Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ

ರಾಮನಗರ: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣದಲ್ಲಿರುವ ಕಾವೇರಿ ಜಲ್ಲಿ ಕ್ರಷರ್‌ನಲ್ಲಿ ಗುರುವಾರ ನಡೆದಿದೆ. ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರ ಶವಗಳನ್ನು ಹೊರತೆಗೆಯುವ ಕಾರ್ಯಾಚರಣೆ ಆರಂಭವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ತಾವರೆಕೆರೆ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಮೃತರೆಲ್ಲರೂ ದಿನಗೂಲಿ ಕಾರ್ಮಿಕರಾಗಿದ್ದು, ಕ್ರಷರ್ ಬಳಿಯೇ ವಾಸಿಸುತ್ತಿದ್ದರು ಎನ್ನಲಾಗಿದೆ. ಬೆಳಿಗ್ಗೆ 7.30ರ ಸುಮಾರಿಗೆ ಎಂದಿನಂತೆ ಕೆಲಸದಲ್ಲಿ ತೊಡಗಿದ್ದಾಗ ಘಟನೆ ಸಂಭವಿಸಿದೆ.

ಗಾಯಾಳುಗಳನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಬೆಳಿಗ್ಗೆ 7.30ರ ಸುಮಾರಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ, ಇಟಾಚಿ ಮೇಲಿನಿಂದ ಹಠಾತ್ತಾಗಿ ಬಂಡೆ ಕುಸಿದು ಬಿದ್ದಿತ್ತು. ಬಂಡೆಯ ಕೆಳಗೆ ಇನ್ನಷ್ಟು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಯಾಚರಣೆ ನಡೆಯುತ್ತಿದೆ.

ಕ್ರಷರ್ ಆನಂದಸ್ವಾಮಿ ಎಂಬುವವರಿಗೆ ಸೇರಿದೆ ಎಂದು ತಿಳಿದುಬಂದಿದ್ದು, ಪೊಲೀಸರು ಮಾಲಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಂಸದ ಶೆಟ್ಟರ್ ಸಭೆವಿದ್ಯಾರ್ಥಿಗಳು ಗಣಕೀಕೃತ ಗ್ರಂಥಾಲಯ ಸದುಪಯೋಗ ಪಡಿಸಿಕೊಳ್ಳಬೇಕು: ಡಾ.ಪ್ರವೀಣ ಹುಲ್ಲೋಳಿಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ ಜಾರಿ : ಯಾವ ವಸ್ತುಗಳು ಅಗ್ಗವಾಗಲಿವೆ ? ಯಾವ್ಯಾವುದು ದುಬಾರಿಯೇ ಇರಲಿವೆ ?ಪ್ರಧಾನಿ ನಿವಾಸದಲ್ಲಿ ಬಿಜೆಪಿ ಉನ್ನತ ನಾಯಕರ ಸಭೆ: ಸಂಪುಟ ಪುನಾರಚನೆ ಕುತೂಹಲಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ಬೆಳಗಾವಿ ಡಿಸಿ ಆಗಿ ಕಾರ್ಯ ನಿರ್ವಹಿಸಿದ್ದ ಜಯರಾಮ್ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸದಸ್ಯರಾಗಿ ನೇಮಕ ರಾಜ್ಯದಲ್ಲಿ ಎಸ್‌ಐಆರ್ ಅವಧಿ ವಿಸ್ತರಣೆ: ಆ. 8 ರವರೆಗೆ ಗಣತಿ ನಮೂನೆ ವಿತರಣೆನಮ್ಮ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ದಾರಿದೀಪ: ಪ್ರೊ ಜಯಶ್ರೀ ಅಬ್ಬಿಗೇರಿ ಅಭಿಮತಬಿಡದಿ ಟೌನ್ ಶಿಪ್; ಯಾರ ಜಮೀನನ್ನೂ ಬಲವಂತವಾಗಿ ಪಡೆಯುವುದಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಅಭಯನಾಡಗೀತೆಯಲ್ಲಿ ಬೌದ್ಧ ಪದ | ಸೇರ್ಪಡೆಗೆ ತಜ್ಞರ ಶಿಫಾರಸು-ಪಾರಸಿಕ ಜೈನ ಬೌದ್ಧರುದ್ಯಾನ ಎಂದು ಮಾರ್ಪಡಿಸಿ: ಸರ್ಕಾರಕ್ಕೆ ವರದಿ