Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿ ರೈಲು ನಿಲ್ದಾಣ: ನವೀಕರಣಗೊಂಡ ವಿಶ್ರಾಂತಿ ಕೋಣೆ ಸೇವೆಗೆ ಲಭ್ಯ

ಬೆಳಗಾವಿ : ನೈಋತ್ಯ ರೈಲ್ಚೆಯ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯಾಪ್ತಿಯ ಬೆಳಗಾವಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಅನೇಕ ಉಪಯುಕ್ತ ಸೇವೆಗಳನ್ನು ಪರಿಚಯಿಸಿದೆ. ಈಗ ನಿಲ್ದಾಣದಲ್ಲಿ ಸುಸಜ್ಜಿತ ಡಿಲಕ್ಸ್ ಕೊಠಡಿಗಳು ಹಾಗೂ ಡಾರ್ಮಿಟರಿಯನ್ನು ಒಳಗೊಂಡ ವಿಶ್ರಾಂತಿ ಕೋಣೆಗಳು (Retiring Room) ನವೀಕರಣಗೊಂಡಿದ್ದು, ಪ್ರಯಾಣಿಕರ ಬಳಕೆಗೆ ಮುಕ್ತವಾಗಿವೆ.

ಹವಾನಿಯಂತ್ರಿತ ಐದು ಡಿಲಕ್ಸ್ ಕೊಠಡಿಗಳು ವಿಸ್ತಾರವಾದ, ಆಧುನಿಕ ವಿನ್ಯಾಸದಿಂದ ನಿರ್ಮಿಸಲಾಗಿದ್ದು, ಪ್ರತ್ಯೇಕ ಚಹಾ ಅಥವಾ ಕಾಫಿ ಸೇವೆನೆಗೆ ವ್ಯವಸ್ಥೆ ಮಾಡಲಾಗಿದೆ. 22 ಹಾಸಿಗೆಯುಳ್ಳ ಡಾರ್ಮಿಟರಿಗಳು ಶುಚಿತ್ವವಾಗಿದ್ದು, ನಿತ್ಯ ವಾಶ ಮಾಡಲಾಗುತ್ತದೆ. ಕೊಠಡಿಗಳಲ್ಲಿ ಬಟ್ಟೆ ಬದಲಿಸುವ ಕೋಣೆ, ಪ್ರತೇಕ್ಯ ಲಗೇಜ ಕೊಠಡಿ, ಉತ್ತಮ ಸಾಮೂಹಿಕ ಶೌಚಾಲಯಗಳು ಮತ್ತು ಸ್ನಾನಗೃಹಗಳ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲಿವೆ.
ಈ ಸೇವೆಗಳನ್ನು 3 ಗಂಟೆ, 6 ಗಂಟೆ, 9 ಗಂಟೆ, 12 ಗಂಟೆ, 24 ಗಂಟೆ ಮತ್ತು 48 ಗಂಟೆಗಳ ಕಾಲಾವಧಿಯಂತೆ ಕೊಠಡಿಗಳನ್ನು ಬುಕ್ ಮಾಡಬಹುದು. ವಿಶ್ರಾಂತಿ ಕೋಣೆ (Retiring ) ಶುಲ್ಕ ಡಿಲಕ್ಸ್ ಕೊಠಡಿಗೆ : 3 ಗಂಟೆ – ರೂ 500/-, 6 ಗಂಟೆ – ರೂ 800/-, 9 ಗಂಟೆ – ರೂ 1000/-, 12 ಗಂಟೆ – ರೂ 1200/-, 24 ಗಂಟೆ – ರೂ 2000/-, 48 ಗಂಟೆ – ರೂ 3800/-, ಡಾರ್ಮಿಟರಿ ಶುಲ್ಕ 3 ಗಂಟೆ – ರೂ 300/-, 6 ಗಂಟೆ – ರೂ 400/-, 9 ಗಂಟೆ – ರೂ 500/-, 12 ಗಂಟೆ – ರೂ 600/-, 24 ಗಂಟೆ – ರೂ 800/-, 48 ಗಂಟೆ – ರೂ 1400/- ಸಂದಾಯ ಮಾಡಬೇಕು ಎಂದು ತಿಳಿಸಿದೆ.
ಡಿಲಕ್ಸ್ ಕೊಠಡಿಗಳು ಸಂಪೂರ್ಣ ಹವಾ ನಿಯಂತ್ರಿತ ಸೌಲಭ್ಯ ಹೊಂದಿವೆ. ಪ್ರಯಾಣಿಕರಿಗೆ ಉಚಿತ ವೈ-ಫೈ ಸೌಲಭ್ಯ ದೊರೆಯಲಿದೆ. ಐಆರ್‌ಸಿಟಿಸಿ (IRCTC) ವತಿಯಿಂದ ಲೈಸೆನ್ಸಿ ಪಡೆದ M/S Namah Enterprises ಈ ಸೇವೆಗಳನ್ನು ನಿರ್ವಹಿಸುತ್ತದೆ. ಆನ್ಲೈನ್ ಬುಕ್ಕಿಂಗ್ ಸೇವೆಯು ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಹೆಚ್ಚಿನ ಮಾಹಿತಿಗೆ ಮತ್ತು ಬುಕ್ಕಿಂಗ್‌ಗಾಗಿ ಪ್ರಯಾಣಿಕರು ಐಆರ್‌ಸಿಟಿಸಿ ಪೋರ್ಟಲ್ ಅಥವಾ App ಮೂಲಕ ಸಂಪರ್ಕಿಸಬಹುದು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ರಾಜ್ಯದಲ್ಲಿ ಎಸ್‌ಐಆರ್ ಅವಧಿ ವಿಸ್ತರಣೆ: ಆ. 8 ರವರೆಗೆ ಗಣತಿ ನಮೂನೆ ವಿತರಣೆನಮ್ಮ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ದಾರಿದೀಪ: ಪ್ರೊ ಜಯಶ್ರೀ ಅಬ್ಬಿಗೇರಿ ಅಭಿಮತಬಿಡದಿ ಟೌನ್ ಶಿಪ್; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಅಭಯನಾಡಗೀತೆಯಲ್ಲಿ ಬೌದ್ಧ ಪದ | ಸೇರ್ಪಡೆಗೆ ತಜ್ಞರ ಶಿಫಾರಸು-ಪಾರಸಿಕ ಜೈನ ಬೌದ್ಧರುದ್ಯಾನ ಎಂದು ಮಾರ್ಪಡಿಸಿ: ಸರ್ಕಾರಕ್ಕೆ ವರದಿಭೋಜಶಾಲಾ–ಕಮಾಲ್ ಮೌಲಾ ಪ್ರಕರಣ: ಶುಕ್ರವಾರದ ನಮಾಜ್‌ಗೆ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳ ಕಲ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ2022ರಲ್ಲಿ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸದಂತೆ ರಷ್ಯಾವನ್ನು ತಡೆದದ್ದು ಮೋದಿ : ಪೋಲೆಂಡ್ ಸಚಿವರ ಹೇಳಿಕೆಚೊಚ್ಚಲ ಬಾಹ್ಯಾಕಾಶ ಯಾನ ಕೈಗೊಂಡ ಭಾರತೀಯ ಮೂಲದ ಗಗನಯಾತ್ರಿ ಅನಿಲ ಮೆನನ್ಸಾವೂ ಬೇರ್ಪಡಿಸಲಿಲ್ಲ ಇವರಿಬ್ಬರ ಬಂಧವನ್ನು…; ಯಜಮಾನನ ಶವಯಾತ್ರೆಯಲ್ಲೇ ಪ್ರಾಣ ಬಿಟ್ಟ ನಿಷ್ಠಾವಂತ ನಾಯಿ ʼದುಗ್ಗುʼ