Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರೋಚಕ ಜಯದೊಂದಿಗೆ ಫೈನಲ್ ಪ್ರವೇಶಿಸಿದ ಭಾರತ..

ಮುಂಬೈ : ಟಿ ಟ್ವೆಂಟಿ ವಿಶ್ವ ಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಜಯಭೇರಿ ಬಾರಿಸಿದೆ .ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಇಂಗ್ಲೆಂಡ್ ವಿರುದ್ಧ ಭಾರತ ರೋಚಕ 7 ರನ್ ಅಂತರದಲ್ಲಿ ಜಯ ಸಾಧಿಸಿದೆ.

ಗೆಲುವಿನೊಂದಿಗೆ ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಟಿ20 ವಿಶ್ವಕಪ್ ಇತಿಹಾಸದ 10 ಆವೃತ್ತಿಗಳಲ್ಲಿ ಭಾರತಕ್ಕೆ ಇದು ನಾಲ್ಕನೇ ಫೈನಲ್ ಪ್ರವೇಶವಾಗಿದೆ. ಈ ಹಿಂದೆ 2007 ಮತ್ತು 2024ರಲ್ಲಿ ಚಾಂಪಿಯನ್ ಆಗಿದ್ದ ಭಾರತ, 2014ರಲ್ಲಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಸಂಜು ಸ್ಯಾಮ್ಸನ್ ಅಬ್ಬರ: ದಾಖಲೆಯ ಮೊತ್ತ ಪೇರಿಸಿದ ಭಾರತ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭದಲ್ಲೇ ಅಭಿಷೇಕ ಶರ್ಮಾ (9) ವಿಕೆಟ್ ಕಳೆದುಕೊಂಡರೂ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್‌ ಮಾಡಿದರು. ಕೇವಲ 15 ರನ್‌ಗಳಿಸಿದ್ದಾಗ ಹ್ಯಾರಿ ಬ್ರೂಕ್ ಕೈಚೆಲ್ಲಿದ ಜೀವದಾನದ ಸದುಪಯೋಗ ಪಡಿಸಿಕೊಂಡ ಸ್ಯಾಮ್ಸನ್, ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 89 ರನ್ ಸಿಡಿಸಿದರು. ಇದು ಟಿ20 ವಿಶ್ವಕಪ್ ನಾಕೌಟ್ ಪಂದ್ಯವೊಂದರಲ್ಲಿ ಭಾರತೀಯ ಬ್ಯಾಟರ್ ದಾಖಲಿಸಿದ ಜಂಟಿ ಗರಿಷ್ಠ ಸ್ಕೋರ್ ಆಗಿದೆ (2016ರಲ್ಲಿ ವಿರಾಟ್ ಕೊಹ್ಲಿ ಅಜೇಯ 89 ರನ್ ಗಳಿಸಿದ್ದರು).

ಎರಡನೇ ವಿಕೆಟ್‌ಗೆ ಸ್ಯಾಮ್ಸನ್ ಜೊತೆಗೂಡಿ 97 ರನ್‌ಗಳ ಸ್ಫೋಟಕ ಜೊತೆಯಾಟವಾಡಿದ ಇಶಾನ್ ಕಿಶನ್, 18 ಎಸೆತಗಳಲ್ಲಿ 39 ರನ್ ಚಚ್ಚಿದರು. ನಂತರ ಶಿವಂ ದುಬೆ (25 ಎಸೆತಗಳಲ್ಲಿ 43), ಹಾರ್ದಿಕ್ ಪಾಂಡ್ಯ (12 ಎಸೆತಗಳಲ್ಲಿ 27) ಮತ್ತು ತಿಲಕ್ ವರ್ಮಾ (7 ಎಸೆತಗಳಲ್ಲಿ 21) ಅವರ ಮಿಂಚಿನ ಆಟದಿಂದ ಭಾರತ 20 ಓವರ್‌ಗಳಲ್ಲಿ 253/7 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇದು ಟಿ20 ವಿಶ್ವಕಪ್ ಪಂದ್ಯವೊಂದರ ಗರಿಷ್ಠ ಮೊತ್ತವಾಗಿದೆ.
ಇಂಗ್ಲೆಂಡ್ ಪರ ವಿಲ್ ಜಾಕ್ಸ್ 40 ರನ್ ನೀಡಿ 2 ವಿಕೆಟ್ ಪಡೆದರೆ, ಆದಿಲ್ ರಶೀದ್ ಸೂರ್ಯಕುಮಾರ್ ಯಾದವ್ (11) ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಇಂಗ್ಲೆಂಡ್ ಹೋರಾಟ: ಬೆಥೆಲ್ ಶತಕ ವ್ಯರ್ಥ
ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಪರ ಜೇಕಬ್ ಬೆಥೆಲ್ (48 ಎಸೆತಗಳಲ್ಲಿ 105) ಸ್ಫೋಟಕ ಶತಕ ಸಿಡಿಸಿ ಭಾರತಕ್ಕೆ ನಡುಕ ತಂದರು. ಅವರು ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ದರು.
ಫಿಲ್ ಸಾಲ್ಟ್ ವಿಕೆಟ್ ಅನ್ನು ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲೇ ಪಡೆದರೆ, ಅಪಾಯಕಾರಿ ಹ್ಯಾರಿ ಬ್ರೂಕ್ ಅವರನ್ನು ಜಸ್ಪ್ರೀತ್ ಬುಮ್ರಾ ಪೆವಿಲಿಯನ್‌ಗೆ ಅಟ್ಟಿದರು. ಜೋಸ್ ಬಟ್ಲರ್ (25) ಅವರನ್ನು ವರುಣ್ ಚಕ್ರವರ್ತಿ ಔಟ್ ಮಾಡಿದರು.

ರೋಚಕ ಅಂತ್ಯ: ವಿಲ್ ಜಾಕ್ಸ್ (35) ಮತ್ತು ಬೆಥೆಲ್ 5ನೇ ವಿಕೆಟ್‌ಗೆ 77 ರನ್ ಸೇರಿಸಿದರು. ಆದರೆ ಅಕ್ಷರ ಪೇಟಲ್ ಅವರ ಅದ್ಭುತ ಫೀಲ್ಡಿಂಗ್ ಹಾಗೂ ಬುಮ್ರಾ ಅವರ ಕರಾರುವಾಕ್ ಬೌಲಿಂಗ್ ಇಂಗ್ಲೆಂಡ್ ವೇಗಕ್ಕೆ ಬ್ರೇಕ್ ಹಾಕಿತು.
ಕೊನೆಯ 5 ಓವರ್‌ಗಳಲ್ಲಿ 69 ರನ್ ಬೇಕಿದ್ದಾಗ ಬುಮ್ರಾ ತಮ್ಮ ಎರಡು ಓವರ್‌ಗಳಲ್ಲಿ ಕೇವಲ 14 ರನ್ ನೀಡಿ ಇಂಗ್ಲೆಂಡ್ ಮೇಲೆ ಒತ್ತಡ ಹೇರಿದರು. ಅಂತಿಮವಾಗಿ ಇಂಗ್ಲೆಂಡ್ 20 ಓವರ್‌ಗಳಲ್ಲಿ 246/7 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಸಂಕ್ಷಿಪ್ತ ಸ್ಕೋರ್‌ಗಳು: ಭಾರತ 20 ಓವರ್‌ಗಳಲ್ಲಿ 253/7 (ಸಂಜು ಸ್ಯಾಮ್ಸನ್ 89, ಶಿವಂ ದುಬೆ 43; ವಿಲ್ ಜ್ಯಾಕ್ಸ್ 2/40)
ಇಂಗ್ಲೆಂಡ್ 20 ಓವರ್‌ಗಳಲ್ಲಿ 246/7 (ಜಾಕೋಬ್ ಬೆಥೆಲ್ 105; ಜಸ್ಪ್ರೀತ್ ಬುಮ್ರಾ 2/33) ಇಂಗ್ಲೆಂಡಿಗೆ ಏಳು ರನ್‌ಗಳಿಂದ ಸೋಲು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?