Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಡಾ. ಪ್ರಭಾಕರ ಕೋರೆಯವರಿಗೆ ಕೆಎಲ್‌ಇ ಶಾಲೆಗಳಿಂದ ಸತ್ಕಾರ

ಬೆಳಗಾವಿ : ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕಶಕ್ತಿ ಬಹುದೊಡ್ಡದಿರುತ್ತದೆ. ಅದನ್ನು ಸರಿಯಾದ ದಿಸೆಯಲ್ಲಿ ಶಿಕ್ಷಕರು ಬೆಳೆಸುವಂತಾಬೇಕು. ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣವನ್ನು ಪಡೆದ ಮಕ್ಕಳ ಬೌದ್ಧಿಕಮಟ್ಟ ಉತ್ತಮವಾಗಿರುತ್ತದೆ. ಅವರಿಗೆ ಪರಿಣಾಮಕಾರಿಯಾದ ಶಿಕ್ಷಣವನ್ನು ನೀಡಿದರೆ ಅವರು ಭವಿಷ್ಯದಲ್ಲಿ ಬೌದ್ಧಿಕವಾಗಿ ಮತ್ತಷ್ಟು ಬೆಳೆಯುತ್ತಾರೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಅವರು ಜೆಎನ್‌ಎಂಸಿ ಕೆಎಲ್‌ಇ ಕನ್ವೇಷನ್ ಸೆಂಟರ್‌ನ ಡಾ.ಎಚ್.ಬಿ.ರಾಜಶೇಖರ ಸಭಾಂಗಣದಲ್ಲಿ ಜರುಗಿದ ಕೆಎಲ್‌ಇ ವಿವಿಧ ಕನ್ನಡ ಆಂಗ್ಲ ಮಾಧ್ಯಮ ಶಾಲೆಗಳು ಡಾ.ಪ್ರಭಾಕರ ಕೋರೆಯವರು ಕಾರ್ಯಾಧ್ಯಕ್ಷರಾಗಿ ೪೦ ವರ್ಷಗಳ ಅನುಪಮ ಸೇವೆಯ ಸಲ್ಲಿಸಿದ ಗೌರವಾರ್ಥ ರುಬಿ ಜ್ಯುಬಿಲಿ ಸಮಾರಂಭವನ್ನು ಆಯೋಜಿಸಿದ್ದವು. ಈ ಸಂದರ್ಭದಲ್ಲಿ ಅವರು ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು. ನನ್ನ ಬಾಲ್ಯದಲ್ಲಿ ಅತ್ಯುತ್ತಮವಾದ ಶಿಕ್ಷಕರನ್ನು ನೋಡಿದ್ದೇನೆ. ನನ್ನ ವಿಕಾಸಕ್ಕೆ ಅವರ ಕೊಡುಗೆ ಅನನ್ಯವಾಗಿತ್ತು. ನಿವೃತ್ತಿಯ ನಂತರವೂ ಅವರು ಇಂದಿಗೂ ಕ್ರಿಯಾಶೀಲವಾಗಿ ಚಟುವಟಿಕೆಯಿಂದ ಇರುವುದು ಕಂಡಿದ್ದೇನೆ. ಅಂತಹ ಕ್ರಿಯಾಶೀಲತೆ ಇಂದಿನ ಶಿಕ್ಷಕರಲ್ಲಿಯೂ ಬರಬೇಕು ಎಂದರು.
ಡಾ.ಕೋರೆಯವರು ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸುತ್ತಾ, ಬಾಲ್ಯದಲ್ಲಿ ನಾವು ನೆಲೆದ ಮೇಲೆ ಕುಳಿತು ಶಿಕ್ಷಣವನ್ನು ಪಡೆದಿದ್ದೇವೆ. ಅಂದಿನ ಶಿಕ್ಷಣವು ಬಲಯುತವಾಗಿತ್ತು, ಗುಣಾತ್ಮಕವಾಗಿತ್ತು. ನಮ್ಮನ್ನು ಅಕ್ಷರದೊಂದಿಗೆ ಬೌದ್ಧಿಕವಾಗಿ ಬೆಳೆಸಿದ್ದವು. ನೈತಿಕ ಶಿಕ್ಷಣಕ್ಕೆ ಅವರು ಹೆಚ್ಚು ಆದ್ಯತೆ ನೀಡುತ್ತಿದ್ದರು. ಇಂದು ಅಂತಹ ಗಟ್ಟಿ ಶಿಕ್ಷಣದ ಅವಶ್ಯಕತೆ ಇದೆ. ಈಗ ಯುವಕರು ಕ್ಲಾಸಿಗೆ ಸೀಮಿತಗೊಂಡಿದ್ದಾರೆ. ಸಾಕಷ್ಟು ಅವಕಾಶಗಳು ಇವೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕುಳಿತುಕೊಳ್ಳಬೇಕು. ಅವರಿಗೆ ಆ ನಿಟ್ಟಿನಲ್ಲಿ ಶಿಕ್ಷಕರು ಉತ್ತಮವಾದ ಮಾರ್ಗದರ್ಶನ ಮಾಡಿಕೊಡುವುದು ಅಗತ್ಯವಾಗಿದೆ. ಇದರೊಂದಿಗೆ ಉತ್ತಮವಾದ ಆರೋಗ್ಯಕ್ಕಾಗಿಯೂ ಆದ್ಯತೆಯನ್ನು ನೀಡಬೇಕು. ಕೇವಲ ನೌಕರಿಗಾಗಿ ಕಲಿಯಬೇಡಿ, ಜ್ಞಾನ ಹಾಗೂ ನಾಯಕತ್ವಕ್ಕಾಗಿ ಅಧ್ಯಯನ ಮಾಡಿ. ಮಾತೃಭಾಷೆಯ ಮಹತ್ವವನ್ನು ನಾವು ಅರಿತುಕೊಳ್ಳುವುದು ಅಷ್ಟೇ ಪ್ರಧಾನವಾಗಿದೆ ಎಂದರು. ಡಾ.ಕೋರೆಯವರು ಮುಂದುವರೆದು ಮಾತನಾಡಿ ನನ್ನ ವಿಕಾಸಕ್ಕೆ ಗುರುಗಳೇ ಕಾರಣರು, ನನಗೆ ರಾಜಕೀಯ ಗುರುವಾದವರು ಮಾನ್ಯ ಎಸ್.ನಿಜಲಿಂಗಪ್ಪನವರು, ನನ್ನ ಕೌಟುಂಬಿಕ ಮುನ್ನಡೆಗೆ ನನ್ನ ಧರ್ಮಪತ್ನಿ ಆಶಾ ಕೋರೆಯವರು ಕಾರಣ. ಅವರ ಸಹಕಾರ ಸಹಾಯದಿಂದ ಸಮಾಜದಲ್ಲಿ ಸಂಸ್ಥೆಯಲ್ಲಿ ಕೆಲಸ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ.ಪ್ರಭಾಕರ ಕೋರೆಯವರಿಗೆ ಎಲ್ಲ ಶಾಲೆಗಳ ಮುಖ್ಯಸ್ಥರುಗಳು ಸತ್ಕರಿಸಿ ಅಭಿನಂದಿಸಿದರು. ಅಂತೆಯೆ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಗೈದ ೫ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಶಿಷ್ಯವೇತನ ಹಾಗೂ ಮುಂದಿನ ಶೈಕ್ಷಣಿಕ ಭವಿಷ್ಯತ್ತಿನಲ್ಲಿ ಅವರಿಗೆ ಬೇಕಾದ ಸೌಲಭ್ಯಗಳನ್ನು ನೀಡುವುದಾಗಿ ಡಾ.ಕೋರೆಯವರು ತಿಳಿಸಿದರು. ಈ ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಕ್ಕಳು ನೃತ್ಯ ಹಾಡುಗಳನ್ನು ಅತ್ಯಂತ ಆಕರ್ಷಕವಾಗಿ ಜರುಗಿಸಿಕೊಟ್ಟರು. ತದನಂತರದಲ್ಲಿ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ಪ್ರದಾನ ಮಾಡಿದರು. ಕೆಎಲ್‌ಇ ಆಡಳಿತ ಮಂಡಳಿಯ ಸದಸ್ಯರಾದ ಡಾ.ವಿ.ಎಸ್.ಸಾಧುನವರ, ಜಯಾನಂದ ಮುನವಳ್ಳಿ, ಬಿ.ಆರ್.ಪಾಟೀಲ, ಡಾ.ಪ್ರೀತಿ ಕೋರೆ ದೊಡವಾಡ, ಕೆಎಲ್‌ಇ ಜಂಟಿಕಾರ್ಯದರ್ಶಿಗಳು, ಆಜೀವ ಸದಸ್ಯರು, ವಿವಿಧ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ಉಪಸ್ಥಿತರಿದ್ದರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?