Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಘಟಪ್ರಭಾ ಸಕ್ಕರೆ ಕಾರ್ಖಾನೆ ವಿರುದ್ದ ಜಾರಕಿಹೊಳಿ ಮಾತನಾಡಲಿ : ಲಕ್ಷ್ಮಣ ಸವದಿ ತಿರುಗೇಟು

ಚಿಕ್ಕೋಡಿ: ನಿಮ್ಮ ಮರ್ಯಾದೆ ನಿವು ಕಾಪಾಡಿಕೊಳ್ಳಿ ನಮ್ಮ ಮರ್ಯಾದೆ ನಾನು ಕಾಪಾಡಿಕೊಳ್ಳುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಪ್ರತ್ಯುತ್ತರ ನೀಡಿದರು.

ಶುಕ್ರವಾರ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಗೆ ಹಿನ್ನೆಲೆ ಸಭೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ನಯವಾಗಿ ಗುಡುಗಿದ ಸವದಿ, ಮನಸಿಗೆ ನೋವು ಆಗುವ ರೀತಿಯಲ್ಲಿ ಗೋಕಾಕ ಶಾಸಕರು ಮಾತನಾಡಬೇಡಿ.ರಮೇಶ್ ಜಾರಕಿಹೊಳಿಗೆ ವಿನಯಪೂರ್ವಕವಾಗಿ ಸವದಿ ಮನವಿ ಮಾಡಿದರು.
ರಮೇಶ್ ಜಾರಕಿಹೊಳಿ ಅವರಿಗೆ ಸರಿಯಾಗಿ ಡ್ರೈವಿಂಗ್ ಬರುದಿಲ್ಲ. ನಾನು ಕಳೆದ ಇಪ್ಪತ್ತು ವರ್ಷಗಳಿಂದ ಯಾವುದೇ ದೋಕಾ ಮಾಡಿಲ್ಲ.ಇಲ್ಲಿ ಯಾರೂ ಒಳ್ಳೆಯ ಡ್ರೈವರ್ ಎಂದು ನೀವು ತಿರ್ಮಾನ ಮಾಡಿ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಅನಪಡ ಡ್ರೈವರ್ ಎಂದರು.
ಅಥಣಿ ಕೃಷ್ಣ ಸಕ್ಕರೆ ಕಾರ್ಖಾನೆ ಬಗ್ಗೆ ಪ್ರಶ್ನೆ ಮಾಡುವ ರಮೇಶ್ ಸಾಹುಕಾರ. ಯಾಕೆ ಘಟಪ್ರಭಾ ಸಕ್ಕರೆ ಕಾರ್ಖಾನೆ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಅಥಣಿಗೆ ಬಂದು ಗೊಳ್ಳು ಹೇಳುವುದು ಅಲ್ಲ, ಕಳೆದ ಇಪ್ಪತೈದು ವರ್ಷದಲ್ಲಿ ನಾನು ಯಾವುದೇ ದ್ವೇಷದ ರಾಜಕಾರಣ ಮಾಡಿಲ್ಲ. ನಿಮ್ಮ ತರಾ ನಾನು ಯಾವುದೇ ಪೊಲೀಸ್ ಠಾಣಾ ಬಳಸಿ ರಾಜಕಾರಣ ಮಾಡಿಲ್ಲ. ಪರೋಕ್ಷವಾಗಿ ಗೋಕಾಕ್ ದ್ವೇಷದ ರಾಜಕೀಯ ಬಗ್ಗೆ ಸವದಿ ಲೇವಡಿ ಮಾಡಿದರು.
ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಹಣವನ್ನು ಸವದಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆಂದು ಆರೋಪಕ್ಕೆ ನಾನು ಮೌನವಾಗಿದ್ದರೆ , ಜನರಲ್ಲಿ ಗೊಂದಲಾಗುತ್ತದೆ. ರಮೇಶ್ ಜಾರಕಿಹೊಳಿ ಇದೇ ವೇದಿಕೆಯಲ್ಲಿ ನಿಂತು ನನ್ನ ಮೇಲೆ ಆರೋಪ ಮಾಡಿದ್ದಾರೆ‌.ಈ ಕಾರ್ಖಾನೆಯಿಂದ ನಾನು 10 ರೂ.ತಿಂದಿಲ್ಲ, ಏನಾದರೂ ತಿಂದಿದ್ದರೆ ನನ್ನ ತಾಯಿಯ ಸೆರಗಿಗೆ ನಾನು ಕೈಯ ಹಾಕಿದ ರೀತಿಯಲ್ಲಿ ಆಗುತ್ತದೆ. ನಾನು ಏನು ಭ್ರಷ್ಟಾಚಾರ ಮಾಡಿಲ್ಲ. ಮಾಡಿದರೆ ನನ್ನ ಸ್ವಾಭಿಮಾನಕ್ಕೆ ನಾನೆ ಅಪಚಾರ ಮಾಡಿಕೊಂಡಂತೆ ಎಂದರು.ರಮೇಶ್ ಜಾರಕಿಹೊಳಿ ಆರೋಪಕ್ಕೆ ಸವದಿ ಮಾರ್ಮಿಕವಾಗಿ ಪ್ರತ್ಯುತ್ತರ ನೀಡಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ರಾಜ್ಯದಲ್ಲಿ ಎಸ್‌ಐಆರ್ ಅವಧಿ ವಿಸ್ತರಣೆ: ಆ. 8 ರವರೆಗೆ ಗಣತಿ ನಮೂನೆ ವಿತರಣೆನಮ್ಮ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ದಾರಿದೀಪ: ಪ್ರೊ ಜಯಶ್ರೀ ಅಬ್ಬಿಗೇರಿ ಅಭಿಮತಬಿಡದಿ ಟೌನ್ ಶಿಪ್; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಅಭಯನಾಡಗೀತೆಯಲ್ಲಿ ಬೌದ್ಧ ಪದ | ಸೇರ್ಪಡೆಗೆ ತಜ್ಞರ ಶಿಫಾರಸು-ಪಾರಸಿಕ ಜೈನ ಬೌದ್ಧರುದ್ಯಾನ ಎಂದು ಮಾರ್ಪಡಿಸಿ: ಸರ್ಕಾರಕ್ಕೆ ವರದಿಭೋಜಶಾಲಾ–ಕಮಾಲ್ ಮೌಲಾ ಪ್ರಕರಣ: ಶುಕ್ರವಾರದ ನಮಾಜ್‌ಗೆ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳ ಕಲ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ2022ರಲ್ಲಿ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸದಂತೆ ರಷ್ಯಾವನ್ನು ತಡೆದದ್ದು ಮೋದಿ : ಪೋಲೆಂಡ್ ಸಚಿವರ ಹೇಳಿಕೆಚೊಚ್ಚಲ ಬಾಹ್ಯಾಕಾಶ ಯಾನ ಕೈಗೊಂಡ ಭಾರತೀಯ ಮೂಲದ ಗಗನಯಾತ್ರಿ ಅನಿಲ ಮೆನನ್ಸಾವೂ ಬೇರ್ಪಡಿಸಲಿಲ್ಲ ಇವರಿಬ್ಬರ ಬಂಧವನ್ನು…; ಯಜಮಾನನ ಶವಯಾತ್ರೆಯಲ್ಲೇ ಪ್ರಾಣ ಬಿಟ್ಟ ನಿಷ್ಠಾವಂತ ನಾಯಿ ʼದುಗ್ಗುʼ