Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಂದೇ ಭಾರತ ಎಲ್ಲೆಲ್ಲ ನಿಲ್ಲುತ್ತದೆ ಗೊತ್ತಾ ?

ಬೆಳಗಾವಿ : ಹುಬ್ಬಳ್ಳಿ-ಬೆಳಗಾವಿ-ಪುಣೆ ನಡುವೆ ಹೊಸದಾಗಿ ಆರಂಭವಾಗುತ್ತಿರುವ ವಂದೇ ಭಾರತ್‌ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಈ ಬೆನ್ನೆಲ್ಲೆ ರೈಲು ಸಂಚಾರದ ಅಧಿಕೃತ ವೇಳಾಪಟ್ಟಿಯನ್ನು ನೈರುತ್ಯ ರೈಲ್ವೆ ಬಿಡುಗಡೆ ಮಾಡಿದೆ.

ಈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಹುಬ್ಬಳ್ಳಿಯಿಂದ ಬೆಳಿಗ್ಗೆ ಆರಂಭವಾಗಿ ಪುಣೆ ತಲುಪಿ ಮರು ದಿನ ಹುಬ್ಬಳ್ಳಿಗೆ ಹಿಂದಿರುಗುತ್ತದೆ. ಹುಬ್ಬಳ್ಳಿ - ಪುಣೆ ನಡುವೆ ವಾರದಲ್ಲಿ ಮೂರು ದಿನ, ಪುಣೆ - ಹುಬ್ಬಳ್ಳಿ ನಡುವೆ ತಲಾ ಮೂರು ದಿನ ಮಾತ್ರ ಸಂಚಾರ ಮಾಡಲಿದೆ. ಸದ್ಯ ಈ ಮಾರ್ಗದಲ್ಲಿ ವೇಗವಾಗಿ ಸಂಚರಿಸುವ ಸಂಪರ್ಕ ಕ್ರಾಂತಿ ರೈಲು 10.30 ನಿಮಿಷ ತೆಗೆದುಕೊಳ್ಳುತ್ತದೆ. ಈ ರೈಲು 8 ಗಂಟೆ 30 ನಿಮಿಷಗಳಲ್ಲಿ ಎರಡು ನಗರಗಳ ನಡುವೆ ಸಂಚಾರ ಕಲ್ಪಿಸಲಿದೆ. ಎರಡೂ ರಾಜ್ಯಗಳ 5 ಪ್ರಮುಖ ನಗರಗಳಲ್ಲಿ ಮಾತ್ರ ನಿಲುಗಡೆಯಾಗಲಿದೆ. ಈ ಮೂಲಕ ಎರಡು ರಾಜ್ಯಗಳ ನಡುವೆ ಸಂಚರಿಸುವ ಪ್ರಯಾಣಿಕರಿಗೆ ವೇಗದ ಹಾಗೂ ಅತ್ಯುತ್ತಮ ಪ್ರಯಾಣದ ಅನುಭವ ನೀಡಲಿದೆ.
ಈ ವಂದೇ ಭಾರತ್‌ ರೈಲಿನ ಸಂಚಾರಕ್ಕೆ ಸೆಪ್ಟೆಂಬರ್‌ 16ರಂದು ಅಹ್ಮದಾಬಾದ್‌ನಿಂದ ವರ್ಚುವಲ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಆ ದಿನ ಪುಣೆಯಿಂದ ಹುಬ್ಬಳ್ಳಿಗೆ ವಿಶೇಷ ಸಂಚಾರ ನಡೆಸಲಿದೆ. ಅಧಿಕೃತವಾಗಿ ಪ್ರಯಾಣಿಕರ ಸೇವೆಯು ಸೆಪ್ಟೆಂಬರ್‌ 18 ರಿಂದ ಹುಬ್ಬಳ್ಳಿಯಿಂದ, ಸೆಪ್ಟೆಂಬರ್‌ 19 ರಿಂದ ಪುಣೆಯಿಂದ ಆರಂಭವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಹುಬ್ಬಳ್ಳಿಯಿಂದ ಪುಣೆಗೆ ವಾರದಲ್ಲಿ ಮೂರು ಬಾರಿ ಅಂದರೆ, ಬುಧವಾರ, ಶುಕ್ರವಾರ ಹಾಗೂ ಭಾನುವಾರ ಸಂಚಾರ ನಡೆಸಲಿದೆ.
ಪುಣೆಯಿಂದ ಹುಬ್ಬಳ್ಳಿಗೆ ಗುರುವಾರ, ಶನಿವಾರ ಹಾಗೂ ಸೋಮವಾರ ಈ ರೈಲು ಸಂಚರಿಸಲಿದೆ.

ಹುಬ್ಬಳ್ಳಿ - ಪುಣೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 20669)
ಬೆಳಿಗ್ಗೆ 5 ಕ್ಕೆ ಹುಬ್ಬಳ್ಳಿಯಿಂದ ಆರಂಭ
5.15 - 5.17 - ಧಾರವಾಡ
6.55 - 7.00 - ಬೆಳಗಾವಿ
9.15 - 9.20 - ಮಿರಜ್‌
9.30 - 9.31 - ಸಾಂಗ್ಲಿ
10.35 - 10.37 - ಸತಾರಾ
ಮಧ್ಯಾಹ್ನ 1.30 ಕ್ಕೆ ಪುಣೆ ತಲುಪಲಿದೆ.

ಪುಣೆ - ಹುಬ್ಬಳ್ಳಿ ವಂದೇ ಭಾರತ್‌ ರೈಲು
ಮಧ್ಯಾಹ್ನ - 2.15 ಕ್ಕೆ ಪುಣೆಯಿಂದ ಆರಂಭ
ಸಂಜೆ 4.08 - 4.10 - ಸತಾರಾ
6.10 - 6.12 - ಸಾಂಗ್ಲಿ
6.45 -6.50 - ಮಿರಜ್‌
ರಾತ್ರಿ 8.35 - 8.40 - ಬೆಳಗಾವಿ
10.20 -22 - ಧಾರವಾಡ
10.45 ಕ್ಕೆ ಹುಬ್ಬಳ್ಳಿ ತಲುಪಲಿದೆ.

ಎಷ್ಟು ಸೀಟ್‌ಗಳಿವೆ?
ಈ ರೈಲಿಗೆ 8 ಬೋಗಿಗಳಿರಲಿದ್ದು, 52 ಎಕ್ಸಿಕ್ಯೂಟಿವ್‌ ಕ್ಲಾಸ್‌ ಸೀಟ್‌ಗಳು, 478 ಚೇರ್‌ ಕಾರ್‌ಗಳಿವೆ.

ಪ್ರಾಯೋಗಿಕ ಸಂಚಾರ ಯಶಸ್ವಿ
ಹುಬ್ಬಳ್ಳಿ - ಪುಣೆ ನಡುವೆ ಗುರುವಾರ ವಂದೇ ಭಾರತ್‌ ರೈಲಿನ ಪ್ರಾಯೋಗಿಕ ಸಂಚಾರ ನಡೆಸಿದ್ದು, ಯಶಸ್ವಿಯಾಗಿ ಸಂಚರಿಸಿದೆ. ಬೆಳಗ್ಗೆ 9.30ಕ್ಕೆ ಹುಬ್ಬಳ್ಳಿಯಿಂದ ಸಂಚಾರ ಆರಂಭಿಸಿದ ರೈಲು 11.20ಕ್ಕೆ ಬೆಳಗಾವಿ ತಲುಪಿತು. ಬಳಿಕ ಪುಣೆಗೆ ಸಂಚರಿಸಿತು. ಒಟ್ಟು 558 ಕಿ.ಮೀ ದೂರವನ್ನು 9 ಗಂಟೆ 15 ನಿಮಿಷಗಳಲ್ಲಿ ತಲುಪಿದೆ. 8 ಬೋಗಿಗಳನ್ನು ಹೊಂದಿರುವ ರೈಲು, ಧಾರವಾಡ, ಬೆಳಗಾವಿ, ಮೀರಜ್‌ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ರೈಲು ಗಂಟೆಗೆ 60 ಕಿ.ಮೀ ವೇಗದಲ್ಲಿ ಸಾಗಲಿದೆ.

ಬೆಳಗಾವಿಯಲ್ಲಿ ಸೆಪ್ಟೆಂಬರ್‌ 16 ಕ್ಕೆ ವಿಶೇಷ ಸ್ವಾಗತ:
ಪುಣೆ-ಹುಬ್ಬಳ್ಳಿ ವಂದೇ ಭಾರತ್‌ ರೈಲು 16ರಂದು ಪುಣೆಯಿಂದ ಸಂಜೆ 4.15ಕ್ಕೆ ಹೊರಟು ರಾತ್ರಿ 9ಕ್ಕೆ ಬೆಳಗಾವಿಗೆ ಆಗಮಿಸಲಿದೆ. ಈ ಸಂದರ್ಭದಲ್ಲಿ ಬೆಳಗಾವಿ ರೈಲು ನಿಲ್ದಾಣದಲ್ಲಿಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸ್ವಾಗತಿಸಲಾಗುವುದು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಪಾಲರ ಪತ್ನಿಯ ಆರೋಗ್ಯದಲ್ಲಿ ಏರುಪೇರು :  ದಿಢೀರ್ ಇಂದೋರ್ ಗೆ ತೆರಳಿದ ಗೆಹಲೋಟ್ -ಸಿಎಂ ರಾಜೀನಾಮೆ ಪತ್ರ ಯಾರಿಗೆ ಸಲ್ಲಿಸುತ್ತಾರೆ ?ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರು