪಣಿ ದಾಳಿ ನಡೆದಿದ್ದು ಯಾವುದೇ ಹಾನಿಯಾಗಿಲ್ಲ.

ಕ್ಷಿಪಣಿ ದಾಳಿ ನಡೆದಿದ್ದು ಯಾವುದೇ ಹಾನಿಯಾಗಿಲ್ಲ. ಒಂದು ಔಷಧಾಲಯಕ್ಕೆ ಸಣ್ಣಪುಟ್ಟ ಹಾನಿಯಾಗಿದೆ. ಪಾಕಿಸ್ತಾನದಲ್ಲಿ ಒಟ್ಟು ಐದು ಕಡೆ ದಾಳಿಯಾಗಿದೆ ಎಂದು ಚೌಧರಿ ತಿಳಿಸಿದ್ದಾರೆ.

ಆದರೆ ಎಷ್ಟು ಜನ ಮೃತಪಟ್ಟಿದ್ದಾರೆ ಎನ್ನುವ ಬಗ್ಗೆ ನಿಖರ ಮಾಹಿತಿಯನ್ನು ತಿಳಿಸಿಲ್ಲ.

'ಭಾರತ ಹೇರಿದ ಈ ಯುದ್ಧ ಸಂಕೇತಕ್ಕೆ ಸೂಕ್ತ ಪ್ರತ್ಯುತ್ತರ ನೀಡುವ ಹಕ್ಕು ಪಾಕಿಸ್ತಾನಕ್ಕೆ ಇದೆ, ನಿಜಕ್ಕೂ ಬಲವಾದ ಪ್ರತಿಕ್ರಿಯೆ ನೀಡಲಾಗುವುದು. ಶತ್ರುವನ್ನು ಹೇಗೆ ಎದುರಿಸಬೇಕೆಂದು ಚೆನ್ನಾಗಿ ತಿಳಿದಿದೆ' ಎಂದು ಪಾಕಿಸ್ತಾನದ ಶಹಬಾಜ್ ಶರೀಫ್ ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು
ಪಂಜಾಬ್ ಪ್ರಾಂತ್ಯದ ಮೇಲಿನ ಭಾರತದ ಕ್ಷಿಪಣಿ ದಾಳಿ ಯುದ್ಧದ ಸಂಕೇತ' ಎಂದಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್, ಪ್ರತ್ಯುತ್ತರ ನೀಡುವ ಎಲ್ಲ ಹಕ್ಕು ನಮ್ಮ ದೇಶಕ್ಕಿದೆ ಎಂದಿದ್ದಾರೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಪಾಲರ ಪತ್ನಿಯ ಆರೋಗ್ಯದಲ್ಲಿ ಏರುಪೇರು :  ದಿಢೀರ್ ಇಂದೋರ್ ಗೆ ತೆರಳಿದ ಗೆಹಲೋಟ್ -ಸಿಎಂ ರಾಜೀನಾಮೆ ಪತ್ರ ಯಾರಿಗೆ ಸಲ್ಲಿಸುತ್ತಾರೆ ?ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರು