Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ATM ಶುಲ್ಕ ಏರಿಕೆ

 

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ಬದಲಾವಣೆ ಮಾಡಿದೆ. ಈ ಪೈಕಿ ಫೆಬ್ರವರಿ 1 ರಿಂದ ಮಾಡಿರುವ ಎರಡು ಬದಲಾವಣೆ ದೇಶದ ಪ್ರತಿಯೊಬ್ಬರಿಗೂ ತಟ್ಟಲಿದೆ. ಪ್ರಮುಖವಾಗಿ ಎಟಿಎಂ ಹಣ ಡ್ರಾ ನಿಯಮ ಹಾಗೂ ಯುಪಿಐ ಪಾವತಿ ವಿಚಾರದಲ್ಲಿ ಬದಲಾವಣೆಯಾಗಿದೆ. ಕೇಂದ್ರ ಬಜೆಟ್ ಮಂಡನೆ ಬೆನ್ನಲ್ಲೇ ದೇಶದಲ್ಲಿ ಎಟಿಎಂ ಡ್ರಾ ಹಾಗೂ ಯುಪಿಐ ಪಾವತಿ ನಿಯಮದಲ್ಲಿ ಮಹತ್ವದ ಬದಲಾವಣೆಯಾಗಿದೆ.

ಕೇಂದ್ರೀಯ ಬಜೆಟ್ ದಿನದಂದು ಸಾಮಾನ್ಯ ಜನರಿಗೆ ಮುಖ್ಯವಾದ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿಗೆ ಸಂಬಂಧಿಸಿದಂತೆ ಹಲವಾರು ನಿಯಮಗಳಲ್ಲಿ ಬದಲಾವಣೆಗಳಾಗಿವೆ. ಶನಿವಾರದಿಂದ ATM ಶುಲ್ಕಗಳು ಹೆಚ್ಚಾಗಿವೆ. ಅಂದರೆ ATM ನಿಂದ ಹಣ ಡ್ರಾ ಮಾಡುವ ಶುಲ್ಕ ಹೆಚ್ಚಾಗಿದೆ. ಹೊಸ ನಿಯಮಗಳ ಪ್ರಕಾರ, ಈಗ ಪ್ರತಿ ತಿಂಗಳು ಕೇವಲ 3 ಬಾರಿ ಮಾತ್ರ ATM ನಿಂದ ಉಚಿತವಾಗಿ ಹಣ ಡ್ರಾ ಮಾಡಬಹುದು. ಇದಾದ ಬಳಿಕ, ಪ್ರತಿ ಹೆಚ್ಚುವರಿ ವಹಿವಾಟಿಗೆ 25 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಆದರೆ ಮೊದಲು ಇದು 20 ರೂಪಾಯಿಗಳಾಗಿತ್ತು. ಯಾರಾದರೂ ತಮ್ಮ ಬ್ಯಾಂಕಿನ ಬದಲು ಬೇರೆ ಬ್ಯಾಂಕಿನ ATM ನಿಂದ ಹಣ ಡ್ರಾ ಮಾಡಿದರೆ, ಪ್ರತಿ ವಹಿವಾಟಿಗೆ 30 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಹೀಗಾಗಿ ಮೂರು ಎಟಿಎಂ ವಹಿವಾಟು ಉಚಿತ. ಅದು ಕೂಡ ತಮ್ಮದೇ ಬ್ಯಾಂಕ್‌ ಎಟಿಎಂನಲ್ಲಿ ಮಾಡಬೇಕು. ಇನ್ನು ಮೂರಕ್ಕಿಂತ ಹೆಚ್ಚಾದರೆ ಶುಲ್ಕ ದುಬಾರಿ, ಬೇರೆ ಬ್ಯಾಂಕ್‌ನಲ್ಲಿ ಡ್ರಾ ಮಾಡಿದರೂ ದುಬಾರಿ. ಈ ಮೂಲಕ ಕೇಂದ್ರ ಸರ್ಕಾರ ಡಿಜಿಟಲ್ ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದರ ಜೊತೆಗೆ ಮತ್ತೊಂದು ಎಟಿಎಂ ಬದಲಾವಣೆ ಎಂದರೆ ಒಂದು ದಿನ ನೀವು ಎಟಿಎಂ ಮೂಲಕ ಗರಿಷ್ಠ 50,000 ರೂಪಾಯಿ ಮಾತ್ರ ಡ್ರಾ ಮಾಡಲು ಸಾಧ್ಯ. ಇದಕ್ಕಿಂತ ಹೆಚ್ಚಿನ ಹಣ ಎಟಿಎಂ ಮೂಲಕ ಡ್ರಾ ಮಾಡುವಂತಿಲ್ಲ. ಹೆಚ್ಚಿನ ಹಣ ಬೇಕಿದ್ದರೆ ಬ್ಯಾಂಕ್ ಶಾಖೆಗೆ ತೆರಳಿ ಚೆಕ್ ಮೂಲಕ ಡ್ರಾ ಮಾಡಿಕೊಳ್ಳಬೇಕು. ಎಟಿಎಂ ಮೂಲಕ ಸಾಧ್ಯವಿಲ್ಲ.

ಯುಪಿಐ ಪಾವತಿ ಬದಲಾವಣೆ
ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಅಥವಾ UPI ವಹಿವಾಟುಗಳಲ್ಲಿಯೂ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಥವಾ NPCI ದೊಡ್ಡ ಬದಲಾವಣೆಗಳನ್ನು ತಂದಿದೆ. ವಿಶೇಷ ಅಕ್ಷರಗಳಾದ @, #, $, ಇತ್ಯಾದಿಗಳನ್ನು ಬಳಸಿ ರಚಿಸಲಾದ UPI ID ಗಳನ್ನು ಫೆಬ್ರವರಿ 1 ರಿಂದ ಸ್ವೀಕರಿಸಲಾಗುವುದಿಲ್ಲ. ಈಗಿನಿಂದ UPI ಬಳಕೆದಾರರು ತಮ್ಮ ID ಗಳನ್ನು ರಚಿಸಲು ವರ್ಣಮಾಲೆಯ ಅಕ್ಷರಗಳನ್ನು ಮಾತ್ರ ಬಳಸಬೇಕಾಗುತ್ತದೆ. ವ್ಯಾವಹಾರಿಕವಾಗಿ ಡಿಜಿಟಲ್ ಪಾವತಿಯ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಬದಲಾವಣೆಯನ್ನು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಸ್ಪೆಷಲ್ ಕ್ಯಾರೆಕ್ಟರ್ ಮೂಲಕ ಐಡಿ ರಚನೆಯಾಗಿರಬಾರದು. ಈ ಮೂಲಕ ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಬಜೆಟ್ ಘೋಷಣೆ ದೇಶದ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ. ಅದರಲ್ಲೂ ಜನಸಾಮಾನ್ಯರಿ ತಟ್ಟುವ ಹಲವು ನೀತಿಗಳ ಬದಲಾವಣೆ, ನಿಯಂತ್ರಣಗಳು ಅರಿವು ಅತ್ಯಗತ್ಯ. ಭಾರತದಲ್ಲಿ ಡಿಜಿಟಲ್ ವ್ಯವಹಾರ ಹೆಚ್ಚಿದ್ದರೂ ಎಟಿಎಂ ಬಳಕೆ ಕಡಿಮೆಯಾಗಿಲ್ಲ. ಜನರು ಎಟಿಎಂ ಮೂಲಕ ಹಣ ಡ್ರಾ ಮಾಡುತ್ತಿದ್ದಾರೆ. ಆದರೆ ಇದೀಗ ಹಣ ಡ್ರಾ ಮಾಡವು ಮೊದಲೇ ನಿಯಮ ಬದಲಾವಣೆ ತಿಳಿದುಕೊಂಡರೆ ವಿನಾಕಾರಣ ಶುಲ್ಕ ಪಾವತಿಸವುದನ್ನು ತಪ್ಪಿಸಬಹುದು. ಇಷ್ಟೇ ಅಲ್ಲ ತುರ್ತು ಸಂದರ್ಭಗಳಲ್ಲಿ ಸಂಕಷ್ಟಕ್ಕೆ ಸಿಲುಕುವುದನ್ನೂ ತಪ್ಪಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಎಟಿಎಂ ಹಾಗೂ ಯುಪಿಐ ಪಾವತಿ ಬಗ್ಗೆ ಪರಿಶೀಲನೆ ಮಾಡಿಕೊಳ್ಳಿ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ರಾಜ್ಯದಲ್ಲಿ ಎಸ್‌ಐಆರ್ ಅವಧಿ ವಿಸ್ತರಣೆ: ಆ. 8 ರವರೆಗೆ ಗಣತಿ ನಮೂನೆ ವಿತರಣೆನಮ್ಮ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ದಾರಿದೀಪ: ಪ್ರೊ ಜಯಶ್ರೀ ಅಬ್ಬಿಗೇರಿ ಅಭಿಮತಬಿಡದಿ ಟೌನ್ ಶಿಪ್; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಅಭಯನಾಡಗೀತೆಯಲ್ಲಿ ಬೌದ್ಧ ಪದ | ಸೇರ್ಪಡೆಗೆ ತಜ್ಞರ ಶಿಫಾರಸು-ಪಾರಸಿಕ ಜೈನ ಬೌದ್ಧರುದ್ಯಾನ ಎಂದು ಮಾರ್ಪಡಿಸಿ: ಸರ್ಕಾರಕ್ಕೆ ವರದಿಭೋಜಶಾಲಾ–ಕಮಾಲ್ ಮೌಲಾ ಪ್ರಕರಣ: ಶುಕ್ರವಾರದ ನಮಾಜ್‌ಗೆ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳ ಕಲ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ2022ರಲ್ಲಿ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸದಂತೆ ರಷ್ಯಾವನ್ನು ತಡೆದದ್ದು ಮೋದಿ : ಪೋಲೆಂಡ್ ಸಚಿವರ ಹೇಳಿಕೆಚೊಚ್ಚಲ ಬಾಹ್ಯಾಕಾಶ ಯಾನ ಕೈಗೊಂಡ ಭಾರತೀಯ ಮೂಲದ ಗಗನಯಾತ್ರಿ ಅನಿಲ ಮೆನನ್ಸಾವೂ ಬೇರ್ಪಡಿಸಲಿಲ್ಲ ಇವರಿಬ್ಬರ ಬಂಧವನ್ನು…; ಯಜಮಾನನ ಶವಯಾತ್ರೆಯಲ್ಲೇ ಪ್ರಾಣ ಬಿಟ್ಟ ನಿಷ್ಠಾವಂತ ನಾಯಿ ʼದುಗ್ಗುʼ