Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಲೋಕಸಭಾ ಕಲಾಪದ ಸಂಸ್ಕೃತ ಅನುವಾದಕ್ಕೆ ತಕರಾರು

 

ನವದೆಹಲಿ: ಲೋಕಸಭೆಯ ಕಲಾಪಗಳನ್ನು ಆರ್‌ಎಸ್‌ಎಸ್‌ ಸಿದ್ಧಾಂತದ ಕಾರಣದಿಂದಾಗಿ ಸಂಸ್ಕೃತದಲ್ಲಿಯೂ ಅನುವಾದಿಸಿ ನೀಡುವ ಮೂಲಕ ತೆರಿಗೆದಾರರ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಡಿಎಂಕೆ ಸದಸ್ಯ ದಯಾನಿಧಿ ಮಾರನ್ ಅವರು ಲೋಕಸಭೆಯಲ್ಲಿ ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದರು.

ಮಾರನ್ ಮಾತಿಗೆ ತಿರುಗೇಟು ನೀಡಿದ ಸ್ಪೀಕರ್ ಓಂ ಬಿರ್ಲಾ ಅವರು, ಸಂಸ್ಕೃತವು ಈ ದೇಶದ ಪ್ರಧಾನ ಭಾಷೆ ಎಂದರು. ಲೋಕಸಭಾ ಕಲಾಪಗಳನ್ನು ಸಂಸ್ಕೃತ ಮಾತ್ರವಲ್ಲದೆ ದೇಶದಲ್ಲಿ ಮಾನ್ಯತೆ ನೀಡಲಾಗಿರುವ ಇತರ ಭಾಷೆಗಳಿಗೂ ಏಕಕಾಲದಲ್ಲಿ ಅನುವಾದಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಶೋತ್ತರ ಅವಧಿ ಪೂರ್ಣಗೊಂಡ ನಂತರ ಬಿರ್ಲಾ ಅವರು, ಸದನದ ಸದಸ್ಯರಿಗೆ ಹೆಚ್ಚುವರಿಯಾಗಿ ಆರು ಭಾಷೆಗಳಲ್ಲಿ ಕಲಾಪವನ್ನು ಏಕಕಾಲಕ್ಕೆ ಅನುವಾದಿಸುವ ವ್ಯವಸ್ಥೆ ಶುರುವಾಗಿದೆ ಎಂದು ತಿಳಿಸಿದರು. ಬೋಡೊ, ಡೊಗ್ರಿ, ಮೈಥಿಲಿ, ಮಣಿಪುರಿ, ಸಂಸ್ಕೃತ ಮತ್ತು ಉರ್ದು ಆ ಆರು ಭಾಷೆಗಳು ಎಂದರು.

ಇಂಗ್ಲಿಷ್ ಮತ್ತು ಹಿಂದಿ ಮಾತ್ರವಲ್ಲದೆ, ಅಸ್ಸಾಮಿ, ಬಾಂಗ್ಲಾ, ಗುಜರಾತಿ, ಕನ್ನಡ, ಮಲಯಾಳ, ಮರಾಠಿ, ಒಡಿಯಾ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಕೂಡ ಈ ಸೌಲಭ್ಯ ಇದೆ ಎಂದು ಬಿರ್ಲಾ ತಿಳಿಸಿದರು.

ಅಧಿಕೃತ ರಾಜ್ಯ ಭಾಷೆಗಳಲ್ಲಿ ಕಲಾಪವನ್ನು ಅನುವಾದಿಸಿ ಹೇಳುವ ವ್ಯವಸ್ಥೆಯನ್ನು ತಾವು ಸ್ವಾಗತಿಸುವುದಾಗಿಯೂ ಸಂಸ್ಕೃತವು ಸಂವಹನದಲ್ಲಿ ಬಳಕೆಯಲ್ಲಿ ಇಲ್ಲ ಎಂಬ ಕಾರಣಕ್ಕೆ ಸಂಸ್ಕೃತದಲ್ಲಿ ಅನುವಾದಿಸುವುದನ್ನು ವಿರೋಧಿಸುವುದಾಗಿಯೂ ಮಾರನ್ ಹೇಳಿದರು.

2011ರ ಜನಸಂಖ್ಯಾ ಸಮೀಕ್ಷೆಯನ್ನು ಉಲ್ಲೇಖಿಸಿ ಮಾರನ್ ಅವರು, ಸಂಸ್ಕೃತವನ್ನು 73 ಸಾವಿರ ಜನ ಮಾತ್ರ ಮಾತನಾಡುತ್ತಾರೆ ಎಂದರು. 'ಆರ್‌ಎಸ್‌ಎಸ್‌ನ ಸಿದ್ಧಾಂತದ ಕಾರಣಕ್ಕೆ ಜನರ ತೆರಿಗೆ ಹಣವನ್ನು ಏಕೆ ವ್ಯರ್ಥ ಮಾಡಬೇಕು' ಎಂದು ಪ್ರಶ್ನಿಸಿದರು.

ಮಾರನ್ ಮಾತಿಗೆ ಪ್ರತ್ಯುತ್ತರ ನೀಡಿದ ಬಿರ್ಲಾ, 'ಇದು ಭಾರತ, ಸಂಸ್ಕೃತವು ಇಲ್ಲಿನ ಪ್ರಧಾನ ಭಾಷೆ. ನಾನು 22 ಭಾಷೆಗಳನ್ನು ಹೆಸರಿಸಿದ್ದೇನೆ. ಸಂಸ್ಕೃತವನ್ನು ಮಾತ್ರವೇ ಅಲ್ಲ. ನೀವು ಸಂಸ್ಕೃತಕ್ಕೆ ಆಕ್ಷೇಪ ವ್ಯಕ್ತಪಡಿಸುವುದೇಕೆ?

ಸಂಸತ್ತಿನಲ್ಲಿ 22 ಭಾಷೆಗಳಿಗೆ ಮಾನ್ಯತೆ ಇದೆ. ಹಿಂದಿಯಲ್ಲೂ ಸಂಸ್ಕೃತದಲ್ಲೂ ಏಕಕಾಲದಲ್ಲಿ ಅನುವಾದ ಆಗುತ್ತದೆ' ಎಂದು ಸ್ಪಷ್ಟವಾಗಿ ಹೇಳಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ರಾಜ್ಯದಲ್ಲಿ ಎಸ್‌ಐಆರ್ ಅವಧಿ ವಿಸ್ತರಣೆ: ಆ. 8 ರವರೆಗೆ ಗಣತಿ ನಮೂನೆ ವಿತರಣೆನಮ್ಮ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ದಾರಿದೀಪ: ಪ್ರೊ ಜಯಶ್ರೀ ಅಬ್ಬಿಗೇರಿ ಅಭಿಮತಬಿಡದಿ ಟೌನ್ ಶಿಪ್; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಅಭಯನಾಡಗೀತೆಯಲ್ಲಿ ಬೌದ್ಧ ಪದ | ಸೇರ್ಪಡೆಗೆ ತಜ್ಞರ ಶಿಫಾರಸು-ಪಾರಸಿಕ ಜೈನ ಬೌದ್ಧರುದ್ಯಾನ ಎಂದು ಮಾರ್ಪಡಿಸಿ: ಸರ್ಕಾರಕ್ಕೆ ವರದಿಭೋಜಶಾಲಾ–ಕಮಾಲ್ ಮೌಲಾ ಪ್ರಕರಣ: ಶುಕ್ರವಾರದ ನಮಾಜ್‌ಗೆ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳ ಕಲ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ2022ರಲ್ಲಿ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸದಂತೆ ರಷ್ಯಾವನ್ನು ತಡೆದದ್ದು ಮೋದಿ : ಪೋಲೆಂಡ್ ಸಚಿವರ ಹೇಳಿಕೆಚೊಚ್ಚಲ ಬಾಹ್ಯಾಕಾಶ ಯಾನ ಕೈಗೊಂಡ ಭಾರತೀಯ ಮೂಲದ ಗಗನಯಾತ್ರಿ ಅನಿಲ ಮೆನನ್ಸಾವೂ ಬೇರ್ಪಡಿಸಲಿಲ್ಲ ಇವರಿಬ್ಬರ ಬಂಧವನ್ನು…; ಯಜಮಾನನ ಶವಯಾತ್ರೆಯಲ್ಲೇ ಪ್ರಾಣ ಬಿಟ್ಟ ನಿಷ್ಠಾವಂತ ನಾಯಿ ʼದುಗ್ಗುʼ