Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಿದ್ಯಾರ್ಥಿಗಳ ನೆಚ್ಚಿನ 'ಸಮೋಸ ಅಜ್ಜ' ಇನ್ನು ಕೇವಲ ನೆನಪು

ಮಂಗಳೂರು: ನಗರದ ಸಂತ ಅಲೋಶಿಯಸ್‌ ಕಾಲೇಜು ಕ್ಯಾಂಪಸ್‌ನಲ್ಲಿ ಕಳೆದ 40 ವರ್ಷಗಳಿಂದ ಸಮೋಸ ಮಾರುತ್ತಲೇ ವಿದ್ಯಾರ್ಥಿಗಳಿಂದ 'ಸಮೋಸ ಅಜ್ಜ' ಎಂದೇ ಕರೆಸಿಕೊಳ್ಳುತ್ತಿದ್ದ ಬಾದಾಮಿ ಮೂಲದ ಮಧುಕೇಶ್ವ‌ರ ಮಲ್ಲಿಕಾರ್ಜುನ ಮುಡೆಯಪ್ಪ ಮಳಗಿ (84) ವಯೋಸಹಜ ಅಸೌಖ್ಯದಿಂದ ನಿಧನರಾಗಿದ್ದಾರೆ. ಸುಮಾರು 40 ವರ್ಷಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಿಂದ ಅಳಿಯನೊಂದಿಗೆ ಮಳಗಿಯಿಂದ ಇವರು ಮಂಗಳೂರಿಗೆ ಬಂದಿದ್ದರು. ಬಾವುಟಗುಡ್ಡೆಯ ಅಲೋಶಿಯಸ್‌ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸಮೋಸ ಮಾರಲು ಆರಂಭಿಸಿದ್ದರು. ನಗುಮುಖದೊಂದಿಗೆ ಬಿಸಿ ಬಿಸಿ ಸಮೋಸ ಕೊಡುತ್ತಿದ್ದ ಕಾರಣಕ್ಕೆ ಬಹುಬೇಗನೆ ವಿದ್ಯಾರ್ಥಿಗಳನ್ನು ಆಕರ್ಷಿಸಿದ್ದರು. ದಿನವೂ ಮಧ್ಯಾಹ್ನ, ಸಂಜೆ ಅಲೋಶಿಯಸ್ ಕಾಲೇಜು ಆವರಣದಲ್ಲಿ ತಿಂಡಿಗಳನ್ನು ಮಾರುತ್ತಿದ್ದರಿಂದ ಮಕ್ಕಳಿಗೆ ನೆಚ್ಚಿನ ತಾತನೂ ಆಗಿದ್ದರು.

ಮಲ್ಲಿಕಾರ್ಜುನ ಅವರು ಪತ್ನಿಯೊಂದಿಗೆ ಮಂಗಳೂರಿನ ಕಾವೂರಿನಲ್ಲಿ ನೆಲೆಸಿದ್ದರು. ಇವರಿಗೆ ನಾಲ್ವರು ಮಕ್ಕಳಿದ್ದು, ಎಲ್ಲರೂ ಉದ್ಯೋಗದಲ್ಲಿದ್ದಾರೆ. ಆದರೂ ಇವರು ಮಾತ್ರ ವಯಸ್ಸಾದರೂ ವೃತ್ತಿಗೆ ನಿವೃತ್ತಿ ಕೊಡದೆ ನಿತ್ಯವೂ ತನ್ನ ಕಾಯಕ ನಡೆಸುತ್ತಿದ್ದರು.

ನಗು ಮುಖದೊಂದಿಗೆ ಬಿಸಿ ಬಿಸಿ ಸಮೋಸ ಕೊಡುತ್ತಿದ್ದ ಕಾರಣಕ್ಕೆ ಬಹುಬೇಗನೆ ವಿದ್ಯಾರ್ಥಿಗಳ ಪಾಲಿಗೆ ಇವರು ಆಕರ್ಷಣೆಯ ಕೇಂದ್ರಬಿಂದು ಆಗಿದ್ದರು. ನಂತರ ಸಮೋಸ ಜೊತೆಗೆ ಚಿಕ್ಕಿ, ನೆಲಗಡಲೆ, ಜಿಲೇಬಿ, ಬರ್ಫಿಗಳನ್ನು ಮಾರತೊಡಗಿದರು. ದಿನವೂ ಸಂಜೆ ಮತ್ತು ಕಾಲೇಜು ಆವರಣದಲ್ಲಿ ತಿಂಡಿಗಳನ್ನು ಮಾರುತ್ತಲೇ ಮಕ್ಕಳಿಗೆ ನೆಚ್ಚಿನ ತಾತ ಆಗಿದ್ದರು. ಅವರ ಮಗ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ ಅಜ್ಜ ಮಾತ್ರ ದಿನವೂ ಸಮೋಸ ಮಾರುವುದನ್ನೇ ಕೆಲಸ ಮಾಡಿಕೊಂಡಿದ್ದರು. 10 ವರ್ಷಗಳ ಹಿಂದೆ ದೆಹಲಿಯಲ್ಲಿ ಅಣ್ಣಾ ಹಜಾರೆ ಧರಣಿ ನಡೆಸಿದ್ದರು. ಅದೇ ಸಂದರ್ಭದಲ್ಲಿ ಅಣ್ಣಾ ಹಜಾರೆಯಂತೆ ಇದ್ದ ಇವರನ್ನು ವಿದ್ಯಾರ್ಥಿಗಳು ಅಣ್ಣಾ ಅಜ್ಜ ಎಂದು ಕರೆತೊಡಗಿದರು. ತಲೆಗೆ ಗಾಂಧಿ ಟೋಪಿ, ಕನ್ನಡಕ, ಬಿಳಿ ಜುಬ್ಬಾ ಮತ್ತು ಬಿಳಿ ಕಚ್ಚೆಯನ್ನು ಧರಿಸಿ ಅಪ್ಪಟ ಗಾಂಧಿಯಂತೆ ಕಾಣುತ್ತಿದ್ದರು. ಹಣೆಗೊಂದು ನಾಮವು ಅವರ ಹೆಗುರುತಾಗಿತ್ತು. ಹೀಗಾಗಿ ನೋಡಲು ಬಹುತೇಕ ಅಣ್ಣಾ ಹಜಾರೆ ಅವರಂತೆ ಕಾಣುತ್ತಿದ್ದರು. ಅವರು ತಮ್ಮ ವೃತ್ತಿಗೆ ಮಾತ್ರ ನಿವೃತ್ತಿ ನೀಡಿರಲಿಲ್ಲ. ದಿನವೂ ಮಧ್ಯಾಹ್ನ ಊಟದ ಸಮಯಕ್ಕೆ ಮತ್ತು ಶಾಲೆ ಬಿಡುವ ಸಂದರ್ಭದಲ್ಲಿ ತಿಂಡಿ ಮಾರುತ್ತಿದ್ದರು. ವಿದ್ಯಾರ್ಥಿಗಳು ಸಮೋಸ ಅಜ್ಜ, ಚಿಕ್ಕಿ ಅಜ್ಜ, ಶೇಂಗಾ ಅಜ್ಜ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?