Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸಿ. ಕೆ. ಜೋರಾಪುರ ಅವರ ಗ್ರಂಥ ಲೋಕಾರ್ಪಣೆ ; ರಾಮ ಮಂದಿರ, ಹಿಂದುಗಳನ್ನು ಒಟ್ಟುಗೂಡಿಸಿದ ರಾಷ್ಟ್ರಮಂದಿರ: ಅರವಿಂದ ದೇಶಪಾಂಡೆ

ಬೆಳಗಾವಿ : ರಾಮ ಮಂದಿರದ ಹೋರಾಟದ ದೃಷ್ಟಿಯಿಂದ ಲೇಖಕ ಸಿ. ಕೆ. ಜೋರಾಪುರ ಅವರು ಬರೆದಿರುವ 'ಶ್ರೀರಾಮ ಮಂದಿರದ ಹೋರಾಟಗಳು ಹಾಗೂ ರಾಮಾಯಣ' ಅತ್ಯಂತ ಮಹತ್ವದ ಕೃತಿಯಾಗಿದ್ದು ಇದು ಎಲ್ಲ ಓದುಗರನ್ನು ತಲುಪುವಂತಾಗಬೇಕು. ಅಯೋಧ್ಯೆಯ ರಾಮ ಮಂದಿರ ಕೇವಲ ರಾಮಮಂದಿರವಲ್ಲ. ಹಿಂದುಗಳನ್ನೆಲ್ಲ ಒಂದುಗೂಡಿಸುವ ರಾಷ್ಟ್ರ ಮಂದಿರ ಎಂದು ರಾಷ್ಟ್ರವಾದಿ ಅರವಿಂದ ದೇಶಪಾಂಡೆ ಹೇಳಿದರು.

ನಗರದ ನಾಡಹಬ್ಬ ಉತ್ಸವ ಸಮಿತಿ ಮತ್ತು ಪ್ರಹ್ಲಾದ ಪ್ರಕಾಶನ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೇ 15 ರಂದು ಶಿವಬಸವನಗರದ ಕನ್ನಡ ಭವನದಲ್ಲಿ ಲೇಖಕ ಸಿ. ಕೆ. ಜೋರಾಪುರ ಅವರು ರಚಿಸಿದ 'ಶ್ರೀರಾಮ ಮಂದಿರದ ಹೋರಾಟಗಳು ಮತ್ತು ರಾಮಾಯಣ' ಗ್ರಂಥ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿವೃತ್ತ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಕೃತಿ ಪರಿಚಯಿಸಿ ಶ್ರೀ ರಾಮ ಮಂದಿರ ಸ್ಥಾಪನೆಯ ಸಂಘರ್ಷಣೆಯ ಇತಿಹಾಸ ಮುಂದಿ ಪೀಳಿಗೆಗೆ ಗೊತ್ತಾಗಬೇಕೆಂಬ ಆಸೆಯಿಂದ ವಾಸ್ತವದ ಸಂಗತಿಗಳನ್ನು ಈ ಕೃತಿಯಲ್ಲಿ ಲೇಖಕ ಜೋರಾಪುರ ಅವರು ದಾಖಲಿಸಿದ್ದಾರೆ. ಅತ್ಯಂತ ಉತ್ಕೃಷ್ಟವಾದ ಗ್ರಂಥವಾಗಿದ್ದು ಎಲ್ಲರೂ ಕೊಂಡು ಓದಬೇಕೆಂದು ಹೇಳಿದರು.

ಪಂ. ಪ್ರಮೋದಾಚಾರ್ಯ ಕಟ್ಟಿಯವರು ಮಾತನಾಡಿ, ಜೋರಾಪುರ ಅವರ ಈ ಕೃತಿಯಲ್ಲಿ ರಾಮ ಮಂದಿರದ ಹೋರಾಟದ ಕ್ಷಣಗಳೊಂದಿಗೆ ಸಂಕ್ಷಿಪ್ತವಾಗಿ, ಚಿಂತನಾತ್ಮಕವಾಗಿ ಅಲ್ಲದೇ ರೋಚಕವಾಗಿ ರಾಮಾಯಣವನ್ನು ಸಂಗ್ರಹಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಲೇಖಕ ಜೋರಾಪುರ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ಗ್ರಂಥಾಲಯ ಲೇಖಕರ ಕೃತಿಗಳನ್ನು ಕೊಂಡುಕೊಳ್ಳುವಲ್ಲಿ ನಿರಾಸಕ್ತಿ ತೋರಿಸುತ್ತಿರುವುದು ತುಂಬ ಖೇದದ ಸಂಗತಿ. ಸರಕಾರ ಲೇಖಕರ ಪುಸ್ತಕಗಳನ್ನು ಕೊಂಡುಕೊಳ್ಳುವುದರ ಬರೆಹಗಾರರನ್ನು ಪ್ರೋತ್ಸಾಹಿಸಬೇಕೆಂದು ಕೇಳಿಕೊಂಡರು.

ಬೇರೆ ಬೇರೆ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಮಾಧವಾಚಾರ್ಯ ಆಯಿ, ನಿರುಪಾದಯ್ಯ ಕಲ್ಲೊಳ್ಳಿಮಠ, ಎಲ್. ಎಸ್. ಶಾಸ್ತ್ರಿ, ಹನುಮಂತ ಕೊಂಗಾಲಿ, ಸುರೇಶ ಯಾದವ, ವ್ಹಿ. ಕೆ. ಬಡಿಗೇರ, ಡಾ. ಶಿವು ನಂದಗಾವಿಯವರನ್ನು ಗೌರವಿಸಲಾಯಿತು.

ಕಾರಂಜಿಮಠದ ಪ. ಪೂ. ಗುರುಸಿದ್ಧ ಮಹಾಸ್ವಾಮಿಯವರು ಆಶೀರ್ವಾದ ನುಡಿಗಳನ್ನಾಡಿದರು. ಡಾ. ಎಚ್.ಬಿ. ರಾಜಶೇಖರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಶ್ರೀಮತಿ ಭಾರತಿ ಚೌಧರಿ ಯವರು ಹಾಡಿದ ರಾಷ್ಟ್ರಾಭಿಮಾನ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಆರ್. ಪಿ. ಪಾಟೀಲ ವಂದಿಸಿದರು. ಪ್ರೊ. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು.
ಡಾ. ಬಸವರಾಜ ಜಗಜಂಪಿ, ಪ್ರೊ. ಎಂ.ಎಸ್. ಇಂಚಲ, ಯ. ರು. ಪಾಟೀಲ, ಪ್ರೊ. ಜಿ. ಕೆ. ಕುಲಕರ್ಣಿ, ಅರವಿಂದ ಹುನಗುಂದ, ಜಯತೀರ್ಥ ಸವದತ್ತಿ, ಕೇದಾರ ಜೋರಾಪುರ, ಪ್ರಹ್ಲಾದ ಜೋರಾಪುರ, ಸೋಮಲಿಂಗ ಮಾವಿನಕಟ್ಟಿ, ಪಾಂಡುರಂಗ ಮಾರಿಹಾಳಕರ, ಚಂದ್ರಶೇಖರ ನವಲಗುಂದ ಗುಂಡೇನಟ್ಟಿ ಮಧುಕರ, ಮದನ ಕಣಬೂರ, ಗೀತಾ ಸುತಾರ, ವಿಜಯಾ ಹಿರೇಮಠ, ಸುಜಾತಾ ಉಲ್ಲಾಳ, ಮಹಾದೇವಿ ಹಿರೇಮಠ, ಆನಂದ ಕರನನಿಂಗಣ್ಣವರ, ಸಮೃದ್ಧಿ ಚೌದರಿ, ಕೆ. ತಾನಾಜಿ ಮುಂತಾದ ಗಣ್ಯರು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಪಾಲರ ಪತ್ನಿಯ ಆರೋಗ್ಯದಲ್ಲಿ ಏರುಪೇರು :  ದಿಢೀರ್ ಇಂದೋರ್ ಗೆ ತೆರಳಿದ ಗೆಹಲೋಟ್ -ಸಿಎಂ ರಾಜೀನಾಮೆ ಪತ್ರ ಯಾರಿಗೆ ಸಲ್ಲಿಸುತ್ತಾರೆ ?ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರು