Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಆನೆಗೂ ಅಡುಗೆ ಹೇಳಿಕೊಟ್ಟ ಮಹಿಳೆ

ಬೆಂಗಳೂರು: ಸರಿಯಾಗಿ ಪಳಗಿಸಿದರೆ ಕಾಡಿನ ದೈತ್ಯನಿಗೂ ಅಡುಗೆ ಕೆಲಸ ಹೇಳಿಕೊಡಬಹುದೆಂದು ಇಲ್ಲೊಬ್ಬ ಮಹಿಳೆ ತೋರಿಸಿದ್ದು, ಆನೆಯ ಕೈಯಲ್ಲಿ ಅಡುಗೆ ಮಾಡಿಸುವ ಮೂಲಕ ಅದನ್ನು ಸಾಬೀತುಪಡಿಸಿದ್ದಾರೆ.

ಮಹಿಳೆಯೊಬ್ಬಳು ಹೇಳಿದ ಹಾಗೆ ಅಡುಗೆ ಕೆಲಸ ಮಾಡುವ ಆನೆಯೊಂದರ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅಡುಗೆ ಮಾಡುವಲ್ಲಿ ಆನೆಯ ಆಸಕ್ತಿಯನ್ನು ಕಂಡು ನೆಟ್ಟಿಗರು ಚಕಿತಗೊಂಡಿದ್ದಾರೆ.

ಈ ವಿಡಿಯೊವನ್ನು ದಿ ನೇಷನ್ ಥೈಲ್ಯಾಂಡ್ ಎಂಬ ಎಕ್ಸ್ ಪೇಜ್ ಹಂಚಿಕೊಂಡಿದ್ದು, ನಂತರ ಸಾವಿರಾರು ಜನರು ಇದನ್ನು ರಿಶೇರ್ ಮಾಡಿದ್ದಾರೆ.

'ಅಡುಗೆ ಮಾಡುವುದಕ್ಕೆ ಆನೆಯು ಮಹಿಳೆಗೆ ಸಹಾಯ ಮಾಡುತ್ತಿದೆ. ಈ ಆನೆ ಮುಂದಿನ ಟಾಪ್ ಶೆಫ್ ಆಗಬಹುದೇ?' ಎಂದು ಕೇಳಿದೆ.

ವಿಡಿಯೊದಲ್ಲಿರುವುದು ಗಂಡಾನೆಯಾಗಿದ್ದು, ಇದಕ್ಕೆ ' 5 ' (Play Daow Mongkol) ಎಂದು ಹೆಸರಿಟ್ಟಿರುವುದಾಗಿ ತಿಳಿಸಿದೆ.

ಮಹಿಳೆ ಹೇಳಿದಂತೆ ಸೊಂಡಿಲಿನ ಸಹಾಯದಿಂದ ಬಾಣಲೆಯಲ್ಲಿರುವ ಪದಾರ್ಥವನ್ನು ಸೌಟಿನಿಂದ ತಿರುಗಿಸುವುದು, ಕುಟ್ಟಾಣಿ ಹಿಡಿದು ಕುಟ್ಟುವುದು ಹೀಗೆ ಹಲವು ಕೆಲಸಗಳನ್ನು ಆನೆ ಮಾಡುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ.

ಈ ವಿಡಿಯೊವನ್ನು ಮಿಲಿಯನ್‌ಗಟ್ಟಲೆ ಜನರು ವೀಕ್ಷಿಸಿದ್ದು, ಸಾವಿರಾರು ಜನರು ಕಮೆಂಟುಗಳನ್ನು ಮಾಡಿದ್ದಾರೆ. ಆನೆಯನ್ನು ಪಳಗಿಸಿದ ರೀತಿ ಮತ್ತು ಅದರ ಆಸಕ್ತಿ ಬಗ್ಗೆ ಕೊಂಡಾಡಿದ್ದಾರೆ.

'ಶೆಫ್‌ಗಳಿಗೆ ಮುಂದೆ ತೊಂದರೆ ಕಾದಿದೆ' ಎಂದು ನೆಟ್ಟಿಗರೊಬ್ಬರು ಹಾಸ್ಯ ಮಾಡಿದರೆ, ಆನೆಯನ್ನು ಮಗುವಿನಂತೆ ನೋಡಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಇನ್ನೊಬ್ಬರು ಹೇಳಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಂಸದ ಶೆಟ್ಟರ್ ಸಭೆವಿದ್ಯಾರ್ಥಿಗಳು ಗಣಕೀಕೃತ ಗ್ರಂಥಾಲಯ ಸದುಪಯೋಗ ಪಡಿಸಿಕೊಳ್ಳಬೇಕು: ಡಾ.ಪ್ರವೀಣ ಹುಲ್ಲೋಳಿಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ ಜಾರಿ : ಯಾವ ವಸ್ತುಗಳು ಅಗ್ಗವಾಗಲಿವೆ ? ಯಾವ್ಯಾವುದು ದುಬಾರಿಯೇ ಇರಲಿವೆ ?ಪ್ರಧಾನಿ ನಿವಾಸದಲ್ಲಿ ಬಿಜೆಪಿ ಉನ್ನತ ನಾಯಕರ ಸಭೆ: ಸಂಪುಟ ಪುನಾರಚನೆ ಕುತೂಹಲಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ರಾಜ್ಯದಲ್ಲಿ ಎಸ್‌ಐಆರ್ ಅವಧಿ ವಿಸ್ತರಣೆ: ಆ. 8 ರವರೆಗೆ ಗಣತಿ ನಮೂನೆ ವಿತರಣೆನಮ್ಮ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ದಾರಿದೀಪ: ಪ್ರೊ ಜಯಶ್ರೀ ಅಬ್ಬಿಗೇರಿ ಅಭಿಮತಬಿಡದಿ ಟೌನ್ ಶಿಪ್; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಅಭಯನಾಡಗೀತೆಯಲ್ಲಿ ಬೌದ್ಧ ಪದ | ಸೇರ್ಪಡೆಗೆ ತಜ್ಞರ ಶಿಫಾರಸು-ಪಾರಸಿಕ ಜೈನ ಬೌದ್ಧರುದ್ಯಾನ ಎಂದು ಮಾರ್ಪಡಿಸಿ: ಸರ್ಕಾರಕ್ಕೆ ವರದಿ