Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬಸ್ ಪ್ರಯಾಣಿಕರ ತಂಗುದಾಣದ ಕಾಮಗಾರಿಗೆ ಈರಣ್ಣ ಕಡಾಡಿ ಭೂಮಿ ಪೂಜೆ

ಬೆಳಗಾವಿ: ಬಸ್ ಪ್ರಯಾಣಿಕರ ತಂಗುದಾಣವು ದಿನ ನಿತ್ಯ ಕೆಲಸಕ್ಕೆ ಸಂಚರಿಸುವ ಜನ ಸಾಮಾನ್ಯರ ಮತ್ತು ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳ ತ್ವರಿತ ಆಶ್ರಯ ತಾಣಗಳಾಗಿದ್ದು ಮಹಿಳೆಯರು, ಮಕ್ಕಳು ಹಾಗೂ ವೃದ್ದರಿಗೆ ಪ್ರಯಾಣದ ಸಂದರ್ಭದಲ್ಲಿ ಮಳೆ, ಗಾಳಿ, ಬಿಸಲುಗಳಿಂದ ಈ ತಂಗುದಾಣಗಳು ರಕ್ಷಣೆ ನೀಡಲಿವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಹಲವು ವಾರ್ಡಗಳಲ್ಲಿ ಬಸ್ ಪ್ರಯಾಣಿಕರ ತಂಗುದಾಣಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಬಸ್ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಾಣ ಮಾಡುವ ಸಂಕಲ್ಪ ಕೈಗೊಳ್ಳಲಾಗಿದ್ದು, ಈಗಾಗಲೇ ಜಿಲ್ಲೆಯ ಹಲವು ಗ್ರಾಮಗಳಲ್ಲಿ 60 ಬಸ್ ಪ್ರಯಾಣಿಕರ ತಂಗುದಾಣಗಳಿಗೆ ಮಂಜೂರಾತಿ ನೀಡಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. 10 ಬಸ್ ತಂಗುದಾಣಗಳ ಕಾಮಗಾರಿ ಪೂರ್ಣಗೊಂಡಿದೆ ಎಂದರು.
ನಗರ ಸೇವಕರಾದ ಹಣಮಂತ ಕೊಂಗಾಲಿ ಅವರ ವಾರ್ಡ ನಂ 46 ರ ರಾಮತೀರ್ಥ ನಗರದ ಬಸವೇಶ್ವರ ಬಡಾವಣೆ ಕ್ರಾಸ್ ಹತ್ತಿರ ಮತ್ತು ಆಂಜನೇಯ ದೇವಸ್ಥಾನದ ಹತ್ತಿರ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗಲಿದೆ. ವಾರ್ಡ ನಂ 35ರ ನಗರ ಸೇವಕರಾದ ಶ್ರೀಮತಿ ಲಕ್ಷ್ಮೀ ರಾಠೋಡ ಅವರ ವಾರ್ಡಿನ ಚನ್ನಮ್ಮ ಹೌಸಿಂಗ್ ಸೊಸಾಯಿಟಿ ಹತ್ತಿರ ಸೆಕ್ಟರ್ 6/1 ರಲ್ಲಿ ಮತ್ತು ಶ್ರೀನಗರದ ಸೆಕ್ಟರ್ ನಂ 05 ಹತ್ತಿರ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗಲಿದೆ. ನಗರ ಸೇವಕರಾದ ಶ್ರೇಯಸ್ ನಾಕಾಡಿ ಅವರ ವಾರ್ಡ ನಂ 34 ರ ಶಾಹುನಗರ ಗಣೇಶ ಚೌಕ್ ಹತ್ತಿರ ಬಸ್ ಪ್ರಯಾಣಿಕರ ತಂಗುದಾಣಗಳಿಗೆ ಭೂಮಿ ಪೂಜೆ ನೇರವೇರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಾದೇವ ರಾಠೋಡ, ಮಂಡಲ ಅಧ್ಯಕ್ಷ ವಿಜಯ ಕೊಡಗನೂರ, ಮಾಜಿ ಮೇಯರ ಎನ್. ಬಿ ನಿರ್ವಾಣಿ, ಅಣ್ಣಾಸಾಹೇಬ ದೇಸಾಯಿ, ನಿರುಪಾದಯ್ಯ ಕಲ್ಲೋಳಿಮಠ, ಅಪ್ಪಾಸಾಹೇಬ ಕಾಂಬಳೆ, ವಿಜಯಾ ಹಿರೇಮಠ, ಎಸ್. ಎಸ್ ಶೀಲವಂತ, ಎಸ್. ಎಂ ವಕ್ಕುಂದ, ಶ್ರೀ ಮಹಾಂತೇಶ ಮೂಲಿಮನಿ, ವಿನಾಯಕ ಪತ್ತಾರ, ಶಿವಾನಂದ ಕಣಗನಿ, ಕೃಷ್ಣಾ ಪಾಟೀಲ, ಸುರೇಶ ಯಾದವ, ಸಂತೋಷ ದೇಸಾಯಿ, ಶಂಕರ ಗುಡಸ, ಸಂಜು ಭಾಂವಿ, ವಿಠ್ಠಲ ಬಡಿಗೇರ, ಆರ್ ಸಿ ಪಾಟೀಲ ಸೇರಿದಂತೆ ಸ್ಥಳೀಯ ನಿವಾಸಿಗಳು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಪಾಲರ ಪತ್ನಿಯ ಆರೋಗ್ಯದಲ್ಲಿ ಏರುಪೇರು :  ದಿಢೀರ್ ಇಂದೋರ್ ಗೆ ತೆರಳಿದ ಗೆಹಲೋಟ್ -ಸಿಎಂ ರಾಜೀನಾಮೆ ಪತ್ರ ಯಾರಿಗೆ ಸಲ್ಲಿಸುತ್ತಾರೆ ?ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರು