Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಟಿ-20 : ಪಾಕಿಸ್ತಾನವನ್ನೇ ಕೆಡವಿದ ಅಮೆರಿಕ

ಎಳೆಯ ಅಮೆರಿಕ ಕ್ರಿಕೆಟ್ ತಂಡ ಇದೀಗ ಪಾಕಿಸ್ತಾನವನ್ನು ಸದೆ ಬಡಿದು ಅಚ್ಚರಿ ಮೂಡಿಸಿದೆ. ಪಾಕಿಸ್ತಾನ ವಿರುದ್ಧ ಯುಎಇ ಗೆಲುವಿನ ಹಿಂದೆ ತಂಡದಲ್ಲಿರುವ ಭಾರತೀಯ ಮೂಲದ ಆಟಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ. ನಾಯಕ ಮೋನಾಕ್ ಪಟೇಲ್‌ ಬ್ಯಾಟಿಂಗ್‌ನಲ್ಲಿ 50(38) ರನ್ ಗಳಿಸಿದರೆ, ಸೌರಭ್ ನೇತ್ರವಾಲ್ಕರ್ ಬೌಲಿಂಗ್‌ನಲ್ಲಿ 2 ವಿಕೆಟ್ ಪಡೆದು ಮಿಂಚಿದರು. ಸೂಪರ್ ಓವರ್‌ನಲ್ಲಿಯೂ ಪಾಕಿಸ್ತಾನದ ಬ್ಯಾಟರ್‌ಗಳು ನೇತ್ರವಾಲ್ಕರ್ ಎದುರು ನಿಲ್ಲಲು ಸಾಧ್ಯವಾಗಲಿಲ್ಲ. ಮುಂಬೈನಲ್ಲಿ ಜನಿಸಿದ ಸೌರಭ್ ಈ ಹಿಂದೆ ರಣಜಿ ಟ್ರೋಫಿ (2013-14) ಮತ್ತು ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದರು.

ಡಲ್ಲಾಸ್​: ಈಗಷ್ಟೇ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿರುವ ಅಮೆರಿಕ ಹುಬ್ಬೇರಿಸುವ ಸಾಧನೆ ಮಾಡಿದೆ.

ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಟಿ20 ವಿಶ್ವ ಕಪ್​ನ ತನ್ನ ಮೊದಲ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ್ದು, ಕ್ರಿಕೆಟ್​ ಕ್ಷೇತ್ರದಲ್ಲಿ ಕಣ್ಣರಳಿಸುತ್ತಿರುವ ಅಮೆರಿಕ ವಿರುದ್ಧವೇ ಸೋತಿದೆ. ಎ ಗುಂಪಿನ ಈ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿನ ಪಂದ್ಯ ಟೈ ಆದ ಕಾರಣ ಸೂಪರ್​ ಓವರ್​ ಮೊರೆ ಹೋಗಲಾಯಿತು. ಅಂತಿಮವಾಗಿ ಪಾಕಿಸ್ತಾನವನ್ನು ಕಟ್ಟಿ ಹಾಕಿದ ಅಮೆರಿಕದ ತಂಡ ಜಯದ ಕೇಕೆ ಹಾಕಿತು. ಇದು ಅಮೆರಿಕ ತಂಡಕ್ಕೆ ಹಾಲಿ ವಿಶ್ವ ಕಪ್​ನಲ್ಲಿ ಸತತ ಎರಡನೇ ವಿಜಯವಾಗಿದ್ದು ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

ಡಲ್ಲಾಸ್​ನ ಗ್ರ್ಯಾಂಡ್ ಪ್ರೈರಿ ಸ್ಟೇಡಿಯಂನಲ್ಲಿ ಟಾಸ್​ ಗೆದ್ದ ಅಮೆರಿಕ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಬ್ಯಾಟಿಂಗ್ ವೈಫಲ್ಯ ಎದುರಿಸಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 159 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಅಮೆರಿಕದ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 3 ವಿಕೆಟ್​ ನಷ್ಟಕ್ಕೆ 159 ರನ್​ ಬಾರಿಸಿತು. ಕೊನೇ ಓವರ್​ನಲ್ಲಿ ಅಮೆರಿಕಕ್ಕೆ 15 ರನ್​ ಗೆಲುವಿಗೆ ಬೇಕಾಗಿತ್ತು. ಆದರೆ, 14 ರನ್ ಬಾರಿಸಿದ ಕಾರಣ ಸೂಪರ್​ ಓವರ್​ ಅನಿವಾರ್ಯವಾಯಿತು.

ಅನುಭವಿ ಬೌಲರ್​ ಮೊಹಮ್ಮದ್ ಅಮೀರ್​ ದಾಳಿಯನ್ನು ಎದುರಿಸಿದ ಅಮೆರಿಕ ತಂಡ ಒಂದು ಓವರ್​ನಲ್ಲಿ 19 ರನ್ ಬಾರಿಸಿತು. ಇದನ್ನು ಬೆನ್ನಟ್ಟಲು ಹೊರಟ ಪಾಕಿಸ್ತಾನ 1 ವಿಕೆಟ್ ನಷ್ಟ ಮಾಡಿಕೊಂಡು ಕೇವಲ 13 ರನ್ ಬಾರಿಸಿ ಐದು ರನ್​ಗಳ ಪರಾಜಯಕ್ಕೆ ಗುರಿಯಾಯಿತು.

ಪಾಕಿಸ್ತಾನ ತಂಡಕ್ಕೆ ಇದು ಹಾಲಿ ವಿಶ್ವ ಕಪ್​ನಲ್ಲಿ ಮೊದಲ ಪಂದ್ಯವಾಗಿತ್ತು. ಅದರಲ್ಲೇ ಸೋಲುವ ಮೂಲಕ ಹೀನಾಯ ಅರಂಭ ಮಾಡಿತು. ಅದೂ ಅಮೆರಿಕದ ವಿರುದ್ಧ ಸೋಲುವ ಮೂಲಕ ಇದ್ದ ಮರ್ಯಾದೆಯನ್ನೂ ಕಳೆದುಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಪವರ್ ಪ್ಲೇನಲ್ಲಿ 30 ರನ್ ಗಳಿಸಿ ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್ ಮತ್ತು ಉಸ್ಮಾನ್ ಖಾನ್ ಅವರ ವಿಕೆಟ್ ಗಳನ್ನು ಕಳೆದುಕೊಂಡಿತು. ಮತ್ತೊಂದೆಡೆ ನಾಯಕ ಬಾಬರ್ ಅಝಾಮ್ ಒತ್ತಡದಲ್ಲಿ ಉತ್ತಮ ಆರಂಭ ನೀಡಿದರು. ಬಾಬರ್ ಮತ್ತು ಶದಾಬ್ ಖಾನ್ ನಾಲ್ಕನೇ ವಿಕೆಟ್​ಗೆ 8 ಓವರ್​ಗಳಲ್ಲಿ 72 ರನ್​ಗಳ ಜೊತೆಯಾಟ ನೀಡಿದರು.

ಶದಾಬ್ 25 ಎಸೆತಗಳಲ್ಲಿ 4 ಮತ್ತು 3 ಸಿಕ್ಸರ್​ಗಳೊಂದಿಗೆ 40 ರನ್ ಗಳಿಸಿದರು. ಬಾಬರ್ 23 ಎಸೆತಗಳಲ್ಲಿ 44 ರನ್ ಸಿಡಿಸಿ ಔಟಾದರು. ನಂತರ ಫಾರ್ಮ್​ನಲ್ಲಿ ಇಲ್ಲದ ಅಜಂ ಖಾನ್ ಗೋಲ್ಡನ್ ಡಕ್ಗೆ ಕಳುಹಿಸಿದರು.

ಅಮೆರಿಕ ಪರ ಮಿಂಚಿದ ಮೊನಾಂಕ್​
ಗುರಿ ಬೆನ್ನಟ್ಟಿದ ಅಮೆರಿಕ ಪರ 38 ಎಸೆತಗಳಲ್ಲಿ 50 ರನ್ ಗಳಿಸಿದ ಮೊನಾಂಕ್ ಮಿಂಚಿದರು. ಕೊನೆಯ ಓವರ್​ನಲ್ಲಿ 12 ರನ್​ಗಳ ಅಗತ್ಯವಿದ್ದಾಗ ಮಿಂಚಿದ ಜೋನ್ಸ್ 11 ರನ್ ಗಳಿಸಿದರು. ಅವರು 26 ಎಸೆತಗಳಲ್ಲಿ 36 ರನ್ ಗಳಿಸಿ ಔಟಾಗದೆ ಉಳಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ರಾಜ್ಯದಲ್ಲಿ ಎಸ್‌ಐಆರ್ ಅವಧಿ ವಿಸ್ತರಣೆ: ಆ. 8 ರವರೆಗೆ ಗಣತಿ ನಮೂನೆ ವಿತರಣೆನಮ್ಮ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ದಾರಿದೀಪ: ಪ್ರೊ ಜಯಶ್ರೀ ಅಬ್ಬಿಗೇರಿ ಅಭಿಮತಬಿಡದಿ ಟೌನ್ ಶಿಪ್; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಅಭಯನಾಡಗೀತೆಯಲ್ಲಿ ಬೌದ್ಧ ಪದ | ಸೇರ್ಪಡೆಗೆ ತಜ್ಞರ ಶಿಫಾರಸು-ಪಾರಸಿಕ ಜೈನ ಬೌದ್ಧರುದ್ಯಾನ ಎಂದು ಮಾರ್ಪಡಿಸಿ: ಸರ್ಕಾರಕ್ಕೆ ವರದಿಭೋಜಶಾಲಾ–ಕಮಾಲ್ ಮೌಲಾ ಪ್ರಕರಣ: ಶುಕ್ರವಾರದ ನಮಾಜ್‌ಗೆ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳ ಕಲ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ2022ರಲ್ಲಿ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸದಂತೆ ರಷ್ಯಾವನ್ನು ತಡೆದದ್ದು ಮೋದಿ : ಪೋಲೆಂಡ್ ಸಚಿವರ ಹೇಳಿಕೆಚೊಚ್ಚಲ ಬಾಹ್ಯಾಕಾಶ ಯಾನ ಕೈಗೊಂಡ ಭಾರತೀಯ ಮೂಲದ ಗಗನಯಾತ್ರಿ ಅನಿಲ ಮೆನನ್ಸಾವೂ ಬೇರ್ಪಡಿಸಲಿಲ್ಲ ಇವರಿಬ್ಬರ ಬಂಧವನ್ನು…; ಯಜಮಾನನ ಶವಯಾತ್ರೆಯಲ್ಲೇ ಪ್ರಾಣ ಬಿಟ್ಟ ನಿಷ್ಠಾವಂತ ನಾಯಿ ʼದುಗ್ಗುʼ