Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

10 ಗಂಟೆ ಒಳಗೆ ಕಚೇರಿಯಲ್ಲಿರಿ

ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಪ್ರತಿದಿನ ಬೆಳಿಗ್ಗೆ 10 ಗಂಟೆ ಒಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅವರು ಸೂಚನೆಯನ್ನು ತಕ್ಷಣದಿಂದಲೇ ಪಾಲಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚಿಸಿದ್ದಾರೆ.

ಅಧಿಕಾರಿಗಳ ಜತೆ ಸಭೆ ನಡೆಸಿದ್ದ ಶಿವಕುಮಾ‌ರ್ ಅವರು, 'ಎಲ್ಲರೂ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರಬೇಕು' ಎಂದು ತಾಕೀತು ಮಾಡಿದ್ದರು.

ಮುಖ್ಯ ಕಾರ್ಯದರ್ಶಿಯು ಈ ಸಂಬಂಧ ಎಲ್ಲ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಎಲ್ಲ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

'ಇ-ಆಡಳಿತ ಇಲಾಖೆಯು ಸಿದ್ಧಪಡಿಸಿರುವ ಕರ್ತವ್ಯ ಆ್ಯಪ್‌ನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯ ವಿವರಗಳನ್ನು ನೋಂದಾಯಿಸಲಾಗಿದೆ. ಆದರೆ, ಹಲವರು ಈ ಆ್ಯಪ್ ಅನ್ನು ಬಳಕೆ ಮಾಡುತ್ತಿಲ್ಲ. ಇನ್ನು ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಯು ಕಚೇರಿಗೆ ಬಂದು ಬೆಳಿಗ್ಗೆ 10ರ ಒಳಗೆ ಆ್ಯಪ್‌ನಲ್ಲಿ 'ಚೆಕ್‌ ಇನ್' ಮಾಡಬೇಕು. ಕಚೇರಿಯಿಂದ ಹೊರಗೆ ಹೋಗುವಾಗ 'ಚೆಕ್ ಔಟ್' ಮಾಡಬೇಕು'

'ಬೆಳಿಗ್ಗೆ 10ರ ಒಳಗೆ ಆ್ಯಪ್‌ನಲ್ಲಿ ಹಾಜರಾತಿ ದಾಖಲಿಸದ ಅಧಿಕಾರಿ ಮತ್ತು ಸಿಬ್ಬಂದಿಯ ಕಚೇರಿವಾರು ಮತ್ತು ಜಿಲ್ಲಾವಾರು ವರದಿಯು ಸ್ವಯಂಚಾಲಿತವಾಗಿ ಇಲಾಖಾ ಮುಖ್ಯಸ್ಥರಿಗೆ ರವಾನೆಯಾಗಲಿದೆ. ಇಲಾಖಾ ಮುಖ್ಯಸ್ಥರು ತಮ್ಮ ವೈಯಕ್ತಿಕ ಲಾಗಿನ್ ಮೂಲಕ ಡ್ಯಾಶ್‌ಬೋರ್ಡ್‌ನಲ್ಲಿ ವಿವರ ಪರಿಶೀಲಿಸಿ, ಸಮಯಕ್ಕೆ ಚೆಕ್ ಇನ್ ಮಾಡದ ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯ ಸೂಚನೆ ನೀಡಬೇಕು' ಎಂದು ತಿಳಿಸಿದ್ದಾರೆ.

'ಕಚೇರಿ ಕರ್ತವ್ಯದ ಮೇಲೆ ಪ್ರವಾಸದಲ್ಲಿದ್ದರೆ, ಕರ್ತವ್ಯ ಆ್ಯಪ್‌ನಲ್ಲಿ ಒಒಡಿ ಆಯ್ಕೆ ಮಾಡಿ ಹಾಜರಾತಿ ದಾಖಲಿಸಬೇಕು. ಮೇಲಧಿಕಾರಿಯು ಅದನ್ನು ದೃಢಪಡಿಸಬೇಕು. ಈ ಎಲ್ಲ ಸೂಚನೆಗಳನ್ನು ಅತ್ಯಂತ ತುರ್ತು ಮತ್ತು ಕಡ್ಡಾಯವೆಂದು ತಕ್ಷಣವೇ ಜಾರಿಗೆ ತರಬೇಕು' ಎಂದು ಸೂಚಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕನ್ನಡ ಸಾಹಿತ್ಯ ಪರಿಷತ್ ಸರ್ಜರಿಗೆ ಹಾರ್ಟ್ ಸರ್ಜನ್ ಬೆಳಗಾವಿ ಮಣ್ಣಿನ ಮಗಳು ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಸಜ್ಜು ಚುನಾವಣೆ ಸ್ಪರ್ಧೆಗೆ ನಿರ್ಧಾರ | ಗೆದ್ದರೆ ಪ್ರಥಮ ಅಧ್ಯಕ್ಷೆ, ತೋಂಟದಾರ್ಯ ಮಠದ ಜಗದ್ಗುರುಗಳು ಬೆಂಬಲಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿಅಯೋಧ್ಯೆ ರಾಮಮಂದಿರದ ಮೊದಲ ಸಿಇಒ ಆಗಿ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರ ನೇಮಕಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿ8 ಜನ ಮೊಬೈಲ್ ಕಳ್ಳರನ್ನು ಬಂಧಿಸಿದ ಕಟಕೋಳ ಪೊಲೀಸರು200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ : ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಮನೆಗೆ ಕರೆತಂದ ಕುಟುಂಬ !ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ್ದ ಅಜ್ಜಿಯ ಬಂಧನಪುತ್ರಿಯರ ಶಿಕ್ಷಣಕ್ಕಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡಿ ʼಮ್ಯಾರಥಾನ್‌ʼನಲ್ಲಿ ಮೊದಲ ಸ್ಥಾನ ಪಡೆದ 47 ವರ್ಷದ ತಾಯಿ !ರಷ್ಯಾ ಅತಿಹೆಚ್ಚು ತೈಲ ಉತ್ಪಾದನೆ ಮಾಡುತ್ತಿದ್ರೂ ಈಗ ಅದಕ್ಕೇ ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್ ಪೂರೈಸುತ್ತಿರುವ ಭಾರತ ! ಕಾರಣ ?ವೈಶ್ಯ ಸಮಾಜದ ಏಕತೆ, ಪ್ರಗತಿಗೆ ಸೆ.6ರಂದು ಬೆಳಗಾವಿಯಲ್ಲಿ ವೈಶ್ಯ ಸಮ್ಮೇಳನ