Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

2025 ರಲ್ಲಿ 4 ಗ್ರಹಣ: ಭಾರತದಲ್ಲಿ ಒಂದು ಮಾತ್ರ ಗೋಚರ

ಇಂಧೋರ್: 2025ರಲ್ಲಿ 4 ಗ್ರಹಣಗಳು ಸಂಭವಿಸಲಿದ್ದು, ಭಾರತದಲ್ಲಿ ಒಂದು ಮಾತ್ರ ಗೋಚರಿಸಲಿದೆ ಎಂದು ಉಜೈನ್ ಮೂಲದ ಜಿವಾಜಿ ವೀಕ್ಷಣಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಚಂದ್ರಗ್ರಹಣ ಮತ್ತು ಎರಡು ಸೂರ್ಯಗ್ರಹಣ ಸಂಭವಿಸಲಿದ್ದು, ಮಾರ್ಚ್ 14 ರಿಂದ ಸಂಪೂರ್ಣ ಚಂದ್ರಗ್ರಹಣ ನಡೆಯಲಿದೆ. ಇದು ಬೆಳಗಿನ ವೇಳೆ ಸಂಭವಿಸುವುದರಿಂದ ಭಾರತದಲ್ಲಿ ಗೋಚರಿಸುವುದಿಲ್ಲ ಎಂದು ವೀಕ್ಷಣಾಲಯದ ಅಧೀಕ್ಷಕ ಡಾ. ರಾಜೇಂದ್ರ ಪ್ರಕಾಶ್ ಗುಪ್ತಾ ಹೇಳಿದ್ದಾರೆ.

ಅಮೆರಿಕ, ಪಶ್ಚಿಮ ಯೂರೋಪ್, ಪಶ್ಚಿಮ ಆಫ್ರಿಕಾ ಮತ್ತು ದಕ್ಷಿಣ ಹಾಗೂ ಉತ್ತರ ಅಂಟ್ಲಾಮಟಿಕ್ ಮಹಾಸಾಗರದ ಬಳಿ ಸಂಪೂರ್ಣ ಗ್ರಹಣ ಗೋಚರಿಸಲಿದೆ.

ಮಾರ್ಚ್ 29 ರಂದು ಭಾಗಶಃ ಸೂರ್ಯಗ್ರಹಣ ಇರುತ್ತದೆ. ಭಾರತದಲ್ಲಿ ಕಾಣುವುದಿಲ್ಲ. ಉತ್ತರ ಅಮೆರಿಕ, ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್, ಉತ್ತರ ಅಟ್ಲಾಂಟಿಕ್ ಮಹಾಸಾಗರ, ಇಡೀ ಯುರೋಪ್ ಮತ್ತು ವಾಯುವ್ಯ ರಷ್ಯಾದಲ್ಲಿ ಗ್ರಹಣ ಗೋಚರಿಸಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸೆಪ್ಟೆಂಬರ್ 7 ಮತ್ತು 8ರ ನಡುವೆ ಸಂಭವಿಸುವ ಪೂರ್ಣ ಚಂದ್ರಗ್ರಹಣವು ದೇಶದಲ್ಲಿ ಗೋಚರಿಸುತ್ತದೆ ಎಂಬ ಅಂಶದಿಂದ ಭಾರತೀಯ ಖಗೋಳ ಪ್ರೇಮಿಗಳು ಉತ್ಸುಕರಾಗಬಹುದು. ಇದು ಏಷ್ಯಾದ ಇತರ ದೇಶಗಳ ಜೊತೆಗೆ ಯುರೋಪ್, ಅಂಟಾರ್ಟಿಕಾ, ಪಶ್ಚಿಮ ಪೆಸಿಫಿಕ್ ಮಹಾಸಾಗರ, ಆಸ್ಟ್ರೇಲಿಯಾ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿಯೂ ಗೋಚರಿಸುತ್ತದೆ'ಎಂದು ಗುಪ್ತಾ ಹೇಳಿದ್ದಾರೆ.

2025ರ ಕೊನೆಯ ಗ್ರಹಣವು ಸೆಪ್ಟೆಂಬರ್ 21 ಮತ್ತು 22ರ ನಡುವೆ ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ಭಾರತದಲ್ಲಿ ಈ ಖಗೋಳ ವಿಸ್ಮಯ ವೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಈ ಭಾಗಶಃ ಸೂರ್ಯಗ್ರಹಣವು ನ್ಯೂಜಿಲೆಂಡ್, ಪೂರ್ವ ಮೆಲನೇಷಿಯಾ, ದಕ್ಷಿಣ ಪಾಲಿನೇಷ್ಯಾ ಮತ್ತು ಪಶ್ಚಿಮ ಅಂಟಾರ್ಟಿಕಾದಲ್ಲಿ ಗೋಚರಿಸುತ್ತದೆ' ಎಂದು ತಿಳಿಸಿದ್ದಾರೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?