Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

2026ರ ಚುನಾವಣೆಗೂ ಮುನ್ನ ಎಐಎಡಿಎಂಕೆ ಒಗ್ಗೂಡಬೇಕು: ಶಶಿಕಲಾ

ಚೆನ್ನೈ: ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ ಜನ್ಮ ದಿನಾಚರಣೆಯಂದು ಎಐಎಡಿಎಂಕೆ ಬಣಗಳ ನಾಯಕರು ವಿಲೀನಕ್ಕೆ ಧ್ವನಿ ಎತ್ತಿದ್ದಾರೆ.

ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಎಐಎಡಿಎಂಕೆ ಬಣಗಳ ವಿಲೀನಕ್ಕೆ ಎಐಎಡಿಎಂಕೆಯ ಪದಚ್ಯುತ ಮಧ್ಯಂತರ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಮನವಿ ಮಾಡಿದ್ದಾರೆ.

ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನ ಎಐಎಡಿಎಂಕೆಯನ್ನು ನೋಡಲು ಬಯಸುತ್ತಾರೆ. ಪಕ್ಷದ ಚುನಾವಣಾ ನಿರೀಕ್ಷೆಗಳು ಅದರ ವಿಲೀನದ ಮೇಲೆ ಅವಲಂಬಿತವಾಗಿದೆ ಎಂದು ಅವರು ಪುನರುಚ್ಚರಿಸಿದರು.

2026ರ ವಿಧಾನಸಭೆ ಚುನಾವಣೆಗೂ ಮುನ್ನ ಎಐಎಡಿಎಂಕೆಯ ವಿವಿಧ ಬಣಗಳು ಒಂದುಗೂಡಬೇಕೆಂಬುದು ಎಲ್ಲರ ಬಯಕೆಯಾಗಿದೆ. ನನಗೂ ಅದು ಆಗಬೇಕು ಎನಿಸುತ್ತದೆ ಎಂದು ಶಶಿಕಲಾ ಪತ್ರಕರ್ತರಿಗೆ ತಿಳಿಸಿದ್ದಾರೆ.

ವಿಲೀನ ಸಾಧ್ಯತೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಶಿಕಲಾ, ತಿರಸ್ಕರಿಸುವುದು ಅತ್ಯಂತ ಸುಲಭದ ಕೆಲಸ. ಆದರೆ, ಎಲ್ಲರನ್ನೂ ಒಗ್ಗೂಡಿಸುವುದು ಕಷ್ಟದ ಕೆಲಸ. ಅದಕ್ಕೆ ಸ್ವಲ್ಪ ಸಮಯವಾಗುತ್ತದೆ ಎಂದಿದ್ದಾರೆ.

ಡಿಎಂಕೆ ಆಡಳಿತ ಅಂತ್ಯಗೊಳಿಸುವುದು ಮತ್ತು ಅಮ್ಮ(ಜಯಲಲಿತಾ) ಮಾದರಿ ಆಡಳಿತವನ್ನು ಮರುಸ್ಥಾಪಿಸುವುದು ಎಐಎಡಿಎಂಕೆ ಗುರಿಯಾಗಿದೆ. ನನ್ನ ಕೆಲಸ ಪಕ್ಷದ ಒಗ್ಗೂಡುವಿಕೆ ಮತ್ತು ಗೆಲುವು ಸಾಧಿಸುವತ್ತ ಆಗಿರುತ್ತದೆ ಎಂದಿದ್ದಾರೆ.

ಹಿಂದೆ ಆಗಿದ್ದಾಯ್ತು.. ಮುಂದೆ ಒಳ್ಳೆಯ ಉದ್ದೇಶದೊಂದಿಗೆ ಮುನ್ನಡೆಯೋಣ ಎಂದು ಅಣ್ಣಾದೊರೈ ಚಿತ್ರವಿರುವ ಪಕ್ಷದ ಧ್ವಜವನ್ನು ಹಿಡಿದು ಶಶಿಕಲಾ ಹೇಳಿದರು.

ಎಐಎಡಿಎಂಕೆ ಹಿರಿಯ ನಾಯಕ ಕೆ.ಎ. ಸೆಂಗೋಟ್ಟೆಯನ್ ಸಹ ಇದೇ ಮಾತುಗಳನ್ನಾಡಿದ್ದು, ಇಂದು ನನಗೆ ಅಣ್ಣಾದೊರೈ ಅವರ ಬಂಗಾರದ ಮಾತು ನೆನಪಾಗುತ್ತಿದೆ. ಅದೇನೆಂದರೆ, ನಾವು ಪರಸ್ಪರ ಆಗಿರುವುದನ್ನು ಮರೆತು ಕ್ಷಮಿಸೋಣ. ನಾವು ಮುಂದುವರಿಯಬೇಕಾದ ಮಾರ್ಗ ಅದು ಎಂದಿದ್ದಾರೆ.

'ಎಐಎಡಿಎಂಕೆ ಬಲಗೊಳ್ಳಲು ಒಗ್ಗೂಡಬೇಕು ಎಂಬ ನನ್ನ ಅಭಿಪ್ರಾಯವನ್ನು ಸೆಪ್ಟೆಂಬರ್ 5ರಂದು ಈರೋಡ್‌ನಲ್ಲಿ ವರದಿಗಾರರಿಗೆ ತಿಳಿಸಿದ್ದೇನೆ' ಎಂದು ಸೆಂಗೋಟ್ಟೆಯನ್ ಹೇಳಿದರು. ಪಕ್ಷದ ನಾಯಕರಾದ ಎಂಜಿಆ‌ರ್ ಮತ್ತು ಜಯಲಲಿತಾ ಅವರ ಕನಸನ್ನು ನನಸಾಗಿಸುವ ಅಗತ್ಯತೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದೇನೆ ಎಂದು ಹೇಳಿದರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಪಾಲರ ಪತ್ನಿಯ ಆರೋಗ್ಯದಲ್ಲಿ ಏರುಪೇರು :  ದಿಢೀರ್ ಇಂದೋರ್ ಗೆ ತೆರಳಿದ ಗೆಹಲೋಟ್ -ಸಿಎಂ ರಾಜೀನಾಮೆ ಪತ್ರ ಯಾರಿಗೆ ಸಲ್ಲಿಸುತ್ತಾರೆ ?ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರು