Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕಾಕತಿ ಪೊಲೀಸರ ಮೇಲೆ ಹಲ್ಲೆ..!

ಕಾಕತಿ ಪೊಲೀಸರ ಮೇಲೆ ಹಲ್ಲೆ..!

ಲಾಠಿ ಕಸಿದುಕೊಂಡು ಪೆದೆ ಮೇಲೆಯೇ ಹಲ್ಲೆ ನಡೆಸಿದ ಯುವಕರು.

ಇನ್ನೂ ಬಂಧನವಾಗದ ಆರೋಪಿಗಳು.

ಬೆಳಗಾವಿ : ಕಾಕತಿ ಗ್ರಾಮದ ಲಕ್ಷ್ಮೀ ನಗರದಲ್ಲಿ ಮುಸ್ಲಿಂ ಸಮುದಾಯದೊಬ್ಬರ ಮದುವೆಯಲ್ಲಿ ಮಧ್ಯರಾತ್ರಿವರೆಗೆ ಡಾಲ್ಬಿ ಹಚ್ಚಿ ಕುಣಿಯುತ್ತಿದ್ದಾಗ ಬೇಸತ್ತ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅನುಮತಿ ಪಡೆಯದೆ ಹಚ್ಚಿದ್ದ ಡಾಲ್ಬಿ ಬಂದ ಮಾಡಲು ಮುಂದಾದಾಗ ಪೊಲೀಸರ ಮೇಲೆ ಸೌಂಡ್ ಸಿಸ್ಟಮ್ ಮಾಲಿಕ ಹಾಗೂ ಯುವಕರು ಸೇರಿಕೊಂಡು ಪೋಲಿಸರ ಕೈಯಲ್ಲಿದ್ದ ಲಾಠಿಯನ್ನು ಕಸಿದುಕೊಂಡು ಪೊಲೀಸರಿಗೆ ಹೊಡೆದಿರುವ ಘಟನೆ ಗುರುವಾರ ನಸುಕಿನ ಜಾವ 12.30 ಘಂಟೆಗೆ ಸಂಭವಿಸಿದೆ.

ಕಾಕತಿ ಲಕ್ಷ್ಮೀ ನಗರದ ನಿವಾಸಿ ವಸಿಂ ಮಕಾಂದರ ಎಂಬುವರು ಮನೆಯ ಮುಂದೆ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ಸಂತೋಷ ಬಂಡಾರಿ ಹಾಗೂ ರಾಘವೇಂದ್ರ ಶ್ರೀಶೈಲ ಲೋಗಾವಿ ಎಂಬುವರು ಪೆಂಡಾಲ್ ಹಾಕಿದ್ದಾರೆ. ಪರಾವಾನಿಗೆ ಪಡೆಯದೆ ಸೌಂಡ್ ಸಿಸ್ಟಮ್ ಹಾಗೂ ಡಾಲ್ಬಿ ಹಚ್ಚಿದ್ದಾರೆ. ರಾತ್ರಿ 12 ಗಂಟೆಯಾದರೂ ಬಂದ ಮಾಡದ ಕಾರಣ ಅಕ್ಕಪಕ್ಕದ ಮನೆಯವರು ಬೆಸತ್ತು ಪೊಲೀಸ್ ಸಹಾಯವಾಣಿ 112 ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ಹೊಯ್ಸಳ ವಾಹನ ಕಾನೂನು ಬಾಹಿರವಾಗಿ ಪರವಾನಿಗೆ ಪಡೆಯದೆ ಹಚ್ಚಿದ್ದ ಡಾಲ್ಬಿ ಬಂದ ಮಾಡಲು ಮುಂದಾಗಿದ್ದ ಕಾಕತಿ ಪೆದೆ ಲತೀಫ್ ಮುಶಾಪೂರೆ ಮೇಲೆ ಸೌಂಡ್ ಸಿಸ್ಟಮ್ ನಡೆಸುತ್ತಿದ್ದ ಸಂತೋಷ ಹಾಗೂ ರಾಘವೇಂದ್ರ ಅವರ ಕೈಯಲ್ಲಿದ್ದ ಲಾಠಿಯನ್ನು ಕಸಿದುಕೊಂಡು ಅವರ ಕುತ್ತೆಗೆಗೆ ಹೊಡೆದು ಹಲ್ಲೆ ಮಾಡಿದ್ದಾರೆ.

ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮದುವೆ ಕಾರ್ಯಕ್ರಮ ಆಯೋಜಕ ವಸಿಂ ಮಕಾಂದರ, ಡಾಲ್ಬಿ ಮಾಲಿಕ ಸಂತೋಷ ಭಂಡಾರಿ ಹಾಗೂ ಜತೆಗಿದ್ದ ರಾಘವೇಂದ್ರ ಲೋಗಾವಿ ಎಂಬುವರ ಮೇಲೆ IPC 353, 324, 332 ಹಾಗೂ KP act 2021 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧನವಾಗದ ಆರೋಪಿಗಳು.

ಪೊಲೀಸರ ಮೇಲೆ ಹಲ್ಲೆ ನಡೆದರೂ ಇಲ್ಲಿಯವರೆಗೆ ಯಾವ ಆರೋಪಿಗಳನ್ನು ಬಧಿಸಲಾಗಿಲ್ಲ. ಕಾಕತಿಯಲ್ಲಿ ಸಾರ್ವಜನಿಕರ ಜೊತೆಗೆ ಪೊಲೀಸರಿಗೂ ರಕ್ಷಣೆ ಇಲ್ಲದಂತಾಗಿದೆ.

ಪೊಲೀಸರಿಗೆ ರಕ್ಷಣೆ ಕೊಡಬೇಕಾಗಿದ್ದ ಇಲಾಖೆ ಡಮ್ಮಿ ಕೇಸ್ ಹಾಕಿ ಪುಂಡರನ್ನು ಕೈ ಬಿಟ್ಟಿದೆ ಎಂದು ಸಿಬ್ಬಂದಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ರಾಜ್ಯದಲ್ಲಿ ಎಸ್‌ಐಆರ್ ಅವಧಿ ವಿಸ್ತರಣೆ: ಆ. 8 ರವರೆಗೆ ಗಣತಿ ನಮೂನೆ ವಿತರಣೆನಮ್ಮ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ದಾರಿದೀಪ: ಪ್ರೊ ಜಯಶ್ರೀ ಅಬ್ಬಿಗೇರಿ ಅಭಿಮತಬಿಡದಿ ಟೌನ್ ಶಿಪ್; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಅಭಯನಾಡಗೀತೆಯಲ್ಲಿ ಬೌದ್ಧ ಪದ | ಸೇರ್ಪಡೆಗೆ ತಜ್ಞರ ಶಿಫಾರಸು-ಪಾರಸಿಕ ಜೈನ ಬೌದ್ಧರುದ್ಯಾನ ಎಂದು ಮಾರ್ಪಡಿಸಿ: ಸರ್ಕಾರಕ್ಕೆ ವರದಿಭೋಜಶಾಲಾ–ಕಮಾಲ್ ಮೌಲಾ ಪ್ರಕರಣ: ಶುಕ್ರವಾರದ ನಮಾಜ್‌ಗೆ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳ ಕಲ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ2022ರಲ್ಲಿ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸದಂತೆ ರಷ್ಯಾವನ್ನು ತಡೆದದ್ದು ಮೋದಿ : ಪೋಲೆಂಡ್ ಸಚಿವರ ಹೇಳಿಕೆಚೊಚ್ಚಲ ಬಾಹ್ಯಾಕಾಶ ಯಾನ ಕೈಗೊಂಡ ಭಾರತೀಯ ಮೂಲದ ಗಗನಯಾತ್ರಿ ಅನಿಲ ಮೆನನ್ಸಾವೂ ಬೇರ್ಪಡಿಸಲಿಲ್ಲ ಇವರಿಬ್ಬರ ಬಂಧವನ್ನು…; ಯಜಮಾನನ ಶವಯಾತ್ರೆಯಲ್ಲೇ ಪ್ರಾಣ ಬಿಟ್ಟ ನಿಷ್ಠಾವಂತ ನಾಯಿ ʼದುಗ್ಗುʼ