Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿಯಲ್ಲಿಂದು ಜಿನ ಭಜನಾ ಸ್ಪರ್ಧಾ ಕಾರ್ಯಕ್ರಮ

ಬೆಳಗಾವಿ : ಭಾರತೀಯ ಜೈನ ಮಿಲನ್ ವಲಯ-8 ಧಾರವಾಡ ವಿಭಾಗದ ವತಿಯಿಂದ ಡಿಸೆಂಬರ್ 1 ರಂದು ಬೆಳಗಾವಿಯ ಧರ್ಮನಾಥ ಭವನದಲ್ಲಿ ಜಿನ ಭಜನಾ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಹೇಮಾವತಿ ವೀ.ಹೆಗ್ಗಡೆ ಮತ್ತು ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಅನಿತಾ ಸುರೇಂದ್ರ ಕುಮಾರ್ ಮತ್ತು ಸುರೇಂದ್ರ ಕುಮಾರ್ ಅವರ ಪರಿಕಲ್ಪನೆಯ ಧಾರವಾಡ ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆ ಸೀಸನ್-8 ಇದಾಗಿದೆ.

ಬೆಳಗ್ಗೆ 9 ಕ್ಕೆ ಬೆಂಗಳೂರಿನ ಜಿನ ಭಜನಾ ಸಂಯೋಜಕ ಡಾ. ಉದಯ ಪಾಟೀಲ ಉದ್ಘಾಟಿಸುವರು. ದಕ್ಷಿಣ ಭಾರತ ಜೈನ ಮಹಾಸಭಾ ಟ್ರಸ್ಟಿ ಅಶೋಕ ಜೈನ್, ಬೆಳಗಾವಿ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ಚೇರ್ಮನ್ ಪುಷ್ಪಕ ಹನುಮಣ್ಣವರ, ವೈಸ್ ಚೇರ್ಮನ್ ಸಂಜಯ ಕುಸನೂರ, ಕಾರ್ಯದರ್ಶಿ ಸನ್ಮತಿ ಕಸ್ತೂರಿ, ಸಹ ಕಾರ್ಯದರ್ಶಿ ಯಲ್ಲಪ್ಪ ಮೇಲಿನಮನಿ, ಜೈನ ಮಿಲನ್ ಸೆಂಟ್ರಲ್ ಗೌರವಾಧ್ಯಕ್ಷ ಶಿರ್ಲಾಲು ಬಿ.ಗುಣಪಾಲ ಹೆಗ್ಡೆ ಉಪಸ್ಥಿತರಿರುವರು. ಬೆಳಗ್ಗೆ 9:20ಕ್ಕೆ ಭಜನಾ ಸ್ಪರ್ಧೆಗಳು ಪ್ರಾರಂಭವಾಗಲಿವೆ. ಮೊದಲು ಕಿರಿಯರ ಹಾಗೂ ನಂತರ ಹಿರಿಯರ ವಿಭಾಗದ ಸ್ಪರ್ಧೆಗಳು ನಡೆಯಲಿವೆ.

ಸಂಜೆ 4ಕ್ಕೆ ಎಸ್‌ಡಿಎಂ ಉಪಕುಲಪತಿ ನಿರಂಜನ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಎಸ್ ಡಿಎಂ ಆಡಳಿತ ಮಂಡಳಿ ಸದಸ್ಯೆ ಪದ್ಮಲತಾ ನಿರಂಜನ್ ಕುಮಾರ್, ಬೆಳಗಾವಿಯ ಉದ್ಯಮಿ ಗೋಪಾಲ ಜಿನಗೌಡ, ಬೆಳಗಾವಿ ಜೈನ ಮಿಲನ್ ಗೌರವಾಧ್ಯಕ್ಷ ಗುಣಪಾಲ ಹೆಗ್ಡೆ, ಉಪಾಧ್ಯಕ್ಷ ಅಜಿತಕುಮಾರ ಜೈನ್, ನಾಗರಾಜ ಮರೆಣ್ಣವರ, ಖಜಾಂಚಿ ವೀರೇಂದ್ರ ಹೆಗ್ಡೆ, ಕುಮಾರ್, ಬೆಳಗಾವಿ ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ಅಧ್ಯಕ್ಷ ಮಹಾವೀರ ಪೂವಣಿ ಉಪಸ್ಥಿತರಿರುವರು. ಚಕ್ರೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಉಷಾ ಸಂಜಯ ಪಾಟೀಲ ಅಧ್ಯಕ್ಷತೆ ವಹಿಸುವರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಪಾಲರ ಪತ್ನಿಯ ಆರೋಗ್ಯದಲ್ಲಿ ಏರುಪೇರು :  ದಿಢೀರ್ ಇಂದೋರ್ ಗೆ ತೆರಳಿದ ಗೆಹಲೋಟ್ -ಸಿಎಂ ರಾಜೀನಾಮೆ ಪತ್ರ ಯಾರಿಗೆ ಸಲ್ಲಿಸುತ್ತಾರೆ ?ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರು