Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಬೆಂಗಳೂರಿನಲ್ಲಿ ನಡೆದ ವಿವಿಧ ಅಪರಾಧ ಪ್ರಕರಣಗಳ ಸಂಕ್ಷಿಪ್ತ ನೋಟ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಅಪರಾಧ ಪ್ರಕರಣಗಳು ವರದಿಯಾಗಿದ್ದು, ಅವುಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಬ್ಬರು ರೌಡಿಶೀಟರ್‌ಗಳನ್ನು ಬಂಧಿಸಿದ್ದಾರೆ.

1. ನ್ಯಾಯಾಲಯಕ್ಕೆ ಹಾಜರಾಗದ ಇಬ್ಬರು ರೌಡಿಶೀಟರ್‌ಗಳ ಬಂಧನ:

ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ ಇಬ್ಬರು ರೌಡಿಶೀಟರ್‌ಗಳನ್ನು ಸಿಸಿಬಿ ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಅ.29ರಂದು ರೌಡಿಶೀಟರ್ ಗಳನ್ನು ಬಂಧಿಸಿ=ಲಾಗಿದೆ. ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಜ್ವಲ್ ಎಚ್.ಆರ್. ಹಾಗೂ ವಿಲ್ಸನ್ ಗಾರ್ಡನ್ ಠಾಣೆ ವ್ಯಾಪ್ತಿಯ ಮೊಹಮ್ಮದ್ ಮೊಯಿನುದ್ದೀನ್ ಬಂಧಿತರು. ಇವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.

2. ಆತ್ಮಹತ್ಯೆಗೆ ಯತ್ನಿಸಿದ ಮೂವರ ರಕ್ಷಣೆ:

ಕೌಟುಂಬಿಕ ಕಲಹ, ಸಮಸ್ಯೆಯಿಂದ ಮನನೊಂದು ಮಾತ್ರೆ ಸೇವಿಸಿದ್ದ 33 ವರ್ಷದ ಮಹಿಳೆಯನ್ನು ಅಲ್ಲಾಲಸಂದ್ರ ಕೆರೆ ಸಮೀಪದಿಂದ ಪೊಲೀಸರು ರಕ್ಷಿಸಿದ್ದಾರೆ. ಮತ್ತೊಂದು ಘಟನೆಯಲ್ಲಿ ಕುದುನೂರು ಪ್ರದೇಶದ ಕಾಲೇಜು ಆವರಣದಲ್ಲಿ ಕೀಟನಾಶಕ ಸೇವಿಸಿದ್ದ 18 ವರ್ಷದ ಯುವಕ ಹಾಗೂ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

3. ಕುಸಿದುಬಿದ್ದ ಮಹಿಳೆಗೆ ಪೊಲೀಸರಿಂದ ನೆರವು:

ಹೊಯ್ಸಳ ನಗರದಲ್ಲಿ ಮನೆ ಕೆಲಸ ಮಾಡುತ್ತಿದ್ದ 39 ವರ್ಷದ ಮಹಿಳೆ ಕೆಲಸದ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ತಕ್ಷಣ ಮನೆಯ ಮಾಲೀಕರು 112 ಸಹಾಯವಾಣಿಗೆ ಕರೆ ಮಾಡಿದ್ದಾರೆ. ಹಲಸೂರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಿಳೆಗೆ ವೈದ್ಯಕೀಯ ನೆರವು ದೊರಕಿಸಿಕೊಟ್ಟಿದ್ದಾರೆ.

4. ಮೆಟ್ರೋ ಹಳಿಗೆ ಇಳಿದ ಪ್ರಯಾಣಿಕ:

ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ತನ್ನ ಟೋಕನ್ ಬಿದ್ದಿದ್ದನ್ನು ತೆಗೆದುಕೊಳ್ಳಲು ಮೆಟ್ರೋ ಹಳಿಗೆ ಇಳಿದಿರುವ ಘಟನೆ ನಡೆದಿದೆ. ಶುಕ್ರವಾರ ಬೆಳಗ್ಗೆ 9.22ರ ಸುಮಾರಿಗೆ ನಡೆದ ಘಟನೆಯಿಂದ ನೇರಳೆ ಮಾರ್ಗದಲ್ಲಿ ಸುಮಾರು 10 ನಿಮಿಷಗಳ ಕಾಲ ಮೆಟ್ರೋ ಸಂಚಾರ ವ್ಯತ್ಯಯಗೊಂಡಿತು. ಬಳಿಕ ಪ್ರಯಾಣಿಕನನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು.

5. ₹20 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ:

ನಗರದ ನಾಗರಭಾವಿಯಲ್ಲಿ 42 ವರ್ಷದ ವ್ಯಕ್ತಿಯೊಬ್ಬರಿಗೆ ಸೇರಿದ ಸುಮಾರು ₹20 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಇಬ್ಬರು ಅಪರಿಚಿತರು ದರೋಡೆ ಮಾಡಿದ್ದಾರೆ ಎನ್ನಲಾಗಿದೆ. ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಆಹ್ವಾನಿಸಿದ ಬಳಿಕ ಈ ಘಟನೆ ನಡೆದಿದೆ. ಚಂದ್ರಾ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮೈಕ್ರೋ ಫೈನಾನ್ಸ್ ಸಿಬ್ಬಂದಿ ಅಟ್ಟಹಾಸ: ಬೆನ್ನಟ್ಟಿ ಬೈಕ್ ಗೆ ಒದ್ದ ಏಜೆಂಟ್: ಕೆಳಗೆ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು

ನೆಲಮಂಗಲ: ಮೈಕ್ರೋ ಫೈನಾನ್ಸ್ ರಿಕವರಿ ಏಜೆಂಟರ ಅಟ್ಟಹಾಸಕ್ಕೆ ಅಮಾಯಕ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.

ಮುರುಳಿ (39) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ದುರ್ದೈವಿ. ಬೈಕ್ ಲೋನ್ ಕಂತು ಪಾವತಿಸದ ಕಾರಣ ಏಜೆಂಟರು ಬೈಕ್‌ಗೆ ಒದ್ದು, ಮುರುಳಿ ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಮೈಕ್ರೋ ಫಾಇನಾನ್ಸ್ ಏಜೆಂಟರ ಭೀಕರ ಹಲ್ಲೆಯೇ ಸಾವಿಗೆ ಕಾರಣವೆಂದು ಪತ್ನಿ ಆರೋಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮುರುಳಿ ಅವರು ಪಡೆದಿದ್ದ ಬೈಕ್ ಲೋನ್ ಕಂತು ಪಾವತಿಸಿಲ್ಲ ಎಂದು ಎಲ್ ಅಂಡ್ ಟಿ ಮೈಕ್ರೋ ಫೈನಾನ್ಸ್ ಕಂಪನಿಯ ಏಜೆಂಟರು ಇವರ ಬೆನ್ನು ಬಿದ್ದಿದ್ದರು. ಕಳೆದ ಬುಧವಾರದಂದು ಮುರುಳಿ ನೆಲಮಂಗಲದಿಂದ ತಮ್ಮ ಊರಾದ ಟಿ. ಬೇಗೂರಿಗೆ ತೆರಳುತ್ತಿದ್ದ ವೇಳೆ ಬೂದಿಹಾಳು ಬಳಿ ಮೈಕ್ರೋ ಫೈನಾನ್ಸ್ ಕಂಪನಿಯ ಮೂವರು ಏಜೆಂಟರು ಬೈಕ್ ಅಡ್ಡಹಾಕಿದ್ದಾರೆ. “ಮುಂದೆ ನಿಲ್ಲಿಸುತ್ತೇನೆ” ಎಂದು ಹೇಳಿ ಮುರುಳಿ ಮುಂದೆ ತೆರಳುತ್ತಿದ್ದಾಗ, ಅವರನ್ನು ಹಿಡಿಯಲು ಬೆನ್ನಟ್ಟಿದ ಏಜೆಂಟರು ಚಲಿಸುತ್ತಿದ್ದ ಬೈಕ್‌ಗೆ ಕಾಲಿನಿಂದ ಬಲವಾಗಿ ಒದ್ದಿದ್ದಾರೆ. ಒದ್ದ ರಭಸಕ್ಕೆ ಮುರುಳಿ ಬೈಕ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಘಟನೆ ನಡೆದ ತಕ್ಷಣ ಮುರುಳಿ ಅವರ ಪತ್ನಿ ಲಲಿತಾ ಅವರು ಗಾಯಾಳುವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಮುರುಳಿ ಅವರು ಈಗಾಗಲೇ ಎರಡೂ ಕಿಡ್ನಿಗಳನ್ನು ಕಳೆದುಕೊಂಡು ನಿರಂತರ ಡಯಾಲಿಸಿಸ್ ಪಡೆಯುತ್ತಿದ್ದರು. ಅನಾರೋಗ್ಯದ ಕಾರಣದಿಂದ ಓಡಾಡುವುದಕ್ಕೂ ಕಷ್ಟಪಡುತ್ತಿದ್ದ ಮುರುಳಿ ಅವರಿಗೆ ಅಪಘಾತದಿಂದ ಉಂಟಾದ ಗಾಯಗಳು ತೀವ್ರವಾಗಿ ಶಮನವಾಗದೆ, ಚಿಕಿತ್ಸೆ ನೀಡಿದರೂ ದೇಹ ಸ್ಪಂದಿಸಲಿಲ್ಲ.

ಪರಿಣಾಮ ನಿನ್ನೆ ತಡರಾತ್ರಿ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮೈಕ್ರೋ ಫೈನಾನ್ಸ್ ಏಜೆಂಟರ ಅಟ್ಟಹಾಸವೇ ನನ್ನ ಗಂಡನ ಸಾವಿಗೆ ನೇರ ಕಾರಣ ಎಂದು ಮೃತ ಮುರುಳಿ ಪತ್ನಿ ಲಲಿತಾ ಹಾಗೂ ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಲ್ ಅಂಡ್ ಟಿ ಮೈಕ್ರೋ ಫೈನಾನ್ಸ್ ಕಂಪನಿಯ ಏಜೆಂಟರು ಕೃತ್ಯವೆಸಗಿ ತಲೆಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING: CBSE 10, 12ನೇ ತರಗತಿ ಬೋರ್ಡ್ ಪರೀಕ್ಷೆ 2027ರ ವೇಳಾಪಟ್ಟಿ ಪ್ರಕಟ; ಫೆ. 16ರಿಂದ ಪರೀಕ್ಷೆ ಆರಂಭ!12 ಗಂಟೆ 46 ನಿಮಿಷಗಳಲ್ಲಿ ಮೌಂಟ್ ಕಿಲಿಮಂಜಾರೋ ಏರಿದ ಕವಿತಾ ಚಂದ್ ದಾಖಲೆಮೂವರ ಜೀವ ತೆಗೆದ ಮಿನಿ ಕೂಪರ್ ಅಪಘಾತ ಪ್ರಕರಣ: ಸುಹೇಲ್ ಸೇರಿದಂತೆ ನಾಲ್ವರಿಗೆ ಹೈಕೋರ್ಟ್ ಜಾಮೀನು ಮಂಜೂರು !ಗಗನಕ್ಕೇರಿದ ಅಕ್ಕಿ ಬೆಲೆ ನಿಯಂತ್ರಣಕ್ಕೆ ಕೇಂದ್ರದಿಂದ ಮಹತ್ವದ ಕ್ರಮದೀಪಾವಳಿ ಸ್ಪೆಷನ್: ಅಮರಾವತಿ ಸ್ವೀಟ್ ಶಾಪ್ ನಿಂದ ಕೆಜಿಗೆ 24,000 ರೂ.ಗೆ ಚಿನ್ನದ ಎಲೆಯ ‘ಸ್ವರ್ಣ್ ಶಂಖ್’ ಸ್ವೀಟ್SHOCKING : ಶಾಲೆಯಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದು 13 ವರ್ಷದ ಬಾಲಕ ಸಾವುಸಲ್ಮಾನ್ ಖಾನ್ ಅಭಿಮಾನಿಗಳಿಗೆ ಗುಡ್ ನ್ಯೂಸ್! ‘ಮಾತೃಭೂಮಿ’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್.!ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗಿದೆಯೇ? ಮತ್ತೆ ಹೆಸರು ಸೇರಿಸಿಕೊಳ್ಳಲು ಚುನಾವಣಾ ಆಯೋಗದಿಂದ ಅವಕಾಶ!ಶಿವಮೊಗ್ಗ ದಸರಾ ಜಂಬೂಸವಾರಿ ಅವಘಡ ಪ್ರಕರಣ: ಡಿಸಿಎಫ್‌ಗೆ ವರ್ಗಾವಣೆ ಶಿಕ್ಷೆ!BREAKING : ಪಂಜಾಬ್’ನಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ |WATCH VIDEO